ಗ್ರಾಮಕ್ಕೆ ಬರಬೇಡಿ: ನಿಖಿಲ್‍ಗೆ ಹಿಟ್ಟನಹಳ್ಳಿ ಗ್ರಾಮಸ್ಥರ ತಡೆ
ಮಂಡ್ಯ

ಗ್ರಾಮಕ್ಕೆ ಬರಬೇಡಿ: ನಿಖಿಲ್‍ಗೆ ಹಿಟ್ಟನಹಳ್ಳಿ ಗ್ರಾಮಸ್ಥರ ತಡೆ

April 3, 2019

ಮಂಡ್ಯ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮಂಗಳ ವಾರ ಮಳವಳ್ಳಿ ತಾಲ್ಲೂಕಿನ ವಿವಿಧೆಡೆ ಪ್ರಚಾರ ನಡೆಸಿದಾಗ ಮುಜುಗರದ ಸನ್ನಿ ವೇಶವನ್ನು ಎದುರಿಸಬೇಕಾಯಿತು.

ಜತೆಗೆ ತಾಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪ್ರಚಾರಕ್ಕೆ ಗೈರು ಹಾಜರಾಗಿ ದ್ದರು. ನಿಖಿಲ್ ಜೊತೆಗೆ ಬಂದಿದ್ದ ಜೆಡಿಎಸ್ ಮುಖಂಡರನ್ನು ಹೊರತುಪಡಿಸಿ ನೂರು ನೂರೈವತ್ತು ಕಾರ್ಯಕರ್ತರು ಕಂಡು ಬಂದರು.
ಪ್ರವೇಶಕ್ಕೆ ತಡೆ: ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಪುತ್ರ ನಿಖಿಲ್ ಅವರ ಗ್ರಾಮ ಪ್ರವೇಶಕ್ಕೆ ತಡೆಯೊಡ್ಡಲಾಯಿತು.

ರಸ್ತೆಬದಿಯಲ್ಲಿ ಇರುವ ಅಂಗಡಿ ಗಳನ್ನು ತೆರವುಗೊಳಿಸಬೇಕು ಎಂದು ಹಲವು ಭಾರಿ ಮನವಿ ಮಾಡಿದ್ದೇವೆ. ಜೊತೆಗೆ ಗ್ರಾಪಂ ಮುಂದೆಯೂ ಉಗ್ರ ಪ್ರತಿಭಟನೆ ಮಾಡಿದ್ದೇವೆ. ಆದರೂ ಜನಪ್ರತಿನಿಧಿ ಗಳಾಗಲೀ, ಅಧಿಕಾರಿಗಳಾಗಲೀ ಯಾರೊ ಬ್ಬರೂ ನಮ್ಮ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಲೇ ಇಲ್ಲ ಎಂದು ಹಿಟ್ಟನ ಹಳ್ಳಿ ಗ್ರಾಮಸ್ಥರು ನಿಖಿಲ್ ಅವರನ್ನು ತರಾಟೆ ತೆಗೆದುಕೊಂಡರು. ಸಮಸ್ಯೆ ಬಗೆಹರಿಸದ ಮೇಲೆ ನಮ್ಮ ಗ್ರಾಮಕ್ಕೆ ಬರಬಾರದು ಎಂದೂ ಗ್ರಾಮಸ್ಥರು ತಕರಾರು ತೆಗೆದರು.

ನಿಖಿಲ್ ತೆರೆದ ವಾಹನದಿಂದಿಳಿದು ಹಿಟ್ಟನ ಹಳ್ಳಿಗೆ ಪ್ರವೇಶಿಸಲು ಮುಂದಾ ದಾಗ ಗ್ರಾಮಸ್ಥರು ತಡೆ ಒಡ್ಡಿದರು. ಹಿಟ್ಟನಹಳ್ಳಿ ಗ್ರಾಮಸ್ಥರ ಆಕ್ರೋಶ ಕಂಡ ನಿಖಿಲ್ ಕುಮಾರಸ್ವಾಮಿ, ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಜೆಡಿಎಸ್ ಮುಖಂಡರು ಮತ್ತೆ ತೆರೆದ ವಾಹನ ವನ್ನೇರಿ ನಿಂತು ಪ್ರಚಾರ ಭಾಷಣ ಮಾಡಿ ಅಲ್ಲಿಂದ ನಿರ್ಗಮಿಸಿದರು.

ನಿಖಿಲ್ ಮಳವಳ್ಳಿ ತಾಲೂಕಿನ ಚಿಕ್ಕ ಮೂಲಗೂಡು ಗ್ರಾಮದಲ್ಲಿ ಪ್ರಚಾರ ಕೈ ಗೊಂಡಿದ್ದಾಗ ಗ್ರಾಮದ ಮಹಿಳೆಯರು ಮತ್ತು ಯುವಕರು ಹಲವು ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರು, ಈ ಸಮಸ್ಯೆ ಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವೆ ಎಂದು ನಿಖಿಲ್ ಭರವಸೆ ನೀಡಿದರು,
ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಮಂಡ್ಯದ ಜನರ ಸುಖ-ದುಃಖದಲ್ಲಿ ಭಾಗಿಯಾಗಿದ್ದಾರೆ. ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ 1351 ಕೋಟಿ ರೂ. ಅನುದಾನ ನೀಡಿದ್ದು, ಮತದಾರರು ನನ್ನ ಕೈ ಹಿಡಿಯುತ್ತೀರಿ ಎಂದು ನಂಬಿದ್ದೇನೆ ಎಂದರು.

ಮಂಡ್ಯ ಜನರಿಗೆ ನೋವಾಗದಂತೆ ನಿಮ್ಮ ಮನೆ ಮಗನಂತೆ ಬದುಕುತ್ತೇನೆ. ಜೊತೆಗೆ ಜವಾಬ್ದಾರಿಯುತವಾಗಿ ನಡೆದುಕೊ ಳ್ಳುತ್ತೇನೆ ಎಂದು ಭರವಸೆ ನೀಡಿದರು.

Translate »