ಮೈಸೂರು ವಿವಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನಾಚರಣೆ
ಮೈಸೂರು

ಮೈಸೂರು ವಿವಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನಾಚರಣೆ

March 25, 2019

ಮೈಸೂರು: ಮೈಸೂರು ವಿವಿಯಲ್ಲಿ ಶಿಕ್ಷಣ ಪಡೆದ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಮರಳಿದ ಬಳಿಕ ಮಾದರಿ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅಭಿವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿವಿ ಅಂತರ ರಾಷ್ಟ್ರೀಯ ಕೇಂದ್ರ ಮತ್ತು ಅಂತರ ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘದ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಮೈಸೂರು ವಿವಿಯಲ್ಲಿ 58ಕ್ಕೂ ಹೆಚ್ಚು ದೇಶಗಳ 700 ವಿದ್ಯಾರ್ಥಿ ಗಳು ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ, ಅದನ್ನು ನನ್ನ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ. ಮುಂದಿನ ದಿನಗಳಲ್ಲಿ ವಿದೇಶಿ ವಿದ್ಯಾರ್ಥಿ ಗಳ ಸಂಖ್ಯೆಯನ್ನು ಹೆಚ್ಚು ಮಾಡುವುದು ನನ್ನ ಗುರಿಯಾಗಿದೆ ಎಂದರು.

ಬಾಥೆಲ್‍ನ ಕಾಸ್ಕೋಡಿಯಾ ಕಾಲೇಜಿನ ಯುಎಸ್-ಇಂಡಿಯಾ ಪುಲ್‍ಬ್ರೈಟ್ ಫೆಲೋ ಡಾ.ಡೇವಿಡ್ ಎ.ಶಪಿರೊ ಮಾತ ನಾಡಿ, ವಿವಿಧ ದೇಶಗಳಿಂದ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳು ಜಗತ್ತಿಗೆ ಐಕ್ಯತೆ ಯನ್ನು ಸಾರುವವರಾಗಿದ್ದಾರೆ. ಒಂದು ದೇಶದವರು ಮತ್ತೊಂದು ದೇಶಕ್ಕೆ ತೆರಳಿ ಅಲ್ಲಿನ ಶಿಕ್ಷಣ ಕಲಿಯುವುದರಿಂದ ಅಲ್ಲಿನ ಸಂಸ್ಕøತಿಯನ್ನು ಅರಿಯಲು ಸಾಧ್ಯವಿದೆ. ಇದು ಭವಿಷ್ಯದಲ್ಲಿ ಉಪಯೋಗವಾಗು ವುದಲ್ಲದೆ, ಅಭಿವೃದ್ಧಿಗೂ ಹೆಚ್ಚು ಸಹಾ ಯಕವಾಗಲಿದೆ. ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಎಲ್ಲರೂ ಒಂದುಗೂಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ವಾತಾವರಣವು ಪೂರಕವಾಗಲಿದೆ ಎಂದು ತಿಳಿಸಿದರು.

ಮೈಸೂರು ವಿವಿ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಮಾತನಾಡಿ, ಆತಿಥ್ಯ, ಸತ್ಕಾರವೆಂಬುದು ನಮ್ಮ ಸಂಸ್ಕøತಿ. ವಿವಿಧ ದೇಶದಿಂದ ಆಗಮಿಸಿರುವ ವಿದ್ಯಾರ್ಥಿ ಗಳು ಶಿಕ್ಷಣದ ಜೊತೆಗೆ ಸಂಸ್ಕøತಿಯನ್ನು ಅರಿಯಬೇಕು. ಮೈಸೂರು ವಿವಿ ಸ್ಥಾಪಿಸಿದ ಕುವೆಂಪು ಅವರ ವಿಶ್ವಮಾನವ ಕಲ್ಪನೆ ಯನ್ನು ಅರಿತು ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪಿ.ವೇಣುಗೋಪಾಲ್, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಘದ ಒಕ್ಕೂಟದ ಅಧ್ಯಕ್ಷ ಮಲ್ಲಿಕ್ ಜೆಂಗ್, ಕಾರ್ಯದರ್ಶಿ ಟೆನ್‍ಜಿನ್ ಯೋಂಟೇನ್ ಮತ್ತಿತರರು ಉಪಸ್ಥಿತರಿದ್ದರು.

Translate »