ಬೆಂಗಳೂರು: ಉದ್ಯಮಿಯೊಬ್ಬರು ತನ್ನ ಪತ್ನಿ ಹಾಗೂ ತಾನೇ ಸಾಕಿದ್ದ ನಾಯಿಯನ್ನು ಕೊಂದು ಬಳಿಕ ತಾನೂ ಅಪಾರ್ಟ್ ಮೆಂಟ್ ನ ನಾಲ್ಕನೆ ಮಹಡಿ ಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಂಗಳವಾರ ನಡೆದಿದೆ.
ಇಂದು ಬೆಳಗ್ಗೆ ಸದಾಶಿವನಗರದ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ಅತುಲ್ ಉಪಾಧ್ಯಾಯ(60) ಎಂಬ ಉದ್ಯಮಿ ತಮ್ಮ ಪತ್ನಿ ಮಮತಾ ಉಪಾ ಧ್ಯಾಯ (50) ಅವರನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಮತಾ ಉಪಾಧ್ಯಾಯ ಅವರನ್ನು ಮನೆಯಲ್ಲಿಯೇ ನಾಯಿ ಚೈನ್ನಿಂದ ಹತ್ಯೆ ಮಾಡಿದ್ದು, ಬಳಿಕ ತನ್ನ ಮನೆಯ ನಾಯಿಯನ್ನು ಕೆಳಗೆ ಎಸೆದು, ತಾನು ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಮಮತಾ ಕ್ಯಾನ್ಸರ್ ಅಂತಿಮ ಹಂತದಲ್ಲಿತ್ತು. ಆದರೆ ದಂಪತಿಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ ಎಂದು ತಿಳಿಸಲಾಗಿದೆ. ಅತುಲ್ ಉಪಾಧ್ಯಾಯ ದಂಪತಿಗೆ ಮಕ್ಕಳಿರಲಿಲ್ಲ. ಆದರೆ ಕಾನೂನು ವಿದ್ಯಾರ್ಥಿಯಾಗಿ ರುವ ಅತುಲ್ ಸಹೋದರನ ಪುತ್ರ ಅವರೊಂದಿಗೆ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಆತ ಕಾಲೇಜ್ಗೆ ಹೋದ ನಂತರ ಈ ಘಟನೆ ನಡೆದಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.




