ಪರಿಷತ್ ಸದಸ್ಯ ರಘು ಆಚಾರ್  ವಿರುದ್ಧ ಬಿಜೆಪಿ ದೂರು ದಾಖಲು
ಮೈಸೂರು

ಪರಿಷತ್ ಸದಸ್ಯ ರಘು ಆಚಾರ್ ವಿರುದ್ಧ ಬಿಜೆಪಿ ದೂರು ದಾಖಲು

March 30, 2019

ಮೈಸೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ವಿರುದ್ಧ ಬಿಜೆಪಿ ದೂರು ನೀಡಿದೆ. ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಅವರು, ಕರ್ನಾಟಕ ಕಂಡ ಧೀಮಂತ ನಾಯಕ ದೇವರಾಜ ಅರಸು ಅವರ ವಿರುದ್ಧ ಮಾತನಾಡಿದ್ದಾರೆಂದು ರಘು ಆಚಾರ್ ಸುದ್ದಿ ಗೋಷ್ಠಿಯಲ್ಲಿ ಕಪೋಲ ಕಲ್ಪಿತ ಆರೋಪ ಮಾಡಿದ್ದಾರೆ. ಈ ಮೂಲಕ ಕ್ಷೇತ್ರದ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ಪ್ರತಾಪ ಸಿಂಹ ಪಕ್ಷ ಹಾಗೂ ಜಾತಿಯ ಹೆಸರಿನಲ್ಲಿ ಸ್ಫರ್ಧಿಸಿದ್ದಾರೆಂದು ಹೇಳುವ ಮೂಲಕ ಚುನಾ ವಣಾ ಸಮಯದಲ್ಲಿ ಸಮಾಜವನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಹೀಗೆ ಸಮಾಜಘಾತುಕ ಹೇಳಿಕೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿರುವ ರಘು ಆಚಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೈಸೂರು-ಕೊಡಗು ಕ್ಷೇತ್ರದ ಜಿಲ್ಲಾ ಕಾರ್ಯದರ್ಶಿಯೂ ಆದ ಆಯೋಗ್ ಪ್ರಮುಖ್ ಉಮೇಶ್ ಕುಮಾರ್, ಜಿಲ್ಲಾ ಚುನಾ ವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್‍ಗೆ ದೂರು ನೀಡಿದ್ದಾರೆ.

Translate »