ಬೆಂಗಳೂರು,ಸೆ.27(ಕೆಎಂಶಿ)-ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗ ವಿಕಲರ ವೇತನ ಸೇರಿ ದಂತೆ ಹಲವು ಸಾಮಾ ಜಿಕ ಯೋಜನೆಗಳ ಫಲಾ ನುಭವಿಗಳಿಗೆ ಇನ್ನು ಮುಂದೆ ಆಧಾರ್ ಕಡ್ಡಾಯಗೊಳಿಸಿ, ರಾಜ್ಯ ಸರ್ಕಾರ ಆದೇ ಶಿಸಿದೆ. ಫಲಾನುಭವಿಗಳು ಸರ್ಕಾರದ ಯೋಜನೆ ಪಡೆಯಲು ಕಡ್ಡಾಯವಾಗಿ ಆಧಾರ್ ಅನ್ನು ಸಂಬಂಧಪಟ್ಟ ಇಲಾಖೆಗಳಿಗೆ ನೀಡಬೇಕು.
ಇಲ್ಲದಿದ್ದರೆ, ಅವರಿಗೆ ಯಾವುದೇ ಸಾಮಾಜಿಕ ಯೋಜನೆಗಳು ದೊರೆಯುವುದಿಲ್ಲ. ರಾಜ್ಯ ಸರ್ಕಾರ ಒಟ್ಟಾರೆ ಪ್ರತಿ ವರ್ಷ 7200 ಕೋಟಿ ರೂ.ಗಳಷ್ಟು ಹಣ ನೀಡಲಾಗುತ್ತಿದ್ದು, ಆ ಪೈಕಿ ಶೇಕಡಾ ಮೂವತ್ತ ರಿಂದ ನಲವತ್ತರಷ್ಟು ಜನ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆಧಾರ್ ಕಡ್ಡಾಯ ಮಾಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ರೂಪಿಸಿರುವ ಹಲವು ಸಾಮಾಜಿಕ ಯೋಜನೆಗಳಡಿ
ಫಲಾನುಭವಿಗಳಾಗಿರುವವರ ಪೈಕಿ ಹಲವರು ಇದರ ಅನುಕೂಲ ಪಡೆಯಲು ಅರ್ಹರೇ ಅಲ್ಲ ಎಂದ ಅವರು, ಈ ಹಿನ್ನೆಲೆಯಲ್ಲಿ ಆಧಾರ್ ಕಡ್ಡಾಯ ಮಾಡಿ, ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ತೀರ್ಮಾನ ಮಾಡಲಾಗಿದೆ.
ಇದರಿಂದಾಗಿ ಸುಮಾರು ಆರು ನೂರರಿಂದ ಏಳು ನೂರು ಕೋಟಿ ರೂಪಾಯಿ ಉಳಿಯಬಹುದು ಎಂಬ ನಿರೀಕ್ಷೆ ಇದೆ. ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿಗಳ ಮುಂದೆ ಇರುವ ಮಧ್ಯವರ್ತಿಗಳ ಹಾವಳಿಯಿಂದ ಹೀಗೆ ಅನರ್ಹರಿಗೂ ಸರ್ಕಾರದ ಹಣ ವಿನಾಕಾರಣ ತಲುಪುತ್ತಿದೆ.
ಬಡತನದ ರೇಖೆಗಿಂತ ಕೆಳಗಿನ ಕುಟುಂಬದ ಸದಸ್ಯರು ಸತ್ತಲ್ಲಿ ಅವರ ಅಂತ್ಯ ಸಂಸ್ಕಾರಕ್ಕಾಗಿ ತಲಾ ಐದು ಸಾವಿರ ರೂಪಾಯಿಗಳನ್ನು ನೀಡಲು ತೀರ್ಮಾನ ಮಾಡಲಾಗಿತ್ತು. ಆದರೆ ವ್ಯಕ್ತಿ ಸತ್ತು ಮೂರು ವರ್ಷ ಕಳೆದರೂ ಹಣ ದೊರೆತಿಲ್ಲ.
ಕಳೆದ ಮೂರು ವರ್ಷಗಳಲ್ಲಿ 84,394 ಪ್ರಕರಣಗಳಲ್ಲಿ ಸತ್ತವರ ಅಂತ್ಯಸಂಸ್ಕಾರಕ್ಕಾಗಿ ಹಣ ನೀಡಲಾಗಿಲ್ಲ. ಇದರ ಬಾಬತ್ತು ಈಗ ಸುಮಾರು 72 ಕೋಟಿ ರೂಪಾಯಿಗಳ ಷ್ಟಾಗಿದೆ. ಬಾಕಿ ವಿಲೇವಾರಿ ಮಾಡಲು ರಾಜ್ಯ ಸರ್ಕಾರ ಮೊದಲ ಕಂತಿನಲ್ಲಿ 18 ಕೋಟಿ ರೂ. ಬಿಡುಗಡೆ ಮಾಡಿದೆ, ನಂತರ ಉಳಿದ ಹಣ ಬಿಡುಗಡೆಗೊಳಿಸಲು ನಿರ್ಧರಿಸಿದೆ.