ಯೋಗ ಘಟಿಕೋತ್ಸವದಲ್ಲಿ 11 ಮಂದಿ ಪದವೀಧರರಿಗೆ ಚಿನ್ನದ ಪದಕ
ಮೈಸೂರು

ಯೋಗ ಘಟಿಕೋತ್ಸವದಲ್ಲಿ 11 ಮಂದಿ ಪದವೀಧರರಿಗೆ ಚಿನ್ನದ ಪದಕ

July 9, 2018

ಮೈಸೂರು: ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಯೋಗ ಘಟಿಕೋತ್ಸವದಲ್ಲಿ 2018ರಲ್ಲಿ ವಿವಿಧ ಕೋರ್ಸ್‍ಗಳಲ್ಲಿ ಒಟ್ಟಾರೆ 70 ಮಂದಿ ವಿವಿಧ ಪದವಿ ಪಡೆದಿದ್ದು, ಈ ಪೈಕಿ 11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಯೋಗ ಪದವಿ ಪ್ರದಾನ ಸಮಾರಂಭಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಯೋಗ ಎಜುಕೇಷನ್ ಕೋರ್ಸ್ (ಪಿಜಿಡಿವೈಇಡಿ)ನಲ್ಲಿ 13 ವಿದ್ಯಾರ್ಥಿನಿಯರು ಸೇರಿದಂತೆ 24 ಮಂದಿ, ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಯೋಗ ಥೆರಪಿ ಕೋರ್ಸ್ (ಪಿಜಿಡಿವೈಟಿ)ನಲ್ಲಿ 12 ವಿದ್ಯಾರ್ಥಿನಿಯರು ಹಾಗೂ ಡಿಪ್ಲೊಮಾ ಇನ್ ಯೋಗ ಎಜುಕೇಷನ್ (ಡಿವೈಇಡಿ)ನಲ್ಲಿ 11 ವಿದ್ಯಾರ್ಥಿನಿಯರು ಸೇರಿದಂತೆ 34 ಮಂದಿ ಹೀಗೆ ಒಟ್ಟು 70 ಮಂದಿ ಯೋಗ ಪದವಿ ಪಡೆದಿದ್ದಾರೆ.

ಈ ಪೈಕಿ ಡಿವೈಇಡಿ ಕೋರ್ಸ್‍ನಲ್ಲಿ ಆರ್.ರಾಜು, ಟಿ.ಪಿ.ಮೈತ್ರಾವತಿ (2017), ಸಿ.ಪ್ರತೀಪ್, ವಿ.ಸುಪ್ರೀತಾ (2018), ಪಿಜಿಡಿವೈಇಡಿ ಕೋರ್ಸ್‍ನಲ್ಲಿ ಬಿ.ಸತ್ಯವತಿ, ಪ್ರಶಾಂತಿ ಎನ್. (2017), ಎಂ.ಡಿ.ಭರತ್ ದೇಶಕಾರ್, ಐ.ಎನ್.ಕುಮುದಾ (2018), ಪಿಜಿಡಿವೈಟಿ ಕೋರ್ಸ್‍ನಲ್ಲಿ ಹೆಚ್.ಆರ್.ಅನುಷಾ, ಸುಮಾ ಪ್ರಕಾಶ್ ಮತ್ತು ಅನುಷಾ ಶೆಟ್ಟಿ (2018) ಚಿನ್ನದ ಪದಕ ಗಳಿಸಿದ್ದಾರೆ.

ಶಾಸಕ ಎಸ್.ಎ.ರಾಮದಾಸ್, ಜಿಎಸ್‍ಎಸ್ ಯೋಗ ಸಂಸ್ಥೆ ಮುಖ್ಯಸ್ಥ ಶ್ರೀಹರಿ, ಸಂಸ್ಥೆಯ ಗೌರವಾಧ್ಯಕ್ಷರಾದ ಸುಚರಿತ ಮಾತಾಜಿ ಪದವಿ ಮತ್ತು ಚಿನ್ನದ ಪದಕ ಪ್ರದಾನ ಮಾಡಿದರು. ಯೋಗ ಸ್ಪೋಟ್ರ್ಸ್ ಫೌಂಡೇಷನ್ ಗೌರವ ಅಧ್ಯಕ್ಷ ಡಾ.ಎನ್.ಗಣೇಶ್‍ಕುಮಾರ್, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಹೆಚ್.ಎ.ಶಶಿರೇಖಾ ಬಾಬಾ ರಾಮ್‍ದೇವ್ ಪತಂಜಲಿ ಯೋಗ ಸಮಿತಿಯ ಮುಖ್ಯಸ್ಥರಾದ ರತ್ನಾರಾವ್, ಸುರಭಿ, ಹೆಚ್.ಟಿ.ಭಾಸ್ಕರ್, ಗೀತಾಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಯೋಗ ಪದವೀಧರರು ನೂರಾರು ಜನರಿಗೆ ಯೋಗ ಕಲಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವನ್ನು ಕಾಪಾಡುವ ಬಹು ದೊಡ್ಡ ಜವಾಬ್ದಾರಿ ಹೊರಬೇಕು. `ಬಲಿಷ್ಠ ಭಾರತ’ ಶೀರ್ಷಿಕೆಯಡಿ ಕ್ಷೇತ್ರಾದ್ಯಂತ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರತಿ ಶನಿವಾರ ಸರ್ಕಾರಿ ಶಾಲೆಗಳಲ್ಲಿ ಬೆಳಿಗ್ಗೆ 8ರಿಂದ 11ರವರೆಗೆ ಮಕ್ಕಳಿಗೆ ಯೋಗ ಹೇಳಿಕೊಡುವ ಮೂಲಕ ಅವರ ಮಾನಸಿಕ, ದೈಹಿಕವಾಗಿ ಅವರನ್ನು ಬಲಿಷ್ಠರನ್ನಾಗಿ ಮಾಡಬೇಕು. ಏಕೆಂದರೆ, ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠರಾದರೆ ದೇಶವೂ ಬಲಿಷ್ಠವಾಗಲಿದೆ. ಈ ನಿಟ್ಟಿನಲ್ಲಿ ಯೋಗ ಪದವೀಧರರು ವಾರದಲ್ಲಿ ಒಂದು ದಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಯೋಗ ಕಲಿಸಲು ಮುಂದಾಗಬೇಕು. -ಎಸ್.ಎ.ರಾಮದಾಸ್, ಶಾಸಕ

Translate »