ಕಾಚಿಗುಡ-ಬೆಂಗಳೂರು ಸಿಟಿ ಎಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಣೆ
ಮೈಸೂರು

ಕಾಚಿಗುಡ-ಬೆಂಗಳೂರು ಸಿಟಿ ಎಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಣೆ

March 1, 2019

ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಯ ತ್ನದ ಫಲವಾಗಿ ಮತ್ತೊಂದು ಅತೀ ವೇಗದ ರೈಲು ಮೈಸೂರಿಗೆ ದಕ್ಕಿದಂತಾಗಿದೆ. ಇದು ವರೆಗೂ ಕಾಚಿಗುಡ-ಬೆಂಗ ಳೂರು ಸಿಟಿ ರೈಲ್ವೆ ನಿಲ್ದಾಣ ದವರೆಗೂ ಸಂಚರಿಸುತ್ತಿದ್ದ ಡೈಲಿ ಎಕ್ಸ್‍ಪ್ರೆಸ್ ರೈಲು ಇನ್ನು ಮುಂದೆ ಮೈಸೂರಿನಿಂದ ಸಂಚರಿಸಲಿದೆ.

ಪ್ರವಾಸಿ ತಾಣ ಹಾಗೂ ಸಾಂಸ್ಕೃತಿಕ ರಾಜಧಾನಿಯೂ ಆದ ಮೈಸೂರಿಗೆ ಪ್ರವಾಸಿಗರು, ಉದ್ಯೋಗಿಗಳು, ವಿದ್ಯಾರ್ಥಿಗಳು, ವಾಣಿಜ್ಯ ವಹಿವಾಟು ನಡೆಸುವವರು ಅಧಿಕ ಸಂಖ್ಯೆಯಲ್ಲಿ ಪ್ರತಿನಿತ್ಯ ಮೈಸೂರು ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಾರೆ. ಇವರಿಗೆ ಅನುಕೂಲ ಕಲ್ಪಿಸಲು ಸಮರ್ಪಕ ರೈಲು ಸಂಚಾರವಿರಬೇಕು ಎಂಬ ದೃಷ್ಟಿ ಯಿಂದ ಮತ್ತೊಂದು ರೈಲು ವಿಸ್ತರಣೆಗೆ ಸಂಸದ ಪ್ರತಾಪ್ ಸಿಂಹ ಫೆ.6ರಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದರು.

ಬೆಂಗಳೂರಿನಿಂದ ಕೆಲವು ರೈಲುಗಳ ಸಂಚಾರವನ್ನು ಈಗಾಗಲೇ ಮೈಸೂರಿಗೂ ವಿಸ್ತರಿಸಿದ್ದು, ಇನ್ನೂ ಕೆಲವು ರೈಲುಗಳ ಸಂಚಾರವನ್ನು ವಿಸ್ತರಿಸಿದ್ದಲ್ಲಿ ಮೈಸೂರು ಅಭಿವೃದ್ಧಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದರು. ಪ್ರತಾಪ್ ಸಿಂಹ ಅವರ ಮನವಿಯನ್ನು ಪರಿಗಣಿಸಿರುವ ರೈಲ್ವೆ ಸಚಿವರು 12785/86 ಕಾಚಿಗುಡ-ಬೆಂಗಳೂರು ಸಿಟಿ ಡೈಲಿ ಎಕ್ಸ್‍ಪ್ರೆಸ್ ರೈಲು ಸಂಚಾರ ವನ್ನು ವಿಸ್ತರಿಸಲು ಅನುಮೋದನೆ ನೀಡಿದ್ದಾರೆ. ತಮ್ಮ ಮನವಿಯನ್ನು ಮನ್ನಿಸಿ ಮತ್ತೊಂದು ವೇಗದ ರೈಲನ್ನು ಮೈಸೂರಿಗೆ ವಿಸ್ತರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್‍ರನ್ನು ಸಿಂಹ ಅಭಿನಂದಿಸಿದ್ದಾರೆ.

Translate »