ಮೈಸೂರು, ಫೆ.28(ಎಸ್ಬಿಡಿ)- ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗದಿಂದ ಮೊದಲ ಬಾರಿಗೆ ಆರಂಭಿಸಿದ ಸ್ಲೀಪರ್ ಸೌಲಭ್ಯದ 4 ವೋಲ್ವೊ ಬಸ್ಗಳ ಸಂಚಾರ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಸಬರ್ಬನ್ ಬಸ್ ನಿಲ್ದಾಣ ದಲ್ಲಿ ಚಾಲನೆ ನೀಡಿದರು.
ಮೈಸೂರು-ಸಿಕಂದರಾಬಾದ್ ಮಾರ್ಗ ದಲ್ಲಿ 2 `ಅಂಬಾರಿ ಡ್ರೀಮ್ಕ್ಲಾಸ್ ಎಸಿ ಸ್ಲೀಪರ್ ಬಸ್’ಗಳು ಸಂಚರಿಸಲಿವೆ. ಇವು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್ ಸಂಪ ರ್ಕಿಸಲಿವೆ. ಕೆಂಗೇರಿ ನೈಸ್ ರಸ್ತೆ ಮುಖಾಂ ತರ ಹೆಬ್ಬಾಳ, ಯಲಹಂಕ ಮಾರ್ಗವಾಗಿ ಸಂಚಾರ ಮಾಡುವುದರಿಂದ ನೇರ ಪ್ರಯಾ ಣಿಕರಿಗೆ ಒಂದು ಗಂಟೆಗೂ ಹೆಚ್ಚು ಸಮ ಯದ ಪ್ರಯಾಣ ಕಡಿಮೆಯಾಗಲಿದೆ. ಈ ಬಸ್ಗಳು ನಿತ್ಯ ಸಂಜೆ 7.15ಕ್ಕೆ ಮೈಸೂರಿ ನಿಂದ, ಸಂಜೆ 6.30ಕ್ಕೆ ಸಿಕಂದರಾಬಾದ್ ನಿಂದ ಹೊರಡಲಿವೆ. ಮೈಸೂರು-ಬೆಳ ಗಾವಿ ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು 2 ನೂತನ `ಅಂಬಾರಿ ಡ್ರೀಮ್ ನಾನ್ ಎಸಿ ಸ್ಲೀಪರ್ ಬಸ್’ ಸಂಚರಿ ಸಲಿವೆ. ಮೈಸೂರಿನಿಂದ ಕೆ.ಆರ್ ನಗರ, ಚನ್ನರಾಯಪಟ್ಟಣ, ಅರಸೀಕೆರೆ, ಶಿವ ಮೊಗ್ಗ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿ ತಲುಪುತ್ತವೆ. ಈ ಬಸ್ಗಳು ನಿತ್ಯ ಸಂಜೆ 7.30ಕ್ಕೆ ಮೈಸೂರಿನಿಂದ ಹಾಗೂ ರಾತ್ರಿ 9ಕ್ಕೆ ಬೆಳಗಾವಿಯಿಂದ ಹೊರಡಲಿವೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಬಸ್ ಸೇವೆಗೆ ಸಚಿವರು ಚಾಲನೆ ನೀಡಿದ ಸಂದರ್ಭ ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾ ಧಿಕಾರಿ ಅಶೋಕ್ಕುಮಾರ್ ಮತ್ತಿತರರಿದ್ದರು.