ವಿಜಯನಗರ ಆಧಾರ್ ಕೇಂದ್ರದ ಬಳಿ ಶೌಚಾಲಯ, ವಾಹನ ಪಾರ್ಕಿಂಗ್ ಸಮಸ್ಯೆ
ಮೈಸೂರು

ವಿಜಯನಗರ ಆಧಾರ್ ಕೇಂದ್ರದ ಬಳಿ ಶೌಚಾಲಯ, ವಾಹನ ಪಾರ್ಕಿಂಗ್ ಸಮಸ್ಯೆ

December 14, 2019

ಮೈಸೂರು,ಡಿ. 13(ಆರ್‍ಕೆ)- ಆಧಾರ್ ನೋಂದಣಿ, ಅಪ್‍ಡೇಟ್ ಮಾಡಿಸಲು ಮೈಸೂರು ನಗರದಿಂದಷ್ಟೇ ಅಲ್ಲದೇ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಜನರು ಬರುತ್ತಿರುವು ದರಿಂದ ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಆಧಾರ್ ಸೇವಾ ಕೇಂದ್ರದ ಬಳಿ ನೂಕುನುಗ್ಗಲು ಉಂಟಾಗಿ ಪಾರ್ಕಿಂಗ್, ಶೌಚಾಲಯದ ಸಮಸ್ಯೆ ಉಂಟಾಗಿದೆ.

ಪಡಿತರ ಚೀಟಿಗೆ ಕುಟುಂಬ ಸದಸ್ಯರೆ ಲ್ಲರ ಬಯೋಮೆಟ್ರಿಕ್ ಮತ್ತು ಆಧಾರ್ ಲಿಂಕ್ ಮಾಡಿಸಲು 2020ರ ಜನವರಿ 10 ಕಡೇ ದಿನ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗಡುವು ನೀಡಿರುವು ದರಿಂದ ಅತೀ ಹೆಚ್ಚು ಕೌಂಟರ್ ಇರುವ ಮೈಸೂರಿನ ವಿಜಯನಗರ 1ನೇ ಹಂತದ ಆಧಾರ ಸೇವಾ ಕೇಂದ್ರಕ್ಕೆ ಜನರು ತಂಡೋ ಪತಂಡವಾಗಿ ಧಾವಿಸಲು ಕಾರಣವಾಗಿದೆ.

ಪ್ರತೀ ದಿನ ಮುಂಜಾನೆ 4 ಗಂಟೆಗೆ ಪ್ರಯಾಣಿಕರ ಆಟೋ, ಗೂಡ್ಸ್ ಆಟೋ, ಟೆಂಪೋ, ಬಸ್‍ಗಳಲ್ಲಿ ಜಿಲ್ಲೆಯ ಗ್ರಾಮಾಂ ತರ ಪ್ರದೇಶಗಳಿಂದ ಹೆಂಗಸರು, ಮಕ್ಕ ಳೊಂದಿಗೆ ಬರುತ್ತಿರುವುದರಿಂದ ಸ್ಥಳದಲ್ಲಿ ವಾಹನ ಪಾರ್ಕಿಂಗ್, ಶೌಚಾಲಯದ ಸಮಸ್ಯೆ ಉಂಟಾಗಿದೆ. ವಾಹನಗಳನ್ನು ಮನೆ ಗಳ ಮುಂದೆ ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು, ಪಕ್ಕದ ಮುಡಾ ಖಾಲಿ ಜಾಗದಲ್ಲೇ ಬಹಿ ರ್ದೆಸೆಗೆ ಹೋಗುತ್ತಿರುವುದರಿಂದ ಅಲ್ಲಿ ದುರ್ವಾಸನೆ ಬೀರುತ್ತಿರುವ ಕಾರಣ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳೀಯರು ನೀಡಿದ ದೂರಿನನ್ವಯ ಕಾರ್ಪೊರೇಟರ್ ಸುಬ್ಬಯ್ಯ ಹಾಗೂ ನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಮುರುಗೇಶ ‘ಅಭಯ’ ಟೀಂನೊಂದಿಗೆ ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ವೀಕ್ಷಿಸಿ ದರು. ಆಧಾರ್ ನೋಂದಣಿ ನಡೆಯುತ್ತಿ ರುವ ಕಟ್ಟಡದ ಸೆಲ್ಲಾರ್‍ನಲ್ಲಿ ಬೇರೆ ವಸ್ತು ಗಳನ್ನಿಟ್ಟಿರುವುದರಿಂದ ವಾಹನ ನಿಲುಗಡೆಗೆ ಜನರು ರಸ್ತೆಯನ್ನು ಬಳಸುತ್ತಿದ್ದಾರೆ ಎಂಬುದು ತಿಳಿದ ಬಳಿಕ, ತಕ್ಷಣ ಅದನ್ನು ತೆರವು ಗೊಳಿಸಿ ಅಲ್ಲಿ ಪಾರ್ಕಿಂಗ್‍ಗೆ ಅವಕಾಶ ನೀಡು ವಂತೆ ಆಧಾರ್ ಕೇಂದ್ರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಟ್ಟಡದ ಹೊರ ಭಾಗದಲ್ಲಿರುವ ಶೌಚಾ ಲಯವನ್ನು ಬಳಕೆಗೆ ಮುಕ್ತಗೊಳಿಸಬೇಕು, ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋ ಜಿಸಿ ಜನರು ಬಯಲಲ್ಲಿ ಶೌಚ ಮಾಡದಂತೆ ಹಾಗೂ ವಾಹನಗಳನ್ನು ನಿಲುಗಡೆ ಸ್ಥಳ ದಲ್ಲಿ ಪಾರ್ಕ್ ಮಾಡುವಂತೆ ಹೇಳಿ ವ್ಯವಸ್ಥೆ ಮಾಡಬೇಕೆಂದೂ ಸುಬ್ಬಯ್ಯ ಅವರು ಆಧಾರ್ ಸೇವಾ ಕೇಂದ್ರದ ವ್ಯವಸ್ಥಾಪಕ ಚೇತನ ಅವರಿಗೆ ಸೂಚಿಸಿದರು.

ಬಳಿಕ ಮಾತನಾಡಿದ ಚೇತನ್, ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ದಿಂದ ಈಗಾಗಲೇ ಸೂಚನೆ ಬಂದಿರುವಂತೆ ತಾವು ಮೊಬೈಲ್ ಟಾಯ್ಲೆಟ್ ಕೊಡಿಸುವಂತೆ ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದೇವೆ, ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿ ಜನ ಜಂಗುಳಿಯನ್ನು ನಿರ್ವಹಿಸುತ್ತೇವೆ ಹಾಗೂ ಕಟ್ಟಡದ ಮಾಲೀಕರೊಂದಿಗೆ ಮಾತನಾಡಿ ಸೆಲ್ಲಾರ್‍ನಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಪೋಸ್ಟ್ ಆಫೀಸ್, ಬ್ಯಾಂಕುಗಳು, ಮೈಸೂರು ಒನ್ ಕೇಂದ್ರಗಳಲ್ಲಿ ಆಧಾರ ನೋಂದಣಿ ಕಡಿಮೆ ಸಂಖ್ಯೆಯಲ್ಲಿ ನಡೆಯುತ್ತಿರುವುದ ರಿಂದ ಜನರು ವಿಜಯನಗರ 1ನೇ ಹಂತದ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿ ದ್ದಾರೆ. ಈ ಮಧ್ಯೆ ಆಧಾರ್ ನೋಂದಣಿಗೆ ದಿನ ನಿಗದಿಗೊಳಿಸಲು ಸೈಬರ್ ಕೆಫೆ, ಸೇವಾ ಸಿಂಧು ಕೇಂದ್ರಗಳಲ್ಲಿ ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಅಟಲ್‍ಜೀ ಸೇವಾ ಕೇಂದ್ರ, ಮೈಸೂರು ಓನ್ ಸೇರಿದಂತೆ ವಿವಿಧೆಡೆ ಆಧಾರ್ ಅಪ್ ಡೇಟ್ಸ್, ನೋಂದಣಿಗೆ ಹಾಗೂ ಟೋಕನ್ ವಿತರಿಸಲೂ ಹಣ ಪಡೆಯುತ್ತಿದ್ದಾರೆ ಎಂದೂ ಜನರು ದೂರುತ್ತಿದ್ದರು.

Translate »