ಮೈಸೂರು: ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋದ ಮಹಿಳೆ ನಾಪತ್ತೆ ಯಾಗಿರುವ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಟಗಳ್ಳಿಯ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುವ ಸುಧಾ(33) ಎಂಬುವರು ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ತಂದೆ ಮನೆಯಲ್ಲಿ ಇಬ್ಬರು ಮಕ್ಕಳ ಸಮೇತ ವಾಸವಾಗಿದ್ದರು.
ಈಕೆ ಕಳೆದ ಡಿ13ರಂದು ಬೆಳಿಗ್ಗೆ ಗಾರ್ಮೆಂಟ್ಸ್ಗೆ ಹೋಗುವುದಾಗಿ ತಿಳಿಸಿ ತೆರಳಿದವರು ಈವರೆಗೆ ವಾಪಸಾಗಿಲ್ಲ ಎಂದು ಫೆ.4ರಂದು ಆಕೆಯ ತಂದೆ ಮಹ ದೇವ್ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಈಕೆಯ ಬಗ್ಗೆ ಮಾಹಿತಿ ಇರುವವರು ಆಲನಹಳ್ಳಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418331ನ್ನು ಸಂಪರ್ಕಿ ಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.