ಮೈಸೂರಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ
ಮೈಸೂರು

ಮೈಸೂರಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ

February 4, 2019

ಮೈಸೂರು: ರಥ ಸಪ್ತಮಿ ಅಂಗ ವಾಗಿ ಮೈಸೂರಿನ ವಿವಿಧ ಯೋಗ ಸಂಸ್ಥೆಗಳ ಸಹ ಯೋಗದಲ್ಲಿ ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್ ಮೈಸೂರು ಅರಮನೆ ಆವರಣದಲ್ಲಿ ಭಾನು ವಾರ 1400ಕ್ಕೂ ಹೆಚ್ಚು ಯೋಗಪಟುಗಳು ಸಾಮೂ ಹಿಕವಾಗಿ 108 ಸೂರ್ಯ ನಮಸ್ಕಾರ ನಡೆಸಿದರು.

ಮುಂಜಾನೆ 6 ಗಂಟೆಗೆ ಓಂಕಾರದ ಹಿನ್ನೆಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವುದ ರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಯೋಗ ಪಟುಗಳು ಸೂಂiÀರ್i ಮಂತ್ರದೊಂದಿಗೆ 108 ಬಾರಿ ಸೂರ್ಯ ನಮಸ್ಕಾರ ನೆರವೇರಿಸಿದರು.

50ನೇ ಸೂಂiÀರ್i ನಮಸ್ಕಾರ ಸಂದರ್ಭದಲ್ಲಿ ಪೂರ್ವ ದಲ್ಲಿ ಚಾಮುಂಡಿಬೆಟ್ಟದ ತುದಿಯಿಂದ ಉದಯನಾದ ಸೂರ್ಯ ಯೋಗ ಪಟುಗಳಿಗೆ ಆಶೀರ್ವದಿಸಿ ದಂತಿತ್ತು. ನಾಲ್ಕು ಹಂತಗಳಲ್ಲಿ ನಡೆದ 108 ಬಾರಿ ಸೂರ್ಯ ನಮ ಸ್ಕಾರ ಸಂದರ್ಭದಲ್ಲಿ ಯೋಗಪಟುಗಳಿಗೆ ಮಧ್ಯೆ ಬೆಲ್ಲ ಮತ್ತು ಕಲ್ಲುಸಕ್ಕರೆ ತಿನ್ನಲು ನೀಡಲಾಯಿತು. ಸೂರ್ಯ ನಮಸ್ಕಾರ ಕಾರ್ಯಕ್ರಮ ಮುಗಿಯುತ್ತಿ ದ್ದಂತೆ ಶವಾಸನ, ಬಳಿಕ ಶಾಂತಿ ಮಂತ್ರದೊಂದಿಗೆ ಬೆಳಿಗ್ಗೆ 8 ಗಂಟೆ ವೇಳೆಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಯೋಗಾ ನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ, ಸಂಚಾಲಕ ಎಸ್.ಶ್ರೀನಿವಾಸನ್, ಕನ್ಯಾ ಕುಮಾರಿ ಯೋಗ ಮಂದಿರದ ಸುಚರಿತ ಮಾತಾ, ಜಿಎಸ್‍ಎಸ್ ಯೋಗಿಕ್ ಫೌಂಡೇಷನ್‍ನ ಶ್ರೀಹರಿ, ಮೈಸೂರು ಜಿಲ್ಲಾ ಯೋಗ ಸ್ಪೋಟ್ರ್ಸ್ ಫೌಂಡೇ ಷನ್‍ನ ಡಾ.ಪಿ.ಎನ್.ಗಣೇಶ್‍ಕುಮಾರ್, ಮೈಸೂರು ಯೋಗ ಒಕ್ಕೂಟದ ಡಾ.ಬಿ.ಪಿ.ಮೂರ್ತಿ, ಪರಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್‍ನ ಶಶಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಗಮನ ಸೆಳೆದ ಮೇಯರ್: ಬೆಳಿಗ್ಗೆ 6 ಗಂಟೆ ಯಿಂದ 8 ಗಂಟೆಯವರೆಗೆ ಸತತ 2 ಗಂಟೆಗಳ ಕಾಲ ನಡೆದ 108 ಬಾರಿ ಸೂರ್ಯ ನಮಸ್ಕಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಮೇಯರ್ ಪುಷ್ಪಲತಾ ಜಗನ್ನಾಥ್ ಗಮನ ಸೆಳೆದರು.

Translate »