ಒಕ್ಕಲೆಬ್ಬಿಸುವುದರ ವಿರುದ್ಧ ಮಾ.27ರಂದು ಬೆಂಗಳೂರಲ್ಲಿ ಆದಿವಾಸಿಗಳ ಬೃಹತ್ ಮೆರವಣಿಗೆ
ಮೈಸೂರು

ಒಕ್ಕಲೆಬ್ಬಿಸುವುದರ ವಿರುದ್ಧ ಮಾ.27ರಂದು ಬೆಂಗಳೂರಲ್ಲಿ ಆದಿವಾಸಿಗಳ ಬೃಹತ್ ಮೆರವಣಿಗೆ

March 11, 2019

ಮೈಸೂರು: ಆದಿ ವಾಸಿಗಳ ಪಾಲಿಗೆ ಮರಣ ಶಾಸನವಾಗಿ ರುವ ಫೆ.13ರ ಸುಪ್ರೀಂಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ರಾಜ್ಯ ಸರ್ಕಾರ ವನ್ನು ಆಗ್ರಹಿಸಲು ಮಾ.27 ರಂದು ಬೆಂಗಳೂರಿನಲ್ಲಿ ಆದಿವಾಸಿಗಳ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆ ಅಧ್ಯಕ್ಷ ಪಿ.ಕೆ.ರಾಮು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಲ್ಡ್ ಲೈಫ್ ಫಸ್ಟ್ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಆಧರಿಸಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಒಂದು ವೇಳೆ ಹೊರಗಿನಿಂದ ಬಂದು ಅರಣ್ಯದಲ್ಲಿ ನೆಲೆಸಿದವರಿಗೆ ಅದು ಅನ್ವಯಿಸುವಂತಿದ್ದರೆ ಸ್ವಾಗತಿಸಬಹು ದಾಗಿತ್ತು. ಆದರೆ ಪಾರಂಪರಿಕವಾಗಿ ಅರಣ್ಯಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಗಳನ್ನು ಒಕ್ಕಲೆಬ್ಬಿಸುವಂತೆ ತಿಳಿಸಿರುವುದು ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆದಿವಾಸಿಗಳ ಪಾರಂ ಪರಿಕ ಹಕ್ಕು ಎತ್ತಿ ಹಿಡಿಯಬೇಕಾದ ಕರ್ತವ್ಯ ಪರಮಾಧಿÀಕಾರ ಗ್ರಾಮ ಸಭೆಗಳದ್ದಾಗಿ ರುವ ವೇಳೆ ಅರಣ್ಯಾಧಿಕಾರಿಗಳೇ ಅದನ್ನು ಕಡೆಗಣಿಸಿ ತಾವೇ ನಿರ್ಧಾರ ಕೈಗೊಳ್ಳುತ್ತಿ ರುವುದು, ಅರಣ್ಯಗಳಲ್ಲಿ ಪಾರಂಪರಿಕ ವಾಗಿ ವಾಸಿಸುತ್ತಿರುವವರಿಗೆ ಅಗತ್ಯವಾದ ದಾಖಲೆಪತ್ರ ನೀಡದಿರುವುದು, ಸುಪ್ರೀಂ ಕೋರ್ಟ್‍ಗೆ ಪಾರಂಪರಿಕವಾಗಿ ನೆಲೆಸಿರು ವವರ ಬಗೆಗಿನ ವಿವರ ನೀಡಿ, ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿರುವು ದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ತಮ್ಮನ್ನು ರಕ್ಷಿಸುವವರು ಯಾರೂ ಇಲ್ಲವಾಗಿರುವ ಕಾರಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದಿವಾಸಿಗಳ ಹಿತ ಕಾಯಲು ಮುಂದೆ ಬರಬೇಕು ಎಂದು ಒತ್ತಾಯಿಸಲು ಬೆಂಗ ಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ಗೆ ಮೆರವಣಿಗೆ ಏರ್ಪಡಿಸ ಲಾಗಿದೆ. ಅಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗು ವುದು ಎಂದರು. ಸುದ್ದಿಗೋಷ್ಠಿಯಲ್ಲಿ ಜೆ.ಡಿ. ಜಯಪ್ಪ, ಬಿ.ವಿ.ಬಸವರಾಜು, ವಿಜಯ ಕುಮಾರ್, ರಾಜು ಇನ್ನಿತರರು ಉಪಸ್ಥಿತರಿದ್ದರು.

Translate »