CFTRIನಿಂದ ಒಡಿಶಾ ಸಂತ್ರಸ್ತರಿಗೆ ಆಹಾರ
ಮೈಸೂರು

CFTRIನಿಂದ ಒಡಿಶಾ ಸಂತ್ರಸ್ತರಿಗೆ ಆಹಾರ

May 6, 2019

ಮೈಸೂರು: ಫೊನಿ ಚಂಡಮಾರುತದಿಂದ ತತ್ತರಿಸಿರುವ ಸಂತ್ರಸ್ತರಿಗೆ 25 ಟನ್ ಆಹಾರ ಪೂರೈಕೆ ಮಾಡಲು ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಮುಂದಾಗಿದ್ದು, ಮೊದಲ ಹಂತದಲ್ಲಿ ನಾಳೆ(ಮೇ 6) 5 ಟನ್ ಆಹಾರವನ್ನು ಒಡಿಶಾಗೆ ಸರಬರಾಜು ಮಾಡಲು ಕ್ರಮ ಕೈಗೊಂಡಿದೆ.

ಕಳೆದ ಮೂರ್ನಾಲ್ಕು ದಿನ ಗಳಿಂದ ಫೊನಿ ಚಂಡಮಾರುತ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಭಾರಿ ಅವಾಂತರ ಸೃಷ್ಟಿಸಿದ್ದು, ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. ಮಾನವೀ ಯತೆ ನೆಲೆಗಟ್ಟಿನಲ್ಲಿ ಮೈಸೂರಿನ ಸಿಎಫ್ ಟಿಆರ್‍ಐ ಶನಿವಾರ ಸಂಜೆಯಿಂದಲೇ ಸಂತ್ರಸ್ಥರಿಗೆ ಆಹಾರ ತಯಾರಿಕೆಗೆ ಸಿದ್ಧತೆ ಮಾಡಿಕೊಂಡಿತ್ತು. ಇಂದು ಬೆಳಗ್ಗಿನಿಂ ದಲೇ ಸಂಸ್ಥೆಯ ವಿಜ್ಞಾನಿಗಳು, ವಿದ್ಯಾರ್ಥಿ ಗಳು, ಸಿಬ್ಬಂದಿ ಕುಟುಂಬದ ಸದಸ್ಯ ರೊಂದಿಗೆ ಆಹಾರ ತಯಾರಿಕೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಏನೇನು: ಸಂತ್ರಸ್ತರಿಗೆ ಪೂರೈಸಲು ಅವಲಕ್ಕಿ (ಇಂಮ್ಲೀ ಪೋಹ), ಉಪ್ಪಿಟ್ಟು (ರೆಡಿ ಟು ಈಟ್), ಉಪ್ಪಿಟ್ಟು (ರೆಡಿ ಟು ಕುಕ್), ಚಪಾತಿ, ಟಮೋಟೋ ಚಟ್ನಿ, ಹೈ ಪೆÇ್ರೀಟಿನ್ ರಸ್ಕ್ ಮತ್ತು ಬಿಸ್ಕತ್ ತಯಾರಾಗುತ್ತಿದೆ. ಒಂದು ಲಕ್ಷ ಜನರಿಗೆ
ಆಹಾರ ಪೂರೈಕೆ ಮಾಡುವ ನಿಟ್ಟಿನಲ್ಲಿ 800 ಮಂದಿ ಆಹಾರ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ತುರ್ತು ಸ್ಪಂದನೆ: ಸಂತ್ರಸ್ತರಿಗೆ ಆಹಾರ ಸರಬರಾಜು ಮಾಡುತ್ತಿರುವುದಕ್ಕೆ ಸಂಬಂ ಧಿಸಿದಂತೆ ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್.ರಾಘವ ರಾವ್ ಭಾನುವಾರ ಪತ್ರಕರ್ತರೊಂದಿಗೆ ಮಾತ ನಾಡಿ, ಫೊನಿ ಚಂಡಮಾರುತದಿಂದ ಸಾಕಷ್ಟು ಹಾನಿಯಾಗಿರುವ ಬಗ್ಗೆ ಶುಕ್ರವಾರ ವಿಷಯ ತಿಳಿಯಿತು. ಅದೇ ದಿನ ಸಿಎಸ್ ಆರ್‍ಐ ಸಂಸ್ಥೆಯಿಂದ ಆಹಾರ ಪೂರೈಕೆ ಬಗ್ಗೆ ನಿರ್ದೇಶನ ಬಂತು. ತುರ್ತು ಸಭೆ ನಡೆಸಿ ಸಂತ್ರಸ್ತರಿಗೆ ಆಹಾರ ಸರಬರಾಜು ಮಾಡಲು ತೀರ್ಮಾನಿಸಲಾಯಿತು. ಏಳು ತರಹದ ಆಹಾರ ತಯಾರಿಸಲಾಗುತ್ತಿದೆ. ಕೇರಳದ ವೈನಾಡಿನಲ್ಲಿ ನಮ್ಮದೇ ತಂತ್ರಜ್ಞಾನ ದಲ್ಲಿ ಚಪಾತಿ ತಯಾರಿಕೆ ನಡೆಯುತ್ತಿದ್ದು, 20 ಸಾವಿರ ಚಪಾತಿ ಪ್ಯಾಕೇಟ್ (ನಾಲ್ಕು ಚಪಾತಿ) ಪೂರೈಸುತ್ತಿದ್ದಾರೆ. ಉಳಿದಂತೆ ಎಲ್ಲಾ ಪದಾರ್ಥಗಳನ್ನು ನಮ್ಮ ಸಂಸ್ಥೆಯಲ್ಲಿಯೇ ತಯಾರಿಸಲಾಗುತ್ತಿದೆ. ಒಟ್ಟು 1 ಲಕ್ಷ ಮೀಲ್ಸ್ ಪೆÇಟ್ಟಣ ತಯಾರಿಸುತ್ತಿz್ದÉೀವೆ. ಒಂದು ಮೀಲ್ಸ್ ಪೆÇಟ್ಟಣದಲ್ಲಿ 2 ಚಪಾತಿ, ಟಮೋಟೋ ಚಟ್ನಿ, ನಾಲ್ಕು ಹೈ ಪೆÇ್ರೀಟಿನ್ ಬಿಸ್ಕತ್, ರಸ್ಕ್, ರೆಡಿ ಟು ಇಟ್ ಉಪ್ಪಿಟ್ಟು ಇರುತ್ತದೆ. 25 ಟನ್ ಆಹಾರ ಕಳುಹಿಸಲು ಉದ್ದೇಶಿಸಿದ್ದೇವೆ ಎಂದರು.

ಸಿಬ್ಬಂದಿ ಕುಟುಂಬದ ಸದಸ್ಯರು ಭಾಗಿ: ಪೊನಿ ಚಂಡ ಮಾರುತ ಸಂತ್ರಸ್ತರಿಗೆ ಆಹಾರ ತಯಾರಿಕೆಗೆ ಹೆಚ್ಚಿನ ಬಲ ತುಂಬಲು ಸಿಎಫ್‍ಟಿಆರ್‍ಐನ ಸಿಬ್ಬಂದಿಯ ಕುಟುಂಬದ ಸದಸ್ಯರು, ಮಕ್ಕಳು, ವಿದ್ಯಾರ್ಥಿಗಳು ಭಾಗಿಯಾಗಿ ಸಂಸ್ಥೆಗೆ ಸಹಕಾರ ನೀಡುತ್ತಿದ್ದಾರೆ. ಉಪ್ಪಿಟ್ಟು, ಅವಲಕ್ಕಿ ಪ್ಯಾಕ್ ಮಾಡುವ ಕಾರ್ಯದಲ್ಲಿ ಮಕ್ಕಳು ಸಾಥ್ ನೀಡುತ್ತಿದ್ದಾರೆ.

ರೈಲ್ವೆ ಪೊಲೀಸರು: ಸಂತ್ರಸ್ಥರ ಆಹಾರ ತಯಾರಿಕೆಯಲ್ಲಿ ಸಿಎಫ್‍ಟಿಆರ್‍ಐನಲ್ಲಿ ಸೇವೆ ಸಲ್ಲಿಸಲು ಸರ್ಕಾರಿ ರೈಲ್ವೆ ಪೊಲೀಸ್ (ರಾಜ್ಯ ಪೊಲೀಸ್ ಇಲಾಖೆ ಸಿಬ್ಬಂದಿ)ನ ಐವರು ಸಿಬ್ಬಂದಿ ಸ್ವ-ಇಚ್ಛೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇನ್ಸ್‍ಪೆಕ್ಟರ್ ಜಯಕುಮಾರ್, ಸಬ್ ಇನ್ಸ್‍ಪೆಕ್ಟರ್ ಜಗದೀಶ್, ಮಹಿಳಾ ಪೇದೆಗಳಾದ ಟಿ.ಎಸ್.ಶೀಲಾ, ಹೆಚ್.ಎಸ್. ಅಶ್ವಿನಿ, ಜಿ.ಸುಮಿತ್ರಾ ಆಹಾರ ತಯಾರಿಕಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Translate »