ಬೆಂಗಳೂರು: ವೀಡಿಯೋ ಅಪ್‍ಲೋಡ್ ಮಾಡುವ ಮೂಲಕ ಪ್ರತ್ಯಕ್ಷನಾಗಿದ್ದಾನೆ. ಆತ ಹಲವಾರು ಸ್ಫೋಟಕ ಮಾಹಿತಿ ಗಳನ್ನು ಹೇಳುವ ಮೂಲಕ ರಾಜಕಾರಣಿಗಳು, ಉದ್ಯಮಿ ಗಳು ಹಾಗೂ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ್ದಾನೆ.
ಐಎಂಎ ಸಂಸ್ಥೆಯನ್ನು ಮುಗಿಸುವ ಯತ್ನದಲ್ಲಿ ಕೆಲ ರಾಜಕಾರಣಿಗಳು ಹಾಗೂ ಉದ್ಯಮಿಗಳು ಯಶಸ್ವಿಯಾಗಿ ದ್ದಾರೆ ಎಂದಿರುವ ಆತ, ಅವರೆಲ್ಲರಿಗೂ ಅಭಿನಂದನೆ ತಿಳಿಸಿ ದ್ದಾನೆ. ತಾನು ಹಲವರಿಗೆ ಹಣ ನೀಡಿದ್ದು, ಅದರ ಪಟ್ಟಿಯನ್ನು ತನಿಖಾಧಿಕಾರಿಗಳು ಹಾಗೂ ನ್ಯಾಯಾಲಯಕ್ಕೆ ನೀಡುವು ದಾಗಿ ಆತ ಹೇಳಿದ್ದಾನೆ. ತನ್ನನ್ನು ಮುಗಿಸಲು ಕೆಲವು ರಾಜಕಾರಣಿ ಗಳು ಸಂಚು ನಡೆಸಿದ ಕಾರಣ ತಾನು ಭಾರತ ಬಿಟ್ಟು ದುಬೈಗೆ ಬಂದಿದ್ದಾಗಿ ಹೇಳಿಕೊಂಡಿರುವ ಆತ, ಭಾರತಕ್ಕೆ ಬರಲು ಸಹಕರಿ ಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಅವರಿಗೆ ಮನವಿ ಮಾಡಿದ್ದಾನೆ.
ಐಎಂಎ ಸಂಸ್ಥೆಯು ಹಣವನ್ನು ಡಬ್ಲಿಂಗ್ ಮಾಡುವ ಸಂಸ್ಥೆ ಅಲ್ಲ. ಅಲ್ಲಿ ನಡೆಯುತ್ತಿದ್ದುದು ಪಕ್ಕಾ ಬಿಸಿನೆಸ್ ಎಂದು ಹೇಳಿರುವ ಆತ, 13 ವರ್ಷಗಳಲ್ಲಿ 21 ಸಾವಿರ ಹೂಡಿಕೆದಾರರಿಗೆ 12 ಸಾವಿರ ಕೋಟಿ ರೂ. ಲಾಭಾಂಶವನ್ನು ನೀಡಿ ದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ಭಾರತದಾದ್ಯಂತ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದೇನೆ. 7 ಸಾವಿರ ಮನೆಗಳಿಗೆ ಉಚಿತವಾಗಿ ಪಡಿತರ ನೀಡಿದ್ದೇನೆ ಎಂದು ಆತ ತನ್ನ ಸಂಸ್ಥೆ ಬಗ್ಗೆ ಹೇಳಿಕೊಂಡಿದ್ದಾನೆ. ತಾನು ಹೂಡಿಕೆದಾರರಿಗೆ 2 ಸಾವಿರ ಕೋಟಿ ನೀಡಬೇಕಾಗಿದ್ದು, ತನ್ನ ಬಳಿ ಈಗ 1350 ಕೋಟಿ ಆಸ್ತಿ ಇದೆ. ಅದನ್ನು ಹೂಡಿಕೆ ದಾರರಿಗೆ ಕೊಡುತ್ತೇನೆ. ನಾನು ಯಾರ್ಯಾರಿಗೆ ಹಣ ಕೊಟ್ಟಿ ದ್ದೇನೆ ಎಂಬ ಲಿಸ್ಟ್ ಅನ್ನು ನಿಮಗೆ ಕೊಡುತ್ತೇನೆ. ಅವರಿಂದ ಹಣ ವಸೂಲಿ ಮಾಡಿ, ಹೂಡಿಕೆದಾರರಿಗೆ ಕೊಡಿ ಎಂದು ಆತ ಅಲೋಕ್‍ಕುಮಾರ್ ಅವರಿಗೆ ಮನವಿ ಮಾಡಿದ್ದಾನೆ. ತಾನು ಭಾರತದಲ್ಲಿ ಉಪಯೋಗಿ ಸುತ್ತಿದ್ದ ಹಳೇ ಮೊಬೈಲ್ ನಂಬರ್‍ನಲ್ಲೇ ಸಂಪರ್ಕಕ್ಕೆ ಸಿಗುತ್ತಿದ್ದು, ಆ ನಂಬರ್ ಮೂಲಕ ನನ್ನ ಜೊತೆ ಮಾತನಾಡಬಹುದು ಎಂದು ಆತ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾನೆ. ಐಎಂಎ ಸಂಸ್ಥೆಯನ್ನು ಇನ್ನು ನಡೆಸಲು ಸಾಧ್ಯವಿಲ್ಲ. ಕಳೆದ 12 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದವರು ಸಂಸ್ಥೆಯನ್ನು ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹೂಡಿಕೆದಾರರಿಗೆ ಅನ್ಯಾಯವಾಗಬಾರದು. ನಾನು ಹೂಡಿಕೆದಾರರಿಗಾಗಿ ಭಾರತಕ್ಕೆ ಬರುತ್ತಿದ್ದೇನೆ. ಅವರ ಹಣವನ್ನು ಕೊಡುತ್ತೇನೆ. ಇನ್ನು ನಾನು ಯಾರ್ಯಾರಿಗೆ ಹಣ ನೀಡಿದ್ದೇನೆ ಎಂಬ ಪಟ್ಟಿ ಕೊಡುತ್ತೇನೆ. ಆ ಹಣ ವಸೂಲಿಗೆ ನೀವಾಗಿಯೇ ಹೋರಾಡುತ್ತೀರೋ? ಅಥವಾ ಅಧಿಕಾರಿಗಳ ಮೂಲಕ ಹೋರಾಡುತ್ತೀರೋ ನನಗೆ ಗೊತ್ತಿಲ್ಲ. ಒಟ್ಟಾರೆ ಅವರಿಂದ ಹಣ ವಸೂಲಿ ಮಾಡಿ ಹೂಡಿಕೆದಾರರಿಗೆ ನೀಡಬೇಕೆಂದು ಆತ ಹೇಳಿದ್ದಾನೆ. ಕಳೆದ 13 ವರ್ಷಗಳಿಂದ ಹೂಡಿಕೆದಾರರಿಗೆ ಲಾಭಾಂಶವನ್ನು ಕೊಟ್ಟಿದ್ದೇನೆ. ಆದರೆ ಕೆಲವರು ಮಾಡಿದ ಅನ್ಯಾಯದಿಂ ದಾಗಿ ಸಂಸ್ಥೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಯಿತು. ಇನ್ನು 2 ತಿಂಗಳು ಕಳೆದಿದ್ದರೆ, ಎಲ್ಲವನ್ನೂ ಸರಿ ಮಾಡುತ್ತಿದ್ದೆ.
ಆದರೆ ಹೂಡಿಕೆದಾರರು ಗೂಂಡಾಗಳನ್ನು ಕರೆದುಕೊಂಡು ಬಂದು ಬೆದರಿಕೆ ಹಾಕಲು ಶುರು ಮಾಡಿದರು. ಕೆಲವು ರಾಜಕಾರಣಿಗಳು ನನ್ನ ಕುತ್ತಿಗೆ ಮೇಲೆ ಬಂದು ಕುಳಿತರು. ಅವರಿಂದ ತಪ್ಪಿಸಿಕೊಳ್ಳಲು ನನ್ನ ಸಹಾಯಕ್ಕೆ ಯಾರೂ ಇಲ್ಲದ ಕಾರಣ ನಾನು ದುಬೈಗೆ ಬರಬೇಕಾಯಿತು. ಭಾರತ ಬಿಟ್ಟು ಬಂದದ್ದಕ್ಕಾಗಿ ನನಗೆ ದುಃಖವಿದೆ. ಜೂನ್ 14ರಂದು ನಾನು ಭಾರತಕ್ಕೆ ಬರಲು ಸಿದ್ಧನಾಗಿದ್ದೆ. ಏರ್‍ಪೋರ್ಟ್‍ಗೆ ತೆರಳಿದಾಗ ನನ್ನ ಪಾಸ್‍ಪೋರ್ಟ್ ಮತ್ತು ಏರ್ ಟಿಕೆಟ್ ಅಮಾನತು ಮಾಡಿರುವುದು ಗೊತ್ತಾಯಿತು. ಆದ್ದರಿಂದ ಬರಲು ಸಾಧ್ಯವಾಗಲಿಲ್ಲ ಎಂದು ಮನ್ಸೂರ್ ತಿಳಿಸಿದ್ದಾನೆ.
ಈಗ ನಾನು ಭಾರತಕ್ಕೆ ಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಾವು ನಾನು ಭಾರತಕ್ಕೆ ಬರಲು ವ್ಯವಸ್ಥೆ ಮಾಡಿ. ನೀವು ಯಾರನ್ನು ಭೇಟಿ ಮಾಡಲು ಹೇಳುತ್ತೀರೋ, ಅವರನ್ನು ಭೇಟಿಯಾಗುತ್ತೇನೆ. ನೀವು ಹೇಳಿದಂತೆ ಕೇಳುತ್ತೇನೆ. ನನಗೆ ಭಾರತದ ಕಾನೂನಿನ ಮೇಲೆ ಅಪಾರ ವಿಶ್ವಾಸವಿದೆ. ದಯವಿಟ್ಟು ನಾನು ಭಾರತಕ್ಕೆ ಬರಲು ವ್ಯವಸ್ಥೆ ಮಾಡಿ ಎಂದು ಆತ ಅಲೋಕ್ ಕುಮಾರ್ ಅವರನ್ನು ಪರಿ ಪರಿಯಾಗಿ ಕೇಳಿಕೊಂಡಿದ್ದಾನೆ.
ಐಎಂಎ ಕಚೇರಿ ಮುಂದೆ ಪ್ರತಿಭಟಿಸಿದ ಹೂಡಿಕೆದಾರರು: ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಹರಿಬಿಟ್ಟ ವಿಡಿಯೋ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಹೂಡಿಕೆದಾರರು, ಶಿವಾಜಿನಗರ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಕಚೇರಿ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಐಎಂಎ ಕಚೇರಿ ಮುಂದೆ ಜಮಾಯಿಸಿ ನಮಗೆ ವಿಡಿಯೋ ಬೇಡ ಹಣ ಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆ ಜೋರಾಗು ತ್ತಿದ್ದಂತೆ ಸ್ಥಳದಲ್ಲಿದ್ದ ಪೆÇಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಕೆಲಕಾಲ ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಕಚೇರಿ ಮುಂದೆ ಪ್ರತಿಭಟಿಸದಂತೆ ತಾಕೀತು ಮಾಡಿ ಪೆÇಲೀಸರು ಜನರನ್ನು ಚದುರಿಸಿದರು.
ಕೆಲ ರಾಜಕಾರಣಿಗಳಿಂದ ನನ್ನ ಕೊಲೆಗೆ ಸಂಚು
ಬೆಂಗಳೂರು, ಜೂ.23-ಕೆಲ ರಾಜಕಾರಣಿಗಳು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಇಂದು ತಾನು ವೈರಲ್ ಮಾಡಿರುವ ವೀಡಿಯೊದಲ್ಲಿ ತಿಳಿಸಿದ್ದಾನೆ.
ತನ್ನನ್ನು ಹಾಗೂ ಕುಟುಂಬದವರನ್ನು ಕೊಲೆ ಮಾಡಲು ಕೆಲವು ರಾಜಕಾರಣಿಗಳು ಸಂಚು ರೂಪಿಸಿದ್ದರಿಂದ ನಾನು ಭಾರತ ತೊರೆಯಬೇಕಾಯಿತು ಎಂದು ಹೇಳಿರುವ ಆತ, ನನ್ನಿಂದ ಹಣ ಪಡೆದಿರುವ ಹೆಸರು ಈಗಲೇ ಬಹಿರಂಗ ಪಡಿಸಿದರೆ ಅವರುಗಳು ಭಾರತದಲ್ಲಿರುವ ನನ್ನ ಕುಟುಂಬದವರನ್ನು ಮುಗಿಸಿ ಬಿಡುತ್ತಾರೆ. ಆದ್ದರಿಂದ ನಾನು ಭಾರತಕ್ಕೆ ಬಂದ ಮೇಲೆ ತನಿಖಾಧಿಕಾರಿಗಳು ಹಾಗೂ ನ್ಯಾಯಾ ಲಯದ ಮುಂದೆ ಅವರ ಪಟ್ಟಿಯನ್ನು ಕೊಡುತ್ತೇನೆ ಎಂದು ಮನ್ಸೂರ್ ಹೇಳಿದ್ದಾನೆ.
ನಾನು ಭಾರತಕ್ಕೆ ಬಂದರೆ ಅವರುಗಳು ನನ್ನನ್ನು ಮುಗಿಸಿ ಬಿಡುವ ಸಾಧ್ಯತೆ ಇದೆ. ಪೊಲೀಸ್ ಕಸ್ಟಡಿಯಲ್ಲಿದ್ದರೂ, ನನ್ನನ್ನು ಮುಗಿಸುತ್ತಾರೆ ಎಂದು ನನಗೆ ಗೊತ್ತಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದರೆ, ಅಲ್ಲೂ ನನಗೆ ರಕ್ಷಣೆ ಸಿಗಲ್ಲ. ಜಾಮೀನು ತೆಗೆದುಕೊಂಡು ಬಂದರೆ ರಸ್ತೆಯಲ್ಲೇ ನನ್ನನ್ನು ಮುಗಿಸುತ್ತಾರೆ ಎಂದು ಹೇಳಿರುವ ಆತ, ಇದೆಲ್ಲಾ ಗೊತ್ತಿದ್ದು, ನಾನು ಹೆದರದೇ ಭಾರತಕ್ಕೆ ಬರುತ್ತಿರುವುದು ನನಗೋಸ್ಕರ ಅಲ್ಲ. ಹೂಡಿಕೆದಾರರಿಗೆ ಅನ್ಯಾಯವಾಗಬಾರದು. ಅವರಿಗೆ ಹಣ ಹಿಂತಿರುಗಿಸಬೇಕು ಎಂಬ ಕಾರಣದಿಂದ ಬರುತ್ತಿದ್ದೇನೆ ಎಂದು ಮನ್ಸೂರ್ ಹೇಳಿದ್ದಾನೆ.
ಮನ್ಸೂರ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ
ಬೆಂಗಳೂರು, ಜೂ.23- ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮನ್ಸೂರ್ ಖಾನ್ ವಿರುದ್ಧ ಇಂಟಪೆರ್Çೀಲ್ ಬ್ಲೂ ಕಾರ್ನರ್ ನೋಟಿಸ್ (ಬಿಸಿಎನ್) ಹೊರಡಿಸಿದೆ. ಎಸ್‍ಐಟಿ ಕೋರಿಕೆಯ ಆಧಾರದ ಮೇಲೆ, ಕೇಂದ್ರ ತನಿಖಾ ವಿಭಾಗದ ಇಂಟರ್ ಪೆÇೀಲ್ ವಿಭಾಗವು ಜೂನ್ 8ರಂದು ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪರಾರಿಯಾಗಿದ್ದಾನೆ ಎನ್ನಲಾದ ಮನ್ಸೂರ್ ವಿರುದ್ಧ ಬಿಸಿಎನ್ ಹೊರಡಿ ಸಿದೆ. ಕ್ರಿಮಿನಲ್ ತನಿಖೆಗೆ ಅಗತ್ಯವಾಗಿ ರುವ ವ್ಯಕ್ತಿಯನ್ನು ಪತ್ತೆಹಚ್ಚಲು, ಗುರು ತಿಸಲು ಅಥವಾ ವಶಕ್ಕೆ ಪಡೆಯಲು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡ ಲಾಗುತ್ತದೆ. “ಇಂಟಪೆರ್Çೀಲ್ ನೋಟಿಸ್ ನಂತರ ಮನ್ಸೂರ್ ಪಾಸ್‍ಪೆÇೀರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ.
ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್, ಎಂಎಲ್‍ಸಿ ಶರವಣನ್ ಸೇರಿ ಹಲವರ ಹೆಸರು ಪ್ರಸ್ತಾಪ
ಬೆಂಗಳೂರು, ಜೂ.23-ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್, ತನ್ನ ವೀಡಿಯೊದಲ್ಲಿ ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್, ವಿಧಾನ ಪರಿಷತ್ ಸದಸ್ಯ ಶರವಣನ್ ಸೇರಿದಂತೆ ಹಲವು ರಾಜ ಕಾರಣಿಗಳು ಹಾಗೂ ಉದ್ಯಮಿಗಳ ಹೆಸರನ್ನು ಪ್ರಸ್ತಾಪಿಸಿದ್ದಾನೆ. ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್, ರಾಜ್ಯ ಜ್ಯೂವೆಲರ್ಸ್ ಸಂಘದ ಅಧ್ಯಕ್ಷರೂ ಆಗಿರುವ ಜೆಡಿಎಸ್‍ನ ವಿಧಾನ ಪರಿಷತ್ ಸದಸ್ಯ ಶರವಣನ್, ಉಗ್ರವಾದಿಗಳ ಜೊತೆ ನಂಟು ಹೊಂದಿದ್ದಾನೆ ಎನ್ನಲಾದ ಮುಖ್ತಿಯಾರ್, ಕಾಂಗ್ರೆಸ್ ಕಾರ್ಯಕರ್ತ ಒಬೇದುಲ್ಲಾ, ಪಾಸ್ವಾನ್ ಪತ್ರಿಕೆಯ ಸಂಪಾದಕ ಇರ್ಫಾನ್, ಫೈರೋಜ್ ರಿಯಲ್ ಎಸ್ಟೇಟ್‍ನ ಫೈರೋಜ್ ಅಬ್ದುಲ್ಲಾ ಸೇಠ್, ಮೌಲ್ವಿ,
ಜೈನುಲ್ ಅಭಿದ್ದೀನ್, ಮುಫ್ತಿ ಶಂಶುದ್ದೀನ್, ಮುಫ್ತಿ ಇಫ್ತಾಖಾರಾಜ್ ಖಾನ್, ರೆಹಬರ್ ಫೈನಾನ್ಸ್, ತಾಸೀಜ್‍ಗ್ರೂಪ್ಸ್, ಜûಡ್ ಚಿಟ್ ಫಂಡ್ಸ್ ಮುಂತಾದವರೆಲ್ಲಾ ಸೇರಿಕೊಂಡು ಐಎಂಎ ಸಂಸ್ಥೆಯನ್ನು ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿರುವ ಆತ, ಅವರಿಗೆಲ್ಲಾ ಅಭಿನಂದನೆ ತಿಳಿಸಿದ್ದಾನೆ. ಈಗಾಗಲೇ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ ಎಂದು ಹೇಳುವ ಮೂಲಕ ಜೂನ್ 8ರಂದು ಅಂದಿನ ಬೆಂಗಳೂರು ಪೊಲೀಸ್ ಆಯುಕ್ತರಿಗೆ ರವಾನಿಸಿದ್ದ ಆಡಿಯೋ ತನ್ನದೇ ಎಂಬುದನ್ನು ಸ್ಪಷ್ಟಪಡಿಸಿರುವ ಆತ, ಈಗ ವೀಡಿಯೊ ಬಿಡುಗಡೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣದ ಮೂಲಕ ನನ್ನ ವಿರುದ್ಧ ತಪ್ಪು ಸಂದೇಶ ರವಾನಿಸಿ ಐಎಂಎ ಮುಗಿಸಿದ್ದಾರೆ. ಶೇ.99ರಷ್ಟು ಜನ ನನ್ನ ವಿರುದ್ಧ ತಪ್ಪು ಭಾವನೆ ಹೊಂದಿದ್ದಾರೆ. ಶೇ.1ರಷ್ಟು ಜನ ಮಾತ್ರ ನನ್ನ ಬೆಂಬಲಕ್ಕೆ ಇದ್ದಾರೆ ಎಂದಿರುವ ಆತ, ನಾನು ಸಾಯಬೇಕೆಂದಿದ್ದೆ. ಆದರೆ ಈಗ ನಾನು ಸಾಯು ವುದಿಲ್ಲ. ಐಎಂಎ ಮುಗಿಸಿದವರು ಹಾಗೂ ನನ್ನಿಂದ ಹಣ ಪಡೆದಿರುವವರೂ ಕೂಡ ಜವಾಬ್ದಾರ ರಾಗಬೇಕು. ನಾನು ತಪ್ಪಿತಸ್ಥ ಎನ್ನುವುದಾದರೆ ನನ್ನ ಹಿಂದೆ ಇರುವ ಅನೇಕರು ತಪ್ಪಿತಸ್ಥರೇ. ಅವರಿಗೂ ಶಿಕ್ಷೆ ಆಗಬೇಕು ಎಂದು ಮನ್ಸೂರ್ ಹೇಳಿದ್ದಾನೆ.