ಮೈಸೂರು, ಜು.13(ಎಸ್‍ಪಿಎನ್)-ಮೈಸೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ವಿಚಾ ರಣೆ ನಡೆಯುತ್ತಿದ್ದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾ ಲತ್ ಮೂಲಕ ವಾದಿ-ಪ್ರತಿವಾದಿಗಳ ಸಮ್ಮುಖದಲ್ಲಿ ಇತ್ಯರ್ಥಪಡಿಸಲಾಯಿತು.
ಮೈಸೂರು ಹಳೇ ನ್ಯಾಯಾಲಯದ ಆವ ರಣದಲ್ಲಿ ಶನಿವಾರ ನಡೆದ ಅದಾಲತ್ ನಲ್ಲಿ ಬೆಳಗ್ಗಿನಿಂದಲೇ 50 ಬೆಂಚ್‍ಗಳಲ್ಲಿ ಆರಂಭಗೊಂಡ ಅದಾಲತ್ ಸಂಜೆಯವ ರೆಗೂ ನಡೆಯಿತು. ಅದಾಲತ್‍ಗೆ ದಾಖ ಲಾದ 11,186 ಪ್ರಕರಣಗಳಲ್ಲಿ 3322 ಪ್ರಕ ರಣಗಳು ಇತ್ಯರ್ಥಗೊಂಡು ಒಟ್ಟು 20,84, 30,551 ರೂ.ಗಳ ಪರಿಹಾರ ನೀಡಲಾಗಿದೆ.
ಕಳೆದ ಅದಾಲತ್‍ನಲ್ಲಿ 1400 ಪ್ರಕ ರಣಗಳು ಇತ್ಯರ್ಥಗೊಂಡಿದ್ದು, 1753 ವಿಚಾರಣಾ ಪೂರ್ವ ಪ್ರಕರಣಗಳಲ್ಲಿ 116 ಪ್ರಕರಣಗಳು ಇತ್ಯರ್ಥಗೊಂಡರೆ, 9,433 ಬಾಕಿ ಪ್ರಕರಣಗಳಲ್ಲಿ 3206 ಪ್ರಕರಣಗಳು ಇತ್ಯರ್ಥಗೊಂಡವು.
1753 ಬ್ಯಾಂಕ್ ರಿಕವರಿ ಕೇಸ್‍ಗಳಲ್ಲಿ 116 ಪ್ರಕರಣಗಳನ್ನು ವಿಚಾರಣಾ ಪೂರ್ವ ದಲ್ಲಿ ಇತ್ಯರ್ಥಗೊಳಿಸಿ 15,43,1888 ರೂ. ವಸೂಲಿ ಮಾಡಿದ್ದು, 188 ಪೇಂಡಿಂಗ್ ಕೇಸ್‍ನಲ್ಲಿ 30 ಪ್ರಕರಣಗಳನ್ನು ಇತ್ಯರ್ಥ ಗೊಳಿಸಿ 41,82,470 ರೂ.ಗಳ ವಸೂಲಿ ಮಾಡಲಾಗಿದೆ. 1739 ಕ್ರಿಮಿನಲ್ ಹಿನ್ನೆಲೆ ಯುಳ್ಳ ಪ್ರಕರಣಗಳಲ್ಲಿ 520 ವ್ಯಾಜ್ಯಗಳನ್ನು ಇತ್ಯರ್ಥಪಡಿಸಿ 8,42,840 ರೂ.ಗಳ ಪರಿಹಾರ , 612 ಎಂ.ಆಕ್ಟ್ ಪ್ರಕರಣಗಳ ಪೈಕಿ 168 ಪ್ರಕರಣಗಳನ್ನು ಇತ್ಯರ್ಥಪಡಿಸಿ 4,02,12,170 ರೂ.ಗಳ ಪರಿಹಾರ, 3033 ಇತರೆ ಸಿವಿಲ್ ಪ್ರಕರಣಗಳ ಪೈಕಿ 497 ಪ್ರಕರಣಗಳನ್ನು ಇತ್ಯರ್ಥಪಡಿಸಿ 7,07,10, 688 ರೂ.ಗಳ ಪರಿಹಾರ, 1867 ಎನ್‍ಐ ಆಕ್ಟ್ ಕೇಸ್ 138ರ ಪ್ರಕರಣಗಳ ಪೈಕಿ 7,33,64,497 ರೂ.ಗಳನ್ನು ಪರಿಹಾರ ಮಾಡ ಲಾಗಿದೆ. 1820 ಇತರೆ ಕ್ರಿಮಿನಲ್ ಪ್ರಕರಣ ಗಳಲ್ಲಿ 1399 ಪ್ರಕರಣಗಳನ್ನು ಇತ್ಯರ್ಥ ಪಡಿಸಿ 3,71,60,00 ರೂ.ಗಳ ಪರಿಹಾರ ನೀಡಲಾಗಿದೆ. ಅದಾಲತ್‍ನ ಪ್ರಯೋಜನ ವನ್ನು ಸಾರ್ವಜನಿಕರು ಪಡೆದುಕೊಂಡಿ ದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ತಿಳಿಸಿದಾರೆ.