ಅಕ್ಕಿ, ತರಕಾರಿ ಆಯ್ತು ಈಗ ಗಗನಕ್ಕೇರಿದ ಸಮುದ್ರ ಮೀನು ಬೆಲೆ
ಮೈಸೂರು

ಅಕ್ಕಿ, ತರಕಾರಿ ಆಯ್ತು ಈಗ ಗಗನಕ್ಕೇರಿದ ಸಮುದ್ರ ಮೀನು ಬೆಲೆ

June 22, 2019

ಮೈಸೂರು: ಸಂತಾನೋತ್ಪತ್ತಿ ಸಮಯದ ಹಿನ್ನೆಲೆಯಲ್ಲಿ ಸಮುದ್ರ ಗಳಲ್ಲಿ ಮೀನುಗಾರಿಕೆ ತಡೆ ನೀಡಿರುವುದ ರಿಂದ ಮೈಸೂರಿನಲ್ಲಿ ಸಮುದ್ರ ಮೀನು ಗಳ ಬೆಲೆ ಗಗನ್ನಕ್ಕೇರಿದೆ.

ಪ್ರತಿ ವರ್ಷ ಜೂ.1ರಿಂದ 61 ದಿನಗಳ ಕಾಲ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದು ನಿಷೇಧಿಸ ಲಾಗುತ್ತದೆ. ಜೂನ್ ತಿಂಗಳಿಂದ ಸಮುದ್ರ ದಲ್ಲಿನ ಮೀನುಗಳು ಮೊಟ್ಟೆ ಇಡುವುದ ರಿಂದ ಅವುಗಳ ಸಂತಾನೋತ್ಪತ್ತಿ ಪ್ರಕ್ರಿ ಯೆಗೆ ಅಡಚಣೆಯಾಗುವುದನ್ನು ತಡೆಗಟ್ಟಲು ಮೀನುಗಾರಿಕೆ ನಿಷೇಧಿಸುವ ವಾಡಿಕೆ ಅನು ಸರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ಮೀನುಗಳ ಸರಬರಾಜು ಕಡಿಮೆಯಾಗು ವುದರಿಂದ ಬೆಲೆ ದುಪ್ಪಟ್ಟಾಗಿದೆ.

ಅತ್ಯುತ್ತಮ ಪೌಷ್ಟಿಕ ಆಹಾರಗಳಲ್ಲಿ ಸಮು ದ್ರದ ಮೀನು ಮುಂಚೂಣಿಯಲ್ಲಿದೆ. ರಾಸಾಯನಿಕ ವಸ್ತುಗಳ ಸೇವನೆಯಿಂದ ಮುಕ್ತವಾಗಿರುವ ಸಮುದ್ರದ ಮೀನು ಗಳಿಗೆ ಎಲ್ಲಿಲ್ಲದ ಬೇಡಿಕೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ತಮಿಳು ನಾಡಿನ ಸಮುದ್ರದ ಮೀನುಗಳಿಗೆ ವಿದೇಶ ಗಳಲ್ಲಿಯೂ ಭಾರಿ ಬೇಡಿಕೆ ಇದೆ. ಈ ಹಿನ್ನೆಲೆ ಯಲ್ಲಿ ಇನ್ನೂ 61ದಿನಗಳ ಈ ಮೀನು ಗಳನ್ನು ದುಪ್ಪಟ್ಟು ಬೆಲೆ ತೆತ್ತು ಖರೀದಿಸ ಬೇಕಾದ ಪರಿಸ್ಥಿತಿ ಎದುರಾಗಿದೆ.

ಯಾವುದಕ್ಕೆ ಎಷ್ಟೆಷ್ಟು: ಸಮುದ್ರದ ಮೀನು ಗಳಲ್ಲಿ ಭೂತಾಯಿ, ಅಂಜಲ್, ಬಾಂಗಡ, ವೈಟ್‍ಪೋಂಫ್ರೇಟ್, ಬ್ಲಾಕ್ ಪೋಂಫ್ರೇಟ್ ಹಾಗೂ ಇನ್ನಿತರ ಮೀನುಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಇದರೊಂದಿಗೆ ಸಮುದ್ರದ ಸೀಗಡಿ ಸೇವನೆಯೂ ಹೆಚ್ಚಾಗಿದೆ. ಸಾಮಾನ್ಯ ವಾಗಿ ಮಳೆಗಾಲದಲ್ಲಿಯೇ ಮೀನುಗಳು ಮೊಟ್ಟೆ ಇಡುತ್ತವೆ. ಈ ಅವಧಿಯಲ್ಲಿ ಸಮುದ್ರ ದಲ್ಲಿ ಅಲೆಯೂ ಹೆಚ್ಚಾಗಿರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಮೀನು ಗಾರರು ಮೀನುಗಾರಿಕೆ ನಡೆಸುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಆದರೂ ಕೆಲವೆಡೆ ಸುರ ಕ್ಷಿತ ಸ್ಥಳದಲ್ಲಿ ಮೀನುಗಾರಿಕೆ ಮಾಡಿ, ಬಲೆಗೆ ಬಿದ್ದ ಅಲ್ಪಸ್ವಲ್ಪ ಮೀನನ್ನು ಮೈಸೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗ ರಕ್ಕೆ ಮಾರಾಟ ಮಾಡಲು ಪೂರೈಸಲಾಗುತ್ತಿದೆ.

ಸಾಮಾನ್ಯ ಜನರು ತಿನ್ನುವ ಭೂತಾಯಿ ಮೀನಿನ ಬೆಲೆ ಈ ಹಿಂದೆ ಕೆ.ಜಿಗೆ 160 ರೂ, ಇತ್ತು. ಆದರೆ ಇದೀಗ 300 ರೂ.ಗೆ ಹೆಚ್ಚಳ ವಾಗಿದೆ. ಕೆ.ಜಿಗೆ 900 ರೂ. ಇದ್ದ ಅಂಜಲ್ ಮೀನಿನ ಬೆಲೆ 1600 ರೂ. ಆಗಿದೆ. 180 ರೂ. ಇದ್ದ ಬಾಂಗಡ ಬೆಲೆ 380 ರೂ., 600 ರೂ. ಇದ್ದ ವೈಟ್‍ಪೋಂಫ್ರೇಟ್ ಬೆಲೆ 1400 ರೂ., 400 ರೂ. ಇದ್ದ ಸೀಗಡಿ ಬೆಲೆ ಕೆಜಿಗೆ 600 ರೂ. ಆಗಿದೆ. ಇನ್ನಿತರ ತಳಿಯ ಸಮು ದ್ರದ ಮೀನುಗಳ ಬೆಲೆಯೂ ಗಗನಕ್ಕೇರಿದೆ.

ಕೆಲವೇ ಸಮಯದಲ್ಲಿ ಮಾರಾಟ ಬಂದ್: ಮೈಸೂರಿನ ದೇವರಾಜ ಮಾರುಕಟ್ಟೆಗೆ ಹೊಂದಿಕೊಂಡಂತಿರುವ ಬೋಟಿ ಬಜಾರ್ ಬಳಿ ಸಮುದ್ರದ ಮೀನು ಮಾರಾಟ ಮಾಡುವ ಐದಾರು ಮಳಿಗೆಗಳಿವೆ. ಈ ಮಳಿಗೆಗಳಿಗೆ ಮಂಗಳೂರು ಹಾಗೂ ಕೇರಳ ದಿಂದ ಅಲ್ಪ ಪ್ರಮಾಣದ ಸಮುದ್ರದ ಮೀನು ಪೂರೈಕೆಯಾಗುತ್ತಿದೆ. ಗುತ್ತಿಗೆದಾ ರರು ಪ್ರತಿ ಮಳಿಗೆಗಳಿಗೆ 50ರಿಂದ 100 ಕೆಜಿ ಮೀನು ಪೂರೈಸುತ್ತಿದ್ದಾರೆ. ಬೆಲೆ ಹೆಚ್ಚಾ ದರೂ ಈ ಮೀನುಗಳನ್ನು ಕೊಂಡು ಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಎಲ್ಲಾ ತಳಿಯ ಸಮುದದ್ರ ಮೀನು ದಿನ ವೊಂದಕ್ಕೆ 1 ಸಾವಿರ ಕೆ.ಜಿ ಮಾರಾಟ ವಾಗುತ್ತಿದೆ. ಸಮುದ್ರದ ಮೀನುಗಳ ಸೇವ ನೆಗೆ ಮುಗಿಬೀಳುವವರಿದ್ದು, ಆರೋ ಗ್ಯದ ಹಿತದೃಷ್ಟಿಯಿಂದ ಬೆಲೆ ಗಗನಕ್ಕೇರಿ ದ್ದರೂ ಖರೀದಿಸಲು ಹಿಂದೇಟು ಹಾಕ ದಿರುವುದು ಕಂಡು ಬಂದಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »