ಉತ್ತಮ ಸಮಾಜಕ್ಕೆ ಪೂರ್ಣ ಸಂವಿಧಾನ ಜಾರಿ ಅಗತ್ಯ: ನಳಂದ ಬುದ್ಧ ವಿಹಾರದ ಬಂತೆ ಬೋಧಿದತ್ತ ಅಭಿಪ್ರಾಯ
ಮಂಡ್ಯ

ಉತ್ತಮ ಸಮಾಜಕ್ಕೆ ಪೂರ್ಣ ಸಂವಿಧಾನ ಜಾರಿ ಅಗತ್ಯ: ನಳಂದ ಬುದ್ಧ ವಿಹಾರದ ಬಂತೆ ಬೋಧಿದತ್ತ ಅಭಿಪ್ರಾಯ

December 11, 2019

ಮಂಡ್ಯ, ಡಿ.10(ನಾಗಯ್ಯ)- ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿ ಧಾನ ಸಂಪೂರ್ಣವಾಗಿ ಜಾರಿಯಾದರೆ ಪೆÇಲೀಸ್ ಠಾಣೆ ಹಾಗೂ ನ್ಯಾಯಾಲಯ ಗಳ ಅವಶ್ಯಕತೆಯೇ ಇರುವುದಿಲ್ಲ ಎಂದು ಚಾಮರಾಜನಗರ ನಳಂದ ಬುದ್ಧ ವಿಹಾ ರದ ಬಂತೆ ಬೋಧಿದತ್ತ ಅಭಿಪ್ರಾಯಪಟ್ಟರು.

ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿಎಸ್-4 ಕರ್ನಾಟಕ) ಜಿಲ್ಲಾ ಸಮಿತಿ ವತಿಯಿಂದ ಡಾ.ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಡಾ. ಅಂಬೇಡ್ಕರ್ ಸಿದ್ಧಾಂತ ಮತ್ತು ಭಾರತ ಸಂವಿಧಾನಕ್ಕೆ ಗೌರವಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಂವಿಧಾನ ಓದುವುದಕ್ಕೂ ಹಾಗೂ ಅರ್ಥ ಮಾಡಿಕೊಳ್ಳುವುದಕ್ಕೂ ಹೆಚ್ಚು ಬುದ್ಧಿವಂತಿಕೆ ಬೇಕಿದೆ. ಪ್ರಸ್ತುತ ಸಮಸ್ಯೆ ಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಪರಿಹಾರವಿದೆ. ಆದರೆ ನಮ್ಮ ಸಂವಿಧಾನ ಸಂಪೂರ್ಣವಾಗಿ ಜಾರಿ ಯಾಗದೇ ಇಂದಿಗೂ ಸಾಮಾಜಿಕ ಅಸಮ ತೋಲನ ಹಾಗೆಯೇ ಉಳಿದಿದೆ. ನಮ್ಮ ಸಂವಿಧಾನ ಯಥಾವತ್ ಜಾರಿಯಾದಲ್ಲಿ ವಾರಣಾಸಿ ರಾಜರ ಕಾಲದಂತೆಯೇ ದೇಶ ಅತ್ಯುನ್ನತ ಸ್ಥಿತಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.

ಸಂವಿಧಾನ ಅತ್ಯುನ್ನತ ಸ್ಥಾನದಲ್ಲಿ ಮುಂದು ವರಿಯಬೇಕು. ಈ ಮಹಾನ್ ಕಾರ್ಯ ವಾದರೆ ಮಾತ್ರ ಸಮಾಜದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ವಾರಣಾಸಿ ರಾಜರ ಕಾಲದಲ್ಲಿಯೇ ಸಂವಿಧಾನವಿತ್ತು. ಅದರಲ್ಲಿ ಸಮಾನತೆ, ಸಹೋದರತ್ವವಿತ್ತು. ಆ ಕಾಲದಲ್ಲಿ ಸಂಪೂರ್ಣವಾಗಿ ಕಾನೂನು ಜಾರಿ ಯಾಗಿತ್ತು. ಇದರ ಪರಿಣಾಮವೇ ಆಗಿನ ಕೋರ್ಟ್‍ಗಳು ಮುಚ್ಚಿದ್ದವು. ಅಲ್ಲಿನ ನ್ಯಾಯಾಧೀಶರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಅಂತೆಯೇ ಪ್ರಸ್ತುತ ಸಂವಿ ಧಾನಕ್ಕೂ ಹಿಂದಿನ ಸಂವಿಧಾನಕ್ಕೆ ಸಂಬಂಧ ವಿದೆ ಎಂಬಂತೆ ಗೋಚರಿಸುತ್ತದೆ ಎಂದರು.

ಅಂಬೇಡ್ಕರ್ ರಚಿಸಿರುವ ಸಂವಿಧಾನ ಈ ಭೂಮಿ ಇರುವವರೆಗೂ ಇರುತ್ತದೆ. ಇದರಲ್ಲಿ ಒಂದು ಪದವನ್ನು ಅಳಿಯಲು ಬಿಡುವುದಿಲ್ಲ. ಆ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುತ್ತೇವೆ ಎಂದರು.

ಸಂವಿಧಾನದ ಬಗ್ಗೆ ತಿಳಿದುಕೊಂಡು ಅದನ್ನು ಉಳಿಸಬೇಕು. ಸಂವಿಧಾನ ಪರಿಚಯಿಸುವ ಒಂದು ಪುಸ್ತಕದ ಬೆಲೆ ಕೇವಲ 240 ರೂ.ಗೆ ಸಿಗುತ್ತದೆ. ಅದನ್ನು ತೆಗೆದುಕೊಂಡು ಪ್ರತಿ ಮನೆಯಲ್ಲಿಯೂ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯೆ, ಭೂಮಿ, ಕೈಗಾರಿಕೆ, ವಿಮಾ ಕ್ಷೇತ್ರವನ್ನು ರಾಷ್ಟ್ರೀಕರಣ ಮಾಡುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನಸ್ಸು ಮಾಡಬೇಕಿದೆ ಎಂದರು.

ಕೇವಲ ಅಂಬೇಡ್ಕರ್ ಅವರಿಗೆ ಕೈ ಮುಗಿ ಯುತ್ತಾ ಅಧಿಕಾರಕ್ಕೆ ಬಂದಿದ್ದೇನೆ ಎಂದು ಹೇಳಿಕೊಂಡು, ಇವೆಲ್ಲವನ್ನೂ ರಾಷ್ಟ್ರೀ ಕರಣ ಮಾಡುವುದಕ್ಕೆ ಹೊರಟಿರುವ ನಿಮ್ಮ ನಡೆ ಖಂಡನೀಯ ಇದು ದೇಶದ ಜನರನ್ನು ಬಡತನದ ಕೂಪಕ್ಕೆ ದೂಡುವ ಪ್ರಯತ್ನ ವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.ಕಾರ್ಯಕ್ರಮದಲ್ಲಿ ವಕೀಲ ಬಿ.ಟಿ.ವಿಶ್ವ ನಾಥ್, ಹನುಮಂತರಾಯಪ್ಪ, ರಮೇಶ್, ಪಾರ್ವತಮ್ಮ, ಆನಂದ್ ಇತರರಿದ್ದರು.

Translate »