ಮಕ್ಕಳ ಕಲಿಕೆಗೆ ಗಡಿರೇಖೆ ಇರಬಾರದು
ಮೈಸೂರು

ಮಕ್ಕಳ ಕಲಿಕೆಗೆ ಗಡಿರೇಖೆ ಇರಬಾರದು

February 3, 2019

ಮೈಸೂರು: ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಕಲಿಕೆಗೆ ಯಾವುದೇ ನಿರ್ದಿಷ್ಟ ಗಡಿರೇಖೆ ಇರಬಾರದು. ಬದ ಲಾಗಿ ಅವರ ಕಲಿಕೆಗೆ ಮುಕ್ತ ವಾತಾ ವರಣ ಕಲ್ಪಿಸಬೇಕು ಎಂದು ಸಿಎಫ್‍ಟಿ ಆರ್‍ಐ (ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ) ನಿರ್ದೇಶಕ ಡಾ.ರಾಘವರಾವ್ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಕರ್ನಾ ಟಕ ರಾಜ್ಯ ವಿಜ್ಞಾನ ಪರಿಷತ್ತು (ಕರಾ ವಿಪ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯು ಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 2018-19ನೇ ಸಾಲಿನ ಗಣಿತ-ವಿಜ್ಞಾನ ಒಲಂಪಿಯಾಡ್ ಸ್ಪರ್ಧೆಯ ರಾಜ್ಯಮಟ್ಟದ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಕಲಿಕೆಗೆ ನಿರ್ದಿಷ್ಟ ರೇಖೆ ಹಾಕದೇ ಅವರು ಮುಕ್ತವಾಗಿ ಕಲಿಯಲು ಬಿಡಬೇಕು. ಆ ಮೂಲಕ ಅವರಲ್ಲಿನ ಕೌತುಕಕ್ಕೆ ಉತ್ತೇ ಜನ ನೀಡಬೇಕು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯು ಒಂದು ನಿರ್ದಿಷ್ಟ ಗಡಿಯೊಳಗೆ ಇದ್ದುಕೊಂಡು ಕಲಿಯಬೇಕು ಎಂಬ ಒತ್ತಡವನ್ನು ಮಕ್ಕಳ ಮೇಲೆ ಹೇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮುಕ್ತ ವಾಗಿ ಆಲೋಚಿಸಲು ಅವಕಾಶವಿರುವು ದಿಲ್ಲ. ಇದರಿಂದ ಮಕ್ಕಳ ಸೃಜನಶೀಲತೆ ಮರೆಯಾಗಲಿದೆ ಎಂದು ಹೇಳಿದರು.

ಜಪಾನ್‍ನ ಶಾಲೆಯೊಂದರಲ್ಲಿ ಚೌಕಾ ಕಾರದೊಳಗೆ ಚಿತ್ರ ಬಿಡಿಸಲು ಮಕ್ಕಳಿಗೆ ತಿಳಿಸಲಾಗಿತ್ತು. ಈ ವೇಳೆ ಒಂದು ಮಗು ಆ ಚೌಕಾಕಾರ ಸೇರಿಸಿ ಮನೆಯ ಚಿತ್ರ ರಚನೆ ಮಾಡಿತ್ತು. ಹೀಗಾಗಿ ಇತ್ತೀಚೆಗೆ ನಿರ್ದಿಷ್ಟ ಗಡಿರೇಖೆ ಹಾಕಿಕೊಳ್ಳದೇ ಮುಕ್ತ ವಾಗಿ ಕಲಿಯಲು ಅವಕಾಶವಿರುವ ಮಾದರಿ ಶಿಕ್ಷಣ ವ್ಯವಸ್ಥೆಯನ್ನು ಅಲ್ಲಿ ಅಳವಡಿಸಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ವೈಜ್ಞಾನಿಕ ಚಿಂತನೆಯ ಮೂಲಕ ಮಕ್ಕಳ ಮನಸ್ಸನ್ನು ಬಲಿಷ್ಠಗೊಳಿಸುವುದು ಮತ್ತು ಹೇಗೆ ಆಲೋಚನೆ ಮಾಡಬೇಕು ಎಂಬ ತರಬೇತಿ ನೀಡುವುದು ಶಿಕ್ಷಣದ ಉದ್ದೇಶ ವಾಗಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಉತ್ತಮವಾದರೂ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅತ್ಯ ಗತ್ಯ. ಆದರೆ ಇಂಗ್ಲಿಷ್ ಕಲಿಕೆಯ ಭರದಲ್ಲಿ ನಮ್ಮ ಸಂಸ್ಕøತಿ ಬೇರುಗಳನ್ನು ಮರೆಯ ಬಾರದು ಎಂದು ಕಿವಿಮಾತು ಹೇಳಿದರು.

ಗಣಿತ ಎಲ್ಲಾ ವಿಷಯಗಳ ತಾಯಿ: `ಗಣಿತ’ ಎಲ್ಲಾ ವಿಷಯಗಳ ತಾಯಿ ಇದ್ದಂತೆ. ತಾರ್ಕಿಕ ಚಿಂತನ ಕ್ರಮವನ್ನು ಬೆಳೆಸುವ `ಗಣಿತ’ ಎಲ್ಲಾ ವಿಷಯಗಳ ಮೂಲವಾಗಿದೆ. ಶ್ರೀನಿವಾಸ ರಾಮಾನುಜನ್ ಅವರು ಶ್ರೇಷ್ಠ ಗಣಿತಶಾಸ್ತ್ರಜ್ಞರಾಗಿದ್ದರು. ಆದರೆ ದುರ ದೃಷ್ಟವೆಂದರೆ ಅವರಿಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯಚಿತ್ರ ಅಥವಾ ಸಿನಿಮಾ ಭಾರತದಲ್ಲಿ ಇದುವರೆಗೆ ನಿರ್ಮಾಣ ವಾಗಿಲ್ಲ. ಇತ್ತೀಚೆಗೆ ಹಾಲಿವುಡ್‍ನಲ್ಲಿ ಅವ ರಿಗೆ ಸಂಬಂಧಿಸಿದ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂದು ನುಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಹಾಗೂ ಗಣಿತ-ವಿಜ್ಞಾನ ಒಲಿಂಪಿ ಯಾಡ್ ರಾಜ್ಯ ಸಂಚಾಲಕ ಎನ್.ಆರ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಣಿತ-ವಿಜ್ಞಾನ ಒಲಂಪಿಯಾಡ್ ಸ್ಪರ್ಧೆ ಪರಿಷತ್ತಿನ ಪ್ರಪ್ರಥಮ ಕಾರ್ಯಕ್ರಮ. ಇದಕ್ಕೆ ಸರ್ಕಾರ ಅನುದಾನ ನೀಡಿ ಯಶಸ್ವಿಗೊಳಿ ಸಿದೆ. ಪರಿಷತ್ ವತಿಯಿಂದ ಇದನ್ನು ವಾರ್ಷಿಕ ಕಾರ್ಯಕ್ರಮವಾಗಿ ಪ್ರತಿ ವರ್ಷ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್.ಎಂ.ಗುರುನಂಜಯ್ಯ ಮಾತನಾಡಿ, ಇಂದು ತಂತ್ರಜ್ಞಾನದ ಅಭಿವೃದ್ಧಿಯಿಂದ ಕಲಿಕೆಗೆ ಹೆಚ್ಚಿನ ಮೂಲಗಳು ದೊರೆಯು ವಂತಾಗಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕರು ನೀಡುವ ಮಾರ್ಗದರ್ಶನವನ್ನು ವಿದ್ಯಾರ್ಥಿ ಗಳು ಸ್ವೀಕರಿಸುವ ಮನೋಭಾವ ಬೆಳೆಸಿ ಕೊಳ್ಳಬೇಕು. ಪರಸ್ಪರ ಚರ್ಚೆಯ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಲು ಒತ್ತು ನೀಡ ಬೇಕು. ಸೌಲಭ್ಯಗಳ ಮಿತಿ ನೆಪದಲ್ಲಿ ಸಾಧನೆ ಯಿಂದ ಹಿಂದೆ ಸರಿಯಬಾರದು. ಎಲ್ಲ ದರ ಇತಿಮಿತಿಗಳ ನಡುವೆ ಸಾಧನೆ ಮಾಡುವುದರಲ್ಲೇ ನಮ್ಮ ಶ್ರೇಷ್ಠತೆ ಅಡಗಿ ರುವುದು ಎಂದು ಹೇಳಿದರು.

ನಾಳೆ ಬಹುಮಾನ ವಿತರಣೆ: ಫೆ.3 ರಂದು ಮಧ್ಯಾಹ್ನ 12.30ಕ್ಕೆ ನಡೆಯುವ ಸಮಾ ವೇಶದ ಸಮಾರೋಪ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿ ದ್ದಾರೆ. ಅತಿಥಿಗಳಾಗಿ ಶಾಸಕ ಎಲ್.ನಾಗೇಂದ್ರ, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಪಾಲ್ಗೊಳ್ಳಲಿದ್ದು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಎಸ್.ವಿ.ಸಂಕನೂರು ಅಧ್ಯಕ್ಷತೆ ವಹಿಸಲಿ ದ್ದಾರೆ. ಕರಾವಿಪ ಜಂಟಿ ಕಾರ್ಯದರ್ಶಿ ಬಿ.ಎನ್. ಶ್ರೀನಾಥ್, ಸದಸ್ಯ ರಾಮಚಂದ್ರ, ಪರೀಕ್ಷೆಯ ವೀಕ್ಷಕ ರವಿಕುಮಾರ್ ಮತ್ತಿತರರು ಇಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದರು.

 

Translate »