ಜಿಲ್ಲೆಯಾದ್ಯಂತ ಸಾಂಪ್ರದಾಯಕ ಹುತ್ತರಿ ಆಚರಣೆ: ಪಟಾಕಿಗಳ ಸದ್ದಿಲ್ಲ, ಪ್ರಕೃತಿ ವಿಕೋಪ ವ್ಯಾಪ್ತಿಯಲ್ಲಿ ಸಂಭ್ರಮವಿಲ್ಲ
ಕೊಡಗು

ಜಿಲ್ಲೆಯಾದ್ಯಂತ ಸಾಂಪ್ರದಾಯಕ ಹುತ್ತರಿ ಆಚರಣೆ: ಪಟಾಕಿಗಳ ಸದ್ದಿಲ್ಲ, ಪ್ರಕೃತಿ ವಿಕೋಪ ವ್ಯಾಪ್ತಿಯಲ್ಲಿ ಸಂಭ್ರಮವಿಲ್ಲ

November 24, 2018

ಮಡಿಕೇರಿ:  ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಹುತ್ತರಿ ಹಬ್ಬವನ್ನು ಜಿಲ್ಲೆಯಾದ್ಯಂತ ಈ ಬಾರಿ ಸಂಪ್ರದಾಯ ದಂತೆ ಸರಳವಾಗಿ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾ ಲಯದಲ್ಲಿ ರೋಹಿಣಿ ನಕ್ಷತ್ರದಲ್ಲಿ ರಾತ್ರಿ 7.15ಕ್ಕೆ ನೆರೆಕಟ್ಟಿ, ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ 8.15ಕ್ಕೆ ಕದಿರು ತೆಗೆಯಲಾಯಿತು. ಆ ಮೂಲಕ ಜಿಲ್ಲೆ ಯಲ್ಲಿ ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಮೊದಲು ಹುತ್ತರಿ ಹಬ್ಬವನ್ನು ಆಚರಿಸಲಾಯಿತು. ತದನಂತರ ಜಿಲ್ಲೆಯ ವಿವಿಧೆಡೆ ಹಬ್ಬಾ ಚರಣೆ ನಡೆಸಲಾಯಿತು.

ನಗರದ ಓಂಕಾರೇಶ್ವರ ದೇವಾಲಯ, ಕೊಡವ ಸಮಾಜ, ಗೌಡ ಸಮಾಜಗಳಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಬಳಿಕ ಧಾನ್ಯ ಲಕ್ಷ್ಮಿಯನ್ನು ಬರಮಾಡಿಕೊಳ್ಳಲಾ ಯಿತು. ಓಂಕಾರೇಶ್ವರ ದೇವಾಲಯದಲ್ಲಿ 7.30ಕ್ಕೆ ನೆರೆಕಟ್ಟಿ ದೇವಾಲಯದ ಗದ್ದೆ ಯಲ್ಲಿ ಧಾನ್ಯಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿ 8.30 ಗಂಟೆಗೆ ಕದಿರು ತೆಗೆದು ದೇವಾಲ ಯಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಲಾ ಯಿತು. ಬಳಿಕ ಕೊಡವ ಸಮಾಜಕ್ಕೆ ಕದಿರು ಕೊಂಡೊಯ್ದು ತೂಕ್ ಬೊಳಚ(ತೂಗು ದೀಪ) ಬೆಳಗಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ತದನಂತರ ನೆರೆಕಟ್ಟಿ ಮಾತೆ ಕಾವೇರಮ್ಮ, ಇಗ್ಗುತ್ತಪ್ಪ ಮತ್ತು ಗುರು ಕಾರೋಣರನ್ನು ನೆನೆದು ಮಾತೆ ಕಾವೇರಿಗೆ ನಮಿಸಿ ಅಕ್ಕಿ ಹಾಕಲಾಯಿತು. ಆ ಮೂಲಕ ಧಾನ್ಯ ಸಂಪತ್ತು ವೃದ್ಧಿಸಲಿ ಎಂದು ಪ್ರಾರ್ಥಿ ಸಲಾಯಿತು. ಗೌಡ ಸಮಾಜದಲ್ಲಿಯೂ ಸಹ ಕೃತಕ ಗದ್ದೆಯಲ್ಲಿ ಕದಿರು ತೆಗೆದು ನೆಲ್ಲಕ್ಕಿ ನಡುಬಾಡೆಗೆ ಕೊಂಡೊಯ್ದು ಕಾವೇರಿ ಮಾತೆ, ಇಗ್ಗುತ್ತಪ್ಪ ಹಾಗೂ ಕುಲದೇವ ರನ್ನು ನೆನೆದು ಅಕ್ಕಿ ಹಾಕುವ ಮೂಲಕ ಹುತ್ತರಿ ಹಬ್ಬಾಚರಣೆ ನಡೆಸಲಾಯಿತು. ಕದಿರು ತೆಗೆಯುವ ಸಂದರ್ಭ ಕೊಡಗಿನ ಪದ್ಧತಿ, ಪರಂಪರೆ ಮತ್ತು ಸಂಪ್ರದಾಯ ದಂತೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸುವ ಮೂಲಕ ಹಬ್ಬದ ಶುಭ ಸಂಕೇ ತವನ್ನು ಸೂಚಿಸಲಾಯಿತು. ‘ಪೊಲಿ ಪೊಲಿಯೇ ಬಾ’ ಎಂದು ಧಾನ್ಯಲಕ್ಷ್ಮಿಯನ್ನು ಬೇಡಲಾ ಯಿತು. ಸಮಾಜಗಳು ಮತ್ತು ದೇವಾಲ ಯದಲ್ಲಿ ನೆರಿದಿದ್ದವರಿಗೆ ಹಬ್ಬದ ಸಾಂಪ್ರ ದಾಯಿಕ ತಿನಿಸು ತಂಬಿಟ್ಟನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷರು, ಪದಾ ಧಿಕಾರಿಗಳು, ಕೊಡವ ಮಕ್ಕಡ ಕೂಟ, ಕೊಡವ ಪೊಮ್ಮಕ್ಕಡ ಕೂಟ, ವಿವಿಧ ಕೊಡವ ಕೇರಿಗಳ ಅಧ್ಯಕ್ಷರು, ಗೌಡ ಸಮಾಜ, ಗೌಡ ವಿದ್ಯಾಭಿವೃದ್ದಿ ಸಂಘ, ಗೌಡ ಸಮಾ ಜಗಳ ಒಕ್ಕೂಟ, ಗೌಡ ಯುವ ವೇದಿಕೆ ಪದಾಧಿಕಾರಿಗಳು, ಓಂಕಾರೇಶ್ವರ ದೇವಾ ಲಯ ವ್ಯವಸ್ಥಾಪನಾ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಕದಿರು ಹಂಚಿಕೆ: ಮಡಿಕೇರಿ ನಗರ ವ್ಯಾಪ್ತಿ ಯೊಳಗೆ ಭತ್ತದ ಗದ್ದೆಗಳು ಇಲ್ಲದ ಹಿನ್ನೆಲೆ ಯಲ್ಲಿ ನಗರ ನಿವಾಸಿಗಳು ಕೊಡವ ಮತ್ತು ಗೌಡ ಸಮಾಜಗಳಿಗೆ ತೆರಳಿ ನೆರೆ(5ಎಲೆ ಗಳು) ಮತ್ತು ಕದಿರನ್ನು(ಭತ್ತದ ಪೈರು) ಕೊಂಡೊಯ್ದು ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಕೊಂಡರು. ಪಾಯಸಕ್ಕೆ ಕದಿರಿ ನಲ್ಲಿದ್ದ ಅಕ್ಕಿಯನ್ನು ಹಾಕಿ ಹೊಸಅಕ್ಕಿಯ ಪಾಯಸ, ತಂಬಿಟ್ಟು, ಹುತ್ತರಿ ಗೆಣಸಿನ ವಿವಿಧ ಖಾದ್ಯಗಳನ್ನು ಸವಿದರು.

ಪಟಾಕಿಗಳ ಸದ್ದಿಲ್ಲ: ಹಿಂದಿನಂತೆ ಈ ಬಾರಿಯ ಹುತ್ತರಿ ಹಬ್ಬದಲ್ಲಿ ಹೆಚ್ಚಿನ ಮಂದಿ ಪಟಾಕಿಗಳಿಂದ ದೂರವೇ ಉಳಿದಿದ್ದರು. ಹೀಗಾಗಿ ಪಟಾಕಿಯ ಸಂಭ್ರಮದ ಸದ್ದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ಷೀಣಿ ಸಿತ್ತು. ಪಟಾಕಿ ಮಳಿಗೆಗಳಲ್ಲೂ ಗ್ರಾಹಕರ ಸಂಖ್ಯೆ ಭಾರಿ ಇಳಿಕೆ ಕಂಡಿತ್ತು. ಹಿಂದಿನ ಸಾಲಿಗೆ ಹೋಲಿಸಿದರೆ ಈ ಬಾರಿ ಪಟಾಕಿ ವ್ಯಾಪಾರ ಶೇಕಡ 60 ರಷ್ಟು ಕುಸಿತ ಕಂಡಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ಸೂತಕ ಛಾಯೆ: ಪ್ರಕೃತಿ ವಿಕೋಪ ದಿಂದ ಸಂಪೂರ್ಣ ನಾಶಗೊಂಡಿರುವ ಮಕ್ಕಂದೂರು, ಮೇಘತ್ತಾಳು, ಹೆಮ್ಮೆತ್ತಾಳು, ಮುಕ್ಕೋಡ್ಲು, ಕಾಲೂರು, ಮೊಣ್ಣಂಗೇರಿ, ಜೋಡುಪಾಲ ಮತ್ತಿತ್ತರ ಗ್ರಾಮಗಳಲ್ಲಿ ಹುತ್ತರಿ ಹಬ್ಬವನ್ನು ಸಂಪ್ರದಾಯದಂತೆ ಸಾಂಕೇತಿಕವಾಗಿ ಆಚರಿಸಲಾಗಿದೆ. ಈ ಗ್ರಾಮ ಗಳಲ್ಲಿ ಅಳಿದುಳಿದಿರುವ ಮನೆಗಳಲ್ಲಿ ಹಬ್ಬದ ಸಂಭ್ರಮವೇ ಕಂಡು ಬರಲಿಲ್ಲ. ಭತ್ತದ ಗದ್ದೆಗಳು, ಕಾಫಿ ತೋಟಗಳು ಮಾಯವಾಗಿ ಬಟಾಬಯಲಾದಂತಿರುವ ಈ ಗ್ರಾಮಗಳಲ್ಲಿ ಹಬ್ಬದ ದಿನ ಸೂತಕ ಛಾಯೆ ಮನೆ ಮಾಡಿತ್ತು. ಒಟ್ಟಿನಲ್ಲಿ ಈ ಬಾರಿಯ ಹುತ್ತರಿ ಹಬ್ಬ ಕೊಡಗು ಜಿಲೆ ್ಲಯಲ್ಲಿ ಸಂಭ್ರಮ ಸಡಗರವಿಲ್ಲದೆ ಸಂಪ್ರ ದಾಯವಾಗಿ ನೆರವೇರಿದೆ. ಆದರೆ ಧಾನ್ಯಲಕ್ಷ್ಮಿ ಸದಾಕಾಲ ಮನೆ ತುಂಬಿರಲಿ ಎಂಬ ಆಶಯದೊಂದಿಗೆ ಜಿಲ್ಲೆಯಾದ್ಯಂತ ಹುತ್ತರಿ ಹಬ್ಬವನ್ನು ಆಚರಿಸಲಾಗಿದೆ.

ಪುತ್ತರಿ ಹಬ್ಬ ಮುಗಿದರೂ ಅದರ ಸಂಭ್ರಮ ಮತ್ತೂ ಒಂದು ವಾರದ ಕಾಲದ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಹಳ್ಳಿಗಳಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಪುತ್ತರಿ ಕೋಲಾಟ ವಿಶೇಷ ರೀತಿಯಲ್ಲಿ ನಡೆಯು ತ್ತದೆ. ಸಮರ ನೃತ್ಯ ಪರೆಯಕಳಿ, ಬೊಳ ಕಾಟ್, ಕಪ್ಪೆಯಾಟ್ ಸೇರಿದಂತೆ ಕೊಡ ವರ ಹತ್ತಾರು ಜನಪದ ಕಲೆಗಳ ಪ್ರದ ರ್ಶನದಲ್ಲಿ ಹಳ್ಳಿಗರು ಪಾಲ್ಗೊಳ್ಳುತ್ತಾರೆ. ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸಿ ಹಬ್ಬದಲ್ಲಿ ಪಾಲ್ಗೊಳ್ಳುವ ಕೊಡವರು, ಈ ರೀತಿ ಸಾಂಪ್ರದಾಯಿಕ ನೃತ್ಯಗಳ ಪ್ರದರ್ಶನದೊಂದಿಗೆ ಭವಿಷ್ಯದ ತಲೆ ಮಾರಿಗೂ ಈ ವಿಶೇಷ ನೃತ್ಯ ಪ್ರಕಾ ರಗಳನ್ನು ಪರಿ ಚಯಿಸುತ್ತಾರೆ. ಇದೆಲ್ಲ ದರ ನಡುವೆಯೂ ಕೊಡಗಿನ ಪ್ರಮುಖ ಹಬ್ಬವಾಗಿ ಆಚರಿಸಲ್ಪ ಡುವ ಪುತ್ತರಿಯ ವಿಶಿಷ್ಟತೆಯಿಂದಾಗಿಯೇ ಕೊಡಗಿನ ಜನತೆ “ಪುತ್ತರಿ ಬಪ್ಪಕ ಬಣ್ಣತೆ ಬಾತ್. ಪುತ್ತರಿ ಪೆÇೀಪಕ ಎಣ್ಣತೆ ಪೆÇೀಯಿತ್. ದಮ್ಮಯ್ಯ ಪುತ್ತರಿ ನೀ ಒಮ್ಮಲು ಪೆÇೀವತೆ” ಎಂದು ಹಾಡುತ್ತಾರೆ.

Translate »