ಸ್ಕೇಟಿಂಗ್, ಕರಾಟೆಯಲ್ಲಿ ಸಾಧನೆಗೈದ ಮೈಸೂರಿನ ಪೋರಿ
ಮೈಸೂರು

ಸ್ಕೇಟಿಂಗ್, ಕರಾಟೆಯಲ್ಲಿ ಸಾಧನೆಗೈದ ಮೈಸೂರಿನ ಪೋರಿ

March 16, 2020

ಮೈಸೂರು,ಮಾ.15(ವೈಡಿಎಸ್)- 4ನೇ ವರ್ಷಕ್ಕೆ ರೋಲರ್ ಸ್ಕೇಟಿಂಗ್ ಮೂಲಕ ಕ್ರೀಡಾಕ್ಷೇತ್ರಕ್ಕೆ ಪಾದಾ ರ್ಪಣೆ ಮಾಡಿದ್ದ ಯುವಪ್ರತಿಭೆ, ಕಳೆದ ಒಂದೂವರೆ ವರ್ಷದಲ್ಲಿ ಕರಾಟೆಯಲ್ಲಿ 2 ಬೆಳ್ಳಿ, 2 ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾಳೆ.

2020ರಲ್ಲಿ ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ನಡೆದ 21ನೇ ಶೋರಿನ್ ಕೈ ನ್ಯಾಷನಲ್ ರಿಪಬ್ಲಿಕ್ ಡೇ ಕಪ್’ ಪಂದ್ಯಾವಳಿಯ ಕರಾಟೆಯ ಬ್ಲಾಕ್ ಬೆಲ್ಟ್‍ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾಳೆ.

ಮೂಲತಃ ಬೆಂಗಳೂರು ಯಲಹಂಕದ ಬೆಟ್ಟಹಲಸೂರು ನಿವಾಸಿ, ಮೈಸೂರಿನ ಜೆ.ಪಿ. ನಗರದಲ್ಲಿ ವಾಸವಾಗಿರುವ ಬಿ.ಎಸ್.ಸರವಣ ಮತ್ತು ಗೀತಾ ದಂಪತಿ ಪುತ್ರಿ, ಬಿ.ಎಸ್.ವರ್ಷಿಣಿ, ಜೆ.ಪಿ. ನಗರದ ಜೆಎಸ್‍ಎಸ್ ಪಬ್ಲಿಕ್ ಸ್ಕೂಲ್‍ನಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ರೋಲರ್, ಐಸ್ ಸ್ಕೇಟಿಂಗ್ ಜತೆಗೆ ಕರಾಟೆಯಲ್ಲೂ ಉತ್ತಮ ಸಾಧನೆ ಗೈಯ್ಯುತ್ತಿದ್ದು, ಸದ್ಯ ಉನ್ನತಿನಗರದ ರಾವ್ಸ್ ಅಂಡ್ ವಿಶ್ವಾಮಿತ್ರ ರೋಲರ್ ಸ್ಕೇಟಿಂಗ್ ಕ್ಲಬ್’ನ ಕೆ.ಶ್ರೀಕಾಂತ ರಾವ್ ಎಂಬುವರ ಬಳಿ ಕಳೆದ ಒಂದೂವರೆ ವರ್ಷ ದಿಂದ ಕರಾಟೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಕರಾಟೆಗೂ ಮುನ್ನ 5 ವರ್ಷ ರೋಲರ್ ಮತ್ತು ಐಸ್ ಸ್ಕೇಟಿಂಗ್‍ನಲ್ಲಿ ಸಾಧನೆಗೈದು 20 ಚಿನ್ನ, 12 ಬೆಳ್ಳಿ, 4 ಕಂಚಿನ ಪದಕ ಪಡೆದಿದ್ದಾಳೆ.

ಬಹುಮಾನ: 2020ರ ಫೆ.29ರಂದು ನಡೆದ ಮೈಸೂರು ಜಿಲ್ಲಾ ಅಂತರ ಶಾಲಾ ಕರಾಟೆ ಚಾಂಪಿಯನ್ ಶಿಪ್’ ಪಂದ್ಯಾವಳಿಯಲ್ಲಿ ಕಥ ಮತ್ತು ಕುಮಿತೆಯಲ್ಲಿ ತಲಾ 1 ಬೆಳ್ಳಿ. 2019ರ ಏ.14ರಂದು ಮೈಸೂರಿನಲ್ಲಿ ನಡೆದ 6ನೇ ಸಮ್ಮರ್ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಪ್ರಥಮ ಬಹುಮಾನ. 2019ರ ಡಿ.28 ಮತ್ತು 29ರಂದು ನಂಜನಗೂಡಿನಲ್ಲಿ ನಡೆದ 20ನೇ ಶೋರಿನ್ ಕೈ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‍ನ ಕತಾ, ಕುಮಿತೆಯಲ್ಲಿ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಸೇರಿದಂತೆ 7 ಟ್ರೋಫಿಗಳನ್ನು ಪಡೆದುಕೊಂಡಿದ್ದಾರೆ.

accomplished awards in Skating, karate from Mysore girl-1

ಉಳಿದಂತೆ ರೋಲರ್ ಮತ್ತು ಐಸ್ ಸ್ಕೇಟಿಂಗ್‍ನಲ್ಲಿ 2019ರ ಸೆ.1ರಂದು ಮೈಸೂರಿನಲ್ಲಿ ನಡೆದ 30ನೇ ಜಿಲ್ಲಾಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ 3 ವಿಭಾಗದಲ್ಲಿ 1 ಚಿನ್ನ, 2 ಬೆಳ್ಳಿ, 2019ರ ಜೂ.21ರಂದು ಮೈಸೂರಿನಲ್ಲಿ ನಡೆದ ಓಪನ್ ಸ್ಟೇಟ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ 3 ವಿಭಾಗದಲ್ಲಿ 2 ಬೆಳ್ಳಿ, 1 ಕಂಚು. 2019ರ ಅ.5 ಮತ್ತು 6ರಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿದ್ದ 3ನೇ ಓಪನ್ ಸ್ಟೇಟ್ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನ 500, 1 ಸಾವಿರ ಮೀ. ಸ್ಕೇಟಿಂಗ್‍ನಲ್ಲಿ ತಲಾ 1 ಬೆಳ್ಳಿ. 2018ರಲ್ಲಿ ನಡೆದ ಜಿಲ್ಲಾಮಟ್ಟದ ರೋಲರ್ ಸ್ಕೇಟಿಂಗ್‍ನಲ್ಲಿ ಬೆಳ್ಳಿ.

2018ರ ಅ.26ರಿಂದ 28ರವರೆಗೆ ಮೈಸೂರಿನಲ್ಲಿ ನಡೆದ 29ನೇ ಜಿಲ್ಲಾ ರೋಲರ್ ಸ್ಕೇಟಿಂಗ್ ಸ್ಪರ್ಧೆಯ 3 ವಿಭಾಗದಲ್ಲಿ 2 ಚಿನ್ನ, 1 ಬೆಳ್ಳಿ. 2017ರ ಅ.15ರಿಂದ 17ರವರೆಗೆ ನಡೆದ 28ನೇ ಜಿಲ್ಲಾಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯ 3 ವಿಭಾಗದಲ್ಲಿ 2 ಚಿನ್ನ, 1 ಬೆಳ್ಳಿ. 2016ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಕಂಚು. 2014ರ ಮಾ.8ರಂದು ಬೆಂಗಳೂರಿನಲ್ಲಿ ನಡೆದ ಇಂಟರ್‍ಕ್ಲಬ್ ರೋಲರ್ ಸ್ಕೇಟಿಂಗ್ ಸ್ಪರ್ಧೆಯ 2 ವಿಭಾಗದಲ್ಲಿ ತಲಾ 1 ಚಿನ್ನ, ಬೆಳ್ಳಿ. 2015ರ ಸೆ.27 ರಂದು ನಡೆದ ಸ್ಪರ್ಧೆಯ 2 ವಿಭಾಗದಲ್ಲಿ 2 ಚಿನ್ನ. 2017ರ ನ.12 ಮತ್ತು 13ರಂದು ಮೈಸೂರಿನಲ್ಲಿ ನಡೆದ 27ನೇ ಜಿಲ್ಲಾಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯ 3 ವಿಭಾಗದಲ್ಲಿ 1 ಚಿನ್ನ, 2 ಬೆಳ್ಳಿ. 2012ರ ಆಗಸ್ಟ್‍ನಲ್ಲಿ ಬೆಂಗಳೂರಿನಲ್ಲಿ ನಡೆದ ಕ್ಲಬ್‍ಮಟ್ಟದ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

4ನೇ ವರ್ಷಕ್ಕೆ ಪುತ್ರಿ ವರ್ಷಿಣಿ ಅನ್ನು ಬೆಂಗಳೂರಿನ ಯಲಹಂಕದಲ್ಲಿ ನಡೆಯು ತ್ತಿದ್ದ ಸಮ್ಮರ್ ಕ್ಯಾಂಪ್ ಸೇರಿಸಿದೆವು. ಈ ವೇಳೆ ಮಕ್ಕಳು ಸ್ಕೇಟಿಂಗ್ ಆಡುವುದನ್ನು ನೋಡಿ ಆಸಕ್ತಿ ಉಂಟಾಯಿತು. ಹಾಗಾಗಿ ಸ್ಕೇಟಿಂಗ್‍ನಲ್ಲೇ 5ನೇ ತರಗತಿವರೆಗೆ ಮುಂದುವರೆಸಿದೆವು. ನಂತರದಲ್ಲಿ ಕರಾಟೆಯಲ್ಲಿ ಆಸಕ್ತಿ ಹೊಂದಿದ್ದರಿಂದ ಕಳೆದ ಒಂದೂವರೆ ವರ್ಷದಿಂದ ತರಬೇತಿ ಪಡೆದು ಸಾಧನೆಗೈಯ್ಯುತ್ತಿದ್ದಾಳೆ.
-ಸರವಣ, ವರ್ಷಿಣಿ ತಂದೆ.

Translate »