ಮೈಸೂರಲ್ಲಿ ಮಾವುತರು, ಕಾವಾಡಿಗಳಿಗೆ ಕಾರ್ಯಾಗಾರ
ಮೈಸೂರು

ಮೈಸೂರಲ್ಲಿ ಮಾವುತರು, ಕಾವಾಡಿಗಳಿಗೆ ಕಾರ್ಯಾಗಾರ

September 8, 2018

ಮೈಸೂರು:  ಸಾಕಾನೆ ಗಳ ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಸಾಮರಸ್ಯ ಮೂಡಿಸುವ ಸಲುವಾಗಿ ಮೈಸೂರಿನಲ್ಲಿ ನಡೆದ ಎರಡು ದಿನಗಳ ಮಾವುತರ ತರಬೇತಿ ಕಾರ್ಯಾ ಗಾರದಲ್ಲಿ ರಾಜ್ಯದ ವಿವಿಧ ಆನೆ ಶಿಬಿರಗಳ 40ಕ್ಕೂ ಅಧಿಕ ಮಾವುತರು ಪಾಲ್ಗೊಂಡು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂ ದಿಗೆ ಮುಖಾಮುಖಿಯಾಗಿ ಸಮಸ್ಯೆಗಳ ತೋಡಿಕೊಂಡಿದ್ದಾರೆ.

ಮೈಸೂರಿನ ಕೆಎಸ್‍ಟಿಡಿಸಿ ಹೊಟೇಲ್ ಸಭಾಂಗಣದಲ್ಲಿ ಏಷ್ಯನ್ ಎಲಿಫೆಂಟ್ ಸಪೋರ್ಟ್ ಸಂಸ್ಥೆ, ಕರ್ನಾಟಕದ ಅರಣ್ಯ ಇಲಾಖೆ ಹಾಗೂ ಡಿ ಪಾಲ್ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮೈಸೂರಿ ನಲ್ಲಿ ಇದೇ ಮೊದಲ ಬಾರಿಗೆ ಆಯೋಜಿ ಸಿದ್ದ ಮಾವುತರ ಎರಡು ದಿನಗಳ ಕಾರ್ಯಾ ಗಾರದಲ್ಲಿ ದುಬಾರೆ, ಬಳ್ಳೆ, ಮತ್ತಿಗೂಡು, ಸಕ್ರೆಬೈಲು ಸೇರಿದಂತೆ ರಾಜ್ಯದ ವಿವಿಧ 9 ಆನೆ ಶಿಬಿರಗಳಿಂದ ಆಗಮಿಸಿದ್ದ ಮಾವು ತರು ತಾವು ಎದುರಿಸುತ್ತಿರುವ ಸಮಸ್ಯೆ ಗಳನ್ನು ನಿವಾರಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿ ಪಾಲಕ ಸಿ.ಜಯರಾಮ್ ಕಾರ್ಯಾಗಾರ ವನ್ನು ಉದ್ಘಾಟಿಸಿ, ಮಾತನಾಡಿ, ಕರ್ನಾಟಕ ದಲ್ಲಿ ಆನೆಗಳ ಬಳಕೆ ಪರಂಪರೆಗೆ ಶತ ಶತಮಾನಗಳ ಇತಿಹಾಸವಿದೆ. ಅಲ್ಲದೆ ದೇಶ ದಲ್ಲಿಯೇ ಅತೀ ಹೆಚ್ಚು ಕಾಡಾನೆಗಳನ್ನು ಹೊಂದಿರುವ ರಾಜ್ಯ ನಮ್ಮದೆಂಬ ಹಿರಿಮೆಯೂ ಇದೆ. ಕಾಡಾನೆಗಳನ್ನು ಸೆರೆ ಹಿಡಿದು, ಪಳ ಗಿಸುವುದರಲ್ಲಿಯೂ ನಮ್ಮ ರಾಜ್ಯದ ಮಾವು ತರು ಮತ್ತು ಕಾವಾಡಿಗಳು ರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ನೈಪುಣ್ಯತೆ ಹೊಂದಿದ್ದಾರೆ.

ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ ಘಡದಂತಹ ರಾಜ್ಯಗಳಲ್ಲೂ ಹೆಸರು ಮಾಡಿ ದ್ದಾರೆ. ಇಲ್ಲಿ ಉಪಟಳ ನೀಡುವ ಕಾಡಾನೆ ಗಳನ್ನು ಸೆರೆ ಹಿಡಿಯಲು ನಮ್ಮ ಆನೆಗಳು, ಮಾವುತರು, ಕಾವಾಡಿಗಳು ಹಾಗೂ ವೈದ್ಯರ ತಂಡಕ್ಕೆ ಮೊರೆ ಹೋಗುತ್ತಾರೆ. ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ನಮ್ಮ ಮಾವುತರು ಮತ್ತು ಆನೆಗಳು ರಾಜ್ಯಕ್ಕೆ ಒಳ್ಳೆಯ ಹೆಸರು ತಂದುಕೊಡುತ್ತಿದ್ದಾರೆ. ಮಾವುತರು ಮತ್ತು ಕಾವಾಡಿಗಳ ಕಲ್ಯಾಣಕ್ಕೆ ಇಲಾಖೆ ಅನೇಕ ಯೋಜನೆಗಳನ್ನು ರೂಪಿ ಸುತ್ತಿದೆ. ಮಾವುತರು ಮತ್ತು ಕಾವಾಡಿಗ ರೊಂದಿಗೆ ಸಂವಾದ ನಡೆಸಿದರು. ಮಾವುತರ ಕೆಲ ಬೇಡಿಕೆಗಳನ್ನು ಈಡೇರಿಸಲು ಸ್ಥಳ ದಲ್ಲಿಯೇ ಸೂಚಿಸಿದರು.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಅಜಯ್ ಮಿಶ್ರ ಮಾತನಾಡಿ, ಮಾವುತರು ಮತ್ತು ಆನೆಗಳ ನಡುವಿನ ಸಂಬಂಧ ಹೇಗಿರಬೇಕೆಂದು ವಿವರಿಸಿದರು. ಮಾವುತರು ದುಶ್ಚಟಗಳಿಂದ ದೂರ ಇರ ಬೇಕು. ಆನೆಗಳನ್ನು ಮನೆ ಮಕ್ಕಳಂತೆ ನೋಡಿ ಕೊಳ್ಳಬೇಕು. ಆನೆಗಳ ಆರೋಗ್ಯದ ಜತೆಗೆ ತಮ್ಮ ಹಾಗೂ ಕುಟುಂಬದ ಆರೋಗ್ಯ ವನ್ನೂ ಜಾಗೃತೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆನೆ ವಿಜ್ಞಾನಿ ಡಾ. ಅಜಯ್ ದೇಸಾಯಿ ಅವರು, ಆನೆಗಳ ವರ್ತನೆ, ಪೋಷಣಾ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಆನೆಗಳು ಮನುಷ್ಯರಿಗಿಂತಲೂ ಅತೀ ಬುದ್ಧಿವಂತವು. ಅವುಗಳ ನಿರ್ವಹಣೆಗೆ ನಾವು ಅತೀ ಹೆಚ್ಚಿನ ಜಾಗೃತೆ ವಹಿಸಬೇಕು. ಗಸ್ತು ತಿರುಗಲು, ಕಾಡಾನೆಗಳನ್ನು ನಿಯಂತ್ರಿ ಸಲು ಸೇರಿದಂತೆ ಆನೆಗಳನ್ನು ಬೇರೆ ಬೇರೆ ಕೆಲಸಕ್ಕೆ ಬಳಸಿಕೊಳ್ಳುವ ಮೂಲಕ ಅವುಗಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದ ಸಮಾರೋಪ ಸಮಾ ರಂಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋ ದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಮಾತನಾಡಿ, ನಮ್ಮ ರಾಜ್ಯದ ಆನೆಗಳು ನಮ್ಮ ಹೆಮ್ಮೆಯಾಗಿವೆ. ನಮ್ಮ ಮಾವುತರು ಮತ್ತು ಕಾವಾಡಿಗಳ ಪರಿಶ್ರಮದಿಂದ ಇಲಾಖೆಗೆ ಒಳ್ಳೆಯ ಹೆಸರು ಬರುತ್ತಿದೆ ಎಂದರು.

ಅಮೆರಿಕದ ಆನೆ ಮಾವುತರಾದ ಹೈಡಿ ರಿಡಲ್ ಪಾಶ್ಚಿಮಾತ್ಯ ದೇಶಗಳಲ್ಲಿ ಆನೆಗಳ ಪೋಷಣೆ ಹಾಗೂ ಇಂಡೋನೇಷ್ಯಾದ ಮುಖ್ಯ ಮಾವುತ ನಜರುದ್ದೀನ್ ವಾನ್ ತಮ್ಮ ದೇಶದ ಆನೆಗಳ ಪಾಲನೆ ಹಾಗೂ ತರಬೇತಿಯ ವಿವರ ನೀಡಿದರೆ, ಕಾರ್ಯಾಗಾರದ ಸಂಯೋ ಜಕಿ ಹಾಗೂ ಡಿ ಪಾಲ್ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಮಮತಾ ಸತ್ಯನಾರಾಯಣ ಮಾವುತರಿಗೆ ತರ ಬೇತಿಯ ಅವಶ್ಯಕತೆ ಹಾಗೂ ಅರಣ್ಯ ಸಂಕ ರಕ್ಷಣೆಯಲ್ಲಿ ಮಾವುತರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.

ದಸರಾ ಆನೆ ಅಭಿಮನ್ಯುವಿನ ಮಾವುತ ವಸಂತ ಇಂಡೋನೇಷ್ಯಾಗೆ ಅಧ್ಯಯನ ಪ್ರವಾಸದ ವೇಳೆ ಕರ್ನಾಟಕದ ಮಾವುತ ರಿಗೆ ಇರುವ ಮಾನ್ಯತೆಯ ಬಗ್ಗೆ ವಿವರಣೆ ನೀಡಿ, ಮಾವುತರು ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಮ್ಮನ್ನು ಗುರುತಿಸು ತ್ತಾರೆ ಎಂದು ಹೇಳಿದರು. ಕಾರ್ಯಾಗಾರ ದಲ್ಲಿ ವಿವಿಧ ಮನೋರಂಜನಾ ಕಾರ್ಯ ಕ್ರಮವನ್ನು ಕಾವಾಡಿಗಳು ಹಾಗೂ ಮಾವು ತರೇ ನಡೆಸಿಕೊಟ್ಟು ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ಡಿಸಿಎಫ್ ಸಿದ್ದರಾಮಪ್ಪ ಚಳ್ಕಾಪುರೆ, ಕರ್ನಾ ಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೈಸೂರು ವಿಭಾ ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶನ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಿ.ರವಿಶಂಕರ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »