2020ರ ಜ. 4ರಿಂದ ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣೆ
ಮೈಸೂರು

2020ರ ಜ. 4ರಿಂದ ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣೆ

December 14, 2019

ಮೈಸೂರು,ಡಿ.13(ಆರ್‍ಕೆ)-2019ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷಾ ಕಾರ್ಯವು 2020ರ ಜನವರಿ 4ರಿಂದ ಮೈಸೂರು ನಗರದಲ್ಲಿ ನಡೆಯಲಿದೆ.

ಮತ್ತೊಮ್ಮೆ ಮೈಸೂರು ನಗರ ಸ್ವಚ್ಛತೆ ಯಲ್ಲಿ ಪ್ರಥಮ ಸ್ಥಾನ ಪಡೆಯಲು ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ವಿಭಾ ಗದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಸಕಲ ತಯಾರಿ ನಡೆಸುತ್ತಿದ್ದಾರೆ. ಕೇಂದ್ರದ ನಗರಾಭಿವೃದ್ಧಿ ಇಲಾಖೆಯು ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ನಡೆಸುತ್ತಿದ್ದು, ಅಧಿಕಾರಿಗಳ ತಂಡವು 2020ರ ಜನವರಿ 4ರಿಂದ ಮೈಸೂರು ನಗರದಲ್ಲಿ ಸ್ವಚ್ಛತಾ ಸಮೀಕ್ಷೆ ನಡೆಸಲಿದೆ.

ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯ ಮೌಲ್ಯ ಮಾಪನ ಕಾರ್ಯ ಆರಂಭವಾಗಿದ್ದು, ಮೈಸೂರು ನಗರಪಾಲಿಕೆಯು ನಿರ್ವಹಣೆ ಮಾಡುತ್ತಿರುವ ಸ್ವಚ್ಛತೆ ಬಗ್ಗೆ ಸಾರ್ವಜನಿ ಕರು ಸ್ವಚ್ಛತಾ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು ತಮ್ಮ ಸುತ್ತಲಿನ ಪ್ರದೇಶ ದಲ್ಲಿ ಅಶುಚಿತ್ವ, ಕಸದ ರಾಶಿ, ಒಳಚರಂಡಿ ಬಂದ್ ಆಗಿರುವುದು, ಮ್ಯಾನ್‍ಹೋಲ್ ನಿಂದ ಒಳಚರಂಡಿ ನೀರು ಹರಿಯುತ್ತಿರು ವುದು ಕಂಡರೆ ಆ ಸ್ಥಳದಿಂದ ಫೋಟೋ ತೆಗೆದು ಮಾಹಿತಿ ಅಪ್‍ಲೋಡ್ ಮಾಡಬಹುದು.

ಅದನ್ನು ಗಮನಿಸುವ ಪಾಲಿಕೆ ವಲಯಾ ಧಿಕಾರಿಗಳು, ತಕ್ಷಣ ಅಲ್ಲಿಗೆ ತೆರಳಿ ಸಮಸ್ಯೆ ಬಗೆಹರಿಸಿ ಅದರ ಫೋಟೋ ತೆಗೆದು ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಿದವರ ಮೊಬೈಲ್‍ಗೆ ಕಳುಹಿಸುವರು. ಅದಕ್ಕಾಗಿ ಇಂದಿನಿಂದ ನಗರ ಪಾಲಿಕೆ ಪೌರಕಾರ್ಮಿ ಕರು ಬೆಳಿಗ್ಗೆಯಿಂದ ಸಂಜೆವರೆಗೆ ಪೂರ್ಣಾ ವಧಿ ಕೆಲಸ ಮಾಡಲಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರದಿಂದ ಸಾರ್ವಜನಿಕರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ನಗರದಲ್ಲಿ ಸ್ವಚ್ಛತೆ ಹೇಗಿದೆ? ಪ್ರತಿದಿನ ಮನೆ ಮನೆಗೆ ಬಂದು ಕಸ ಸಂಗ್ರಹಿಸಲಾಗು ತ್ತಿದೆಯೇ? ಶೌಚಾಲಯ ಬಳಸುತ್ತಿದ್ದೀರಾ ಎಂಬಿ ತ್ಯಾದಿ 7 ಪ್ರಶ್ನೆಗಳನ್ನು ಕೇಳಿ ಪ್ರತಿಕ್ರಿಯೆ ಸಂಗ್ರಹಿಸಲಾಗುತ್ತದೆ.

ಸಾರ್ವಜನಿಕರು ಪೂರಕ ಪ್ರತಿಕ್ರಿಯೆ ನೀಡಿದಲ್ಲಿ ಸ್ವಚ್ಛತಾ ಸಮೀಕ್ಷೆಯಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಅಂಕ ಗಳು ಸೇರ್ಪಡೆಯಾಗುತ್ತವೆ. ಬಡಾವಣೆ ಗಳ ನಿವಾಸಿಗಳು, ಶಾಲಾ ಕಾಲೇಜು, ಸಂಘ -ಸಂಸ್ಥೆಗಳು, ಸೆಲ್ಫ್ ಹೆಲ್ಫ್ ಗ್ರೂಪ್‍ಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಚ್ಛತಾ ಪ್ರಶಸ್ತಿಗೆ ಪಾಲಿಕೆಯೊಂದಿಗೆ ಕೈಜೋಡಿಸಬೇಕೆಂದು ಮೈಸೂರು ಮಹಾ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜ್ ಮನವಿ ಮಾಡಿದ್ದಾರೆ.

ದೇಶಾದ್ಯಂತ ಸ್ವರ್ಧಿಸುವ ನಗರಗಳೊಂದಿಗೆ ಪೈಪೋಟಿ ನಡೆಸಿ ಈ ವರ್ಷ ‘ಪ್ರಥಮ ಸ್ವಚ್ಛ ನಗರ’ ಪ್ರಶಸ್ತಿ ಗಳಿಸಲು ಮೈಸೂರು ಮಹಾನಗರ ಪಾಲಿಕೆಯು ಸಕಲ ಸಿದ್ಧತೆ ನಡೆಸುತ್ತಿದೆ.

Translate »