ಮೈತ್ರಿ ಸರ್ಕಾರ ಸುಭದ್ರತೆ ನಾಯಕತ್ವ ಬದಲಾವಣೆ ಒಂದೇ ಮಾರ್ಗ
ಮೈಸೂರು

ಮೈತ್ರಿ ಸರ್ಕಾರ ಸುಭದ್ರತೆ ನಾಯಕತ್ವ ಬದಲಾವಣೆ ಒಂದೇ ಮಾರ್ಗ

July 14, 2019

ಕಾಂಗ್ರೆಸ್ ನಾಯಕರ ಪ್ರತಿಪಾದನೆ ದೇವೇಗೌಡರ ನಿರಾಕರಣೆ
ನವದೆಹಲಿ, ಜು.13- ಅತೃಪ್ತ ಶಾಸ ಕರ ರಾಜೀನಾಮೆಯಿಂದಾಗಿ ಪತನದ ಆತಂಕ ಎದುರಿಸುವ ಸರ್ಕಾರವನ್ನು ಸುಭದ್ರ ಗೊಳಿಸಲು ನಾಯಕತ್ವ ಬದಲಾವಣೆ ಒಂದೇ ಮಾರ್ಗ ಎಂಬ ಕಾಂಗ್ರೆಸ್ ಪಕ್ಷದ ಪ್ರಸ್ತಾವನೆಯನ್ನು ಜೆಡಿಎಸ್ ತಳ್ಳಿ ಹಾಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಹೆಚ್.ಡಿ.ರೇವಣ್ಣ ಅವರ ಕಾರ್ಯ ವೈಖರಿ ಬಗ್ಗೆ ಅತೃಪ್ತ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‍ಗೆ ನೀಡಿ, ಜೆಡಿಎಸ್‍ಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ದರೆ ಸಮಸ್ಯೆಗೆ ಪರಿಹಾರ ದೊರೆತು ಸರ್ಕಾರ ಸುಭದ್ರವಾಗಲಿದೆ ಎಂದು ಕಾಂಗ್ರೆಸ್ ಮುಖಂ ಡರು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಪರ್ಯಾಯ ಮಾರ್ಗ ಹುಡುಕುವ ಬದಲು ಸಮಸ್ಯೆಯ ಮೂಲ ಹುಡುಕಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೆಚ್.ಡಿ.ದೇವೇ ಗೌಡ ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.