ಗಾಂಧಿ ಚಿಂತನೆಯತ್ತ ಮುಖ ಮಾಡಿದ ಜಗತ್ತು
ಮೈಸೂರು

ಗಾಂಧಿ ಚಿಂತನೆಯತ್ತ ಮುಖ ಮಾಡಿದ ಜಗತ್ತು

March 5, 2020

ಮೈಸೂರು,ಮಾ.4(ಪಿಎಂ)- ಶಾಂತಿ, ಸಹನೆ, ಪ್ರೀತಿ, ಸಹಬಾಳ್ವೆ ಸೇರಿದಂತೆ ಗಾಂಧಿ ಚಿಂತನೆಗಳು ಇಂದಿಗೂ ಪ್ರಸ್ತುತ. ಇಡೀ ಜಗತ್ತೇ ಈಗ ಇಂತಹ ಉದಾತ್ತ ಚಿಂತನೆ ಗಳತ್ತ ಮುಖ ಮಾಡುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ. ಆರ್.ಶಿವಪ್ಪ ಹೇಳಿದರು.

ಮೈಸೂರಿನ ಬಾಸುದೇವ ಸೋಮಾನಿ ಕಾಲೇಜು ವತಿಯಿಂದ ಕಾಲೇಜು ಸಭಾಂ ಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಟಿ.ರಮೇಶ್ ಹಾಗೂ ಹೆಚ್.ಪಿ.ಭವ್ಯ ಅವರ ಸಂಪಾದಕತ್ವದ `ಗಾಂಧಿ ಚಿಂತನೆಗಳ ಪ್ರಸ್ತು ತತೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಗಾಂಧಿಯನ್ನು ಕೇವಲ ಅಧ್ಯಯನ ದೃಷ್ಟಿ ಯಿಂದ ಅಥವಾ ಇತಿಹಾಸದ ಭಾಗವಾಗಿ ಓದಿದರೆ ಅವರ ಚಿಂತನೆ, ತತ್ವಗಳನ್ನು ತಿಳಿ ಯಲು ಸಾಧ್ಯವಿಲ್ಲ. ಕಣ್ಣೆದುರಿಗೇ ಇರುವ ಹಾಗೆ ಓದಬೇಕು ಎಂದರು.

ಕೃತಿ ಕುರಿತು ಮೈವಿವಿ ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಮಾತ ನಾಡಿ, ಗಾಂಧೀಜಿ ದೇಶದಲ್ಲಿ ಒಂದು ಗಟ್ಟಿ ಬೀಜವಾಗಿ ನಿಂತು ಹುಲುಸಾದ ಫಸಲನ್ನು ನೀಡಿ ಹೆಮ್ಮರವಾಗಿದ್ದಾರೆ. ಪ್ರಪಂಚದ 400 ಭಾಷೆಗಳಲ್ಲಿ ಗಾಂಧಿ ಕುರಿತ ಜೀವನ ಚರಿತ್ರೆ ಬಂದಿವೆ. `ಗಾಂಧಿ ಚಿಂತನೆಗಳ ಪ್ರಸ್ತು ತತೆ’ ಕೃತಿಯಲ್ಲಿ 33 ಲೇಖನಗಳಿವೆ. ಜಡ್ಡು ಗಟ್ಟಿರುವ ಸಮಾಜಕ್ಕೆ ಇಂತಹ ಕೃತಿಗಳು ಚೈತನ್ಯ ನೀಡಬಲ್ಲವು ಎಂದರು. ದಿ ಇನ್‍ಸ್ಟಿ ಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್‍ನ ಮ್ಯಾನೇ ಜಿಂಗ್ ಟ್ರಸ್ಟಿ ಎಂ.ಪುಟ್ಟಸ್ವಾಮಿ, ಕಾಲೇ ಜಿನ ಪ್ರಾಂಶುಪಾಲ ಎಂ.ಮಹದೇವಯ್ಯ, ಕೃತಿ ಸಂಪಾದಕರಾದ ಟಿ.ರಮೇಶ್, ಹೆಚ್. ಪಿ.ಭವ್ಯ ಮತ್ತಿತರರಿದ್ದರು.

Translate »