ಶೋಷಿತ ಸಮಾಜದ ಹರಿಕಾರರ ಕನಕದಾಸರು
ಮೈಸೂರು

ಶೋಷಿತ ಸಮಾಜದ ಹರಿಕಾರರ ಕನಕದಾಸರು

December 30, 2019

ಪಿರಿಯಾಪಟ್ಟಣ,ಡಿ.29(ವೀರೇಶ್)-ತಳ ಸಮಾಜದಿಂದ ಬಂದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಶೋಷಿತ ಸಮಾಜದ ಏಳ್ಗೆಗೆ ಶ್ರಮಿಸಿದರು ಎಂದು ಚಿಂತಕ ನಿಖಿತ್ ರಾಜ್ ತಿಳಿಸಿದರು.ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 532ನೇ ಕನಕ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ತಮ್ಮ ದಾಸ ಸಾಹಿತ್ಯದಲ್ಲಿ ಹೊಲದಲ್ಲಿ ದುಡಿಯುವವನೇ ಶ್ರೇಷ್ಠ ಎಂಬ ಸಂದೇಶ ಸಾರಿದ ಮಹಾನ್ ಸಂತ ಕನಕದಾಸರು. ಸಮಾಜದ ಶೋಷಿತ ವರ್ಗದ ಪರವಾಗಿ ಬಂಡಾಯದ ಧ್ವನಿಯಾಗಿದ್ದರು. ಮನುಕುಲಕ್ಕೆ ಕ್ರಾಂತಿ ಕಾರಕ ಸಂದೇಶ ಸಾರಿದರು ಎಂದು ಬಣ್ಣಿಸಿದರು.

ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಬಸವಣ್ಣ, ಕನಕದಾಸ ಸೇರಿದಂತೆ ಸಮಾಜದ ಅನೇಕ ಶ್ರೇಷ್ಠ ಸಂತರು ಹಾಗೂ ಜ್ಞಾನಿಗಳು ಆಯಾ ವರ್ಗಕ್ಕೆ ಮಾತ್ರ ಸೀಮಿತರಲ್ಲ. ಆದರೆ ಸಮಾಜದ ಕೆಲ ಧರ್ಮದ ಅನುಯಾಯಿಗಳು ಅವರನ್ನು ಕೆಲವೇ ವರ್ಗಕ್ಕೆ ಸೀಮಿತಗೊಳಿಸಿದ್ದು ನಿಜಕ್ಕೂ ದುರದೃಷ್ಟಕರ ಎಂದು ವಿಷಾದಿಸಿದರಲ್ಲದೆ, ನಾಡಿಗೆ ಮನುಕುಲದ ಏಳಿಗೆಗಾಗಿ ಶ್ರಮಿಸಿದ ಈ ಸಂತರ ಹಾದಿಯಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಶೋಷಿತ ಸಮಾಜದಿಂದ ಬಂದವರು. ಸ್ವಾಭಿಮಾನದ ಸೂಜಿಗಳಾಗಬೇಕೇ ವಿನಾಹ ಸ್ವಾರ್ಥದ ಕತ್ತರಿಗಳ ಗಬಾರದು. ಮಾತು ಕೇಳಿ ಮನೆಗೆ ತೆರಳುವ ಜನ ಆಳುವ ಸಮಾಜವಾಗುವುದಿಲ್ಲ. ಆದ್ದರಿಂದ ಇಂಥ ಶ್ರೇಷ್ಠ ಜ್ಞಾನಿಗಳ ಜಯಂತಿ ಕೇವಲ ಕಾರ್ಯಕ್ರಮವಾಗಬಾರದು. ಅವರ ಮಾರ್ಗದರ್ಶನದಲ್ಲಿ ನಾವು ಬಾಳÀಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ .ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಎಚ್ .ಎಂ. ರೇವಣ್ಣ ಮಾಜಿ ಸಚಿವರಾದ ಸಿ.ಎಚ್. ವಿಜಯಶಂಕರ್ ಶಾಸಕ ಕೆ. ಮಹದೇವ್. ಮಾಜಿ ಸಚಿವರು ಹಾಗೂ ಶಾಸಕರಾಗಿದ್ದ ಕೆ. ವೆಂಕಟೇಶ್ ರವರುಗಳು ಸಮಾರಂಭದಲ್ಲಿ ಕನಕದಾಸರ ಬಗ್ಗೆ ಅವರ ಹೋರಾಟದ .ಬಗ್ಗೆ ಮಾತನಾಡಿದರು ಸಮಾರಂಭದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೆಶ್ವರನಾಥ ಸ್ವಾಮೀಜಿ, ಬೆಟ್ಟದಪುರದ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಹೊಸದುರ್ಗದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕಗ್ಗುಂಡಿ ಹರಳಯ್ಯನ ಮಠದ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ.ಕಾಂತರಾಜ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ನಿವೃತ್ತ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕುರುಬರ ಸಂಘದ ಅಧ್ಯಕ್ಷ ವಿ.ಜಿ.ಅಪ್ಪಾಜೀಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಮಹದೇವ್, ಮಾಜಿ ಶಾಸಕ ಕೆ.ವೆಂಕಟೇಶ್, ಸಮಾಜದ ಮುಖಂಡರಾದ ಡಿ.ಟಿ.ಸ್ವಾಮಿ ಎಂ.ಎಂ.ರಾಜೇಗೌಡ, ಜವರಪ್ಪ ನೀಲಂಗಾಲ ಜಯಣ್ಣ ಜವರಪ್ಪ ಆರ್.ಎಸ್.ಮಹದೇವೆ ಸೇರಿದಂತೆ ಸಮುದಾಯದರಿದ್ದರು. ಸಮಾರಂಭಕ್ಕೂ ಮುನ್ನ ಇಲ್ಲಿನ ಎಪಿಎಂಸಿ ಯಾರ್ಡ್‍ನಿಂದ ಕನಕದಾಸರ ಮೂರ್ತಿಯನ್ನು ಅದ್ಧೂರಿ ಮೆರವಣಿಗೆಯ ಮೂಲಕ ಸಮಾರಂಭದ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

Translate »