ಬಹುರೂಪಿಯಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿರುವ ಮಂಗಳಮುಖಿಯರ ಭಾವಚಿತ್ರ ಪ್ರದರ್ಶನ
ಮೈಸೂರು

ಬಹುರೂಪಿಯಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿರುವ ಮಂಗಳಮುಖಿಯರ ಭಾವಚಿತ್ರ ಪ್ರದರ್ಶನ

January 17, 2019

ಮೈಸೂರು: ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಂಗಳಮುಖಿಯರ ಭಾವಚಿತ್ರಗಳನ್ನು ಅನಾವರಣಗೊಳಿಸಲಾಗಿದೆ.

ಮೊಟ್ಟ ಮೊದಲು ಆಸ್ಪತ್ರೆಯ ನರ್ಸ್ ಆಗಿ ಸೇವೆಸಲ್ಲಿಸಿದ್ದ ಕೊಲ್ಕತ್ತದ ಜೀಯಾ ದಾಸ್, ಕವಿ ಹಾಗೂ ಶಿಕ್ಷಕರಾಗಿದ್ದ ಮುಂಬೈನ ಹೋಶಂಗ್ ಮೆರ್ಚನ್, ಎಂಎಲ್‍ಎ ಆಗಿದ್ದ ಮಧ್ಯಪ್ರದೇಶದ ಶಬನಮ್ ಮೌಸಿ, ಸುದ್ದಿ ನಿರೂಪಕಿಯಾಗಿದ್ದ ಕೊಲ್ಕತ್ತದ ಪದ್ಮಿನಿ ಪ್ರಕಾಶ್, ಮೊದಲ ಅಂರ್ತಜಾತಿ ವಿವಾಹವಾದ ಕೇರಳದ ಇಶಾಂತ್ ಮತ್ತು ಸೂರ್ಯ, ಚುನಾವಣೆ ಸ್ಪರ್ಧಿಸಿದ್ದ ಮುಮ್ತಾಜ್, ಸೈನಿಕ ವೃತ್ತಿಗೆ ಸೇರಿದ ದೆಹಲಿಯ ಶಬಿ, ಪೊಲೀಸ್ ಅಧಿಕಾರಿ ಪ್ರಿತಿಕಾ ಯಶ್ನಿ, ನ್ಯಾಯಮೂರ್ತಿಯಾಗಿದ್ದ ಸತ್ಯಶ್ರೀ ಸರ್ಮಿಳಾ, ಜೊಹಿತಾ ಮಂಡಾಲ್, ಪ್ರಾದ್ಯಾಪಕಿಯಾಗಿದ್ದ ಮನಬಿ ಬಂಡೋಪಾಧ್ಯಾಯ್ ಸೇರಿದಂತೆ 15 ಜನರ ಭಾವಚಿತ್ರವನ್ನು ಅನಾವರಣಗೊಳಿಸಲಾಗಿದೆ.

Translate »