ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಭ್ರಮ
ಮೈಸೂರು

ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಭ್ರಮ

December 16, 2019

ಮೈಸೂರು,ಡಿ.15(ಆರ್‍ಕೆಬಿ)- ಮೈಸೂ ರಿನ ತಿಲಕ್‍ನಗರದ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಆವರಣದಲ್ಲಿ ಭಾನುವಾರ ಶಾಲೆಯ ಹಳೆಯ ವಿದ್ಯಾರ್ಥಿ ಗಳು ಸಮ್ಮಿಲನಗೊಂಡು ಸಂಭ್ರಮಿಸಿದರು. ಅಪರೂಪಕ್ಕೆ ಒಂದೆಡೆ ಸೇರಿದ ತಮ್ಮ ಶಿಕ್ಷಕರು, ಗೆಳೆಯ, ಗೆಳತಿಯರನ್ನು ಕಂಡು ಹರ್ಷಗೊಂಡರು. ಸಂಕೇತ ಭಾಷೆಯಲ್ಲಿ ಪರಸ್ಪರ ಉಭಯಕುಶಲೋಪರಿ ನಡೆಸಿ ದರು. ಹತ್ತಾರು ವರ್ಷಗಳಿಗಿಂತ ಮುಂಚೆ ತಮಗೆ ಪಾಠ ಹೇಳಿಕೊಟ್ಟ ಗುರುಗಳನ್ನು ಕಂಡು ಕಾಲಿಗೆರಗಿ ನಮಸ್ಕರಿಸಿದರು.

ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿ ಗಳ ಸಂಘ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿ ಗಳ ಸಮಾಗಮ- ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಭ್ರಮಿಸಿದರು. ಶಾಲೆಯಲ್ಲಿ ಓದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವವರು, ಉದ್ಯೋಗದಿಂದ ನಿವೃತ್ತರಾದ ಹಳೇ ವಿದ್ಯಾರ್ಥಿ ಗಳು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ತಮಗೆ ಪಾಠ ಹೇಳಿ ಕೊಟ್ಟ ಗುರುಗಳಿಗೆ ಮೈಸೂರು ಪೇಟ, ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಅಭಿಮಾನ ದಿಂದ ಗೌರವಿಸಿ ಪುನೀತ ಭಾವನೆ ತಾಳಿದರು.

ಶಾಲೆಯಲ್ಲಿ ಓದಿದ ನೂರಾರು ಮಂದಿ ಈಗ ಬ್ಯಾಂಕ್, ಶಾಲಾ ಶಿಕ್ಷಕ, ವಿವಿಧ ಕಂಪನಿ ಗಳ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸು ತ್ತಿರುವ ಬಗ್ಗೆ ತಮ್ಮ ಗುರುಗಳೊಂದಿಗೆ ಸಂಕೇತ ಭಾಷೆಯಲ್ಲಿ ಹೇಳಿಕೊಂಡು ಸಂತಸಪಟ್ಟರು. ತಮ್ಮ ಶಿಷ್ಯಂದಿರು ನಾನಾ ವೃತ್ತಿಯಲ್ಲಿರು ವುದನ್ನು ಕಂಡು ಗುರುಗಳು ಆನಂದ ಭಾಷ್ಪ ಸುರಿಸಿದರು. ಪಾಠ ಹೇಳಿ ಕೊಟ್ಟ ಧನ್ಯತಾ ಭಾವದಿಂದ ಗುರುಗ ಳೊಬ್ಬರು ಆನಂದ ಭಾಷ್ಪ ಹರಿಸಿದರು.

ಇದಕ್ಕೂ ಮುನ್ನ ಸಮಾಗಮ- ಸಮ್ಮಿ ಲನ ಹಾಗೂ ಗುರುವಂದನಾ ಕಾರ್ಯ ಕ್ರಮಕ್ಕೆ ನಿವೃತ್ತ ಹಿರಿಯ ಶಿಕ್ಷಕರು ಚಾಲನೆ ನೀಡಿದರು. ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಪುಟ್ಟಸ್ವಾಮಯ್ಯ, ಆರ್. ರಾಮೇಗೌಡ, ನಂಜಮ್ಮ, ಸಂಜೀವಯ್ಯ, ಬಾಲರಾಜ್, ತಿರುವೆಂಕಟಾಚಾರಿ ಅವರು ಹಳೆಯ ವಿದ್ಯಾರ್ಥಿಗಳ ಸಂಘದಿಂದ ಗೌರವ ಸ್ವೀಕರಿಸಿದರು.

ಶಾಲೆಯಲ್ಲಿ ಓದಿ ಇಂದು ಬೆಂಗಳೂರಿ ನಲ್ಲಿ ಫ್ಯಾಷನ್ ಡಿಸೈನರ್ ಆಗಿ ಸ್ವಂತ ಉದ್ದಿಮೆ ಕೈಗೊಂಡು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿ ಪಡೆದ ಗೌರಮ್ಮ, 15 ಯಂತ್ರಗಳನ್ನು ಇಟ್ಟುಕೊಂಡು ನೂರಾರು ಮಂದಿಗೆ ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡಿ ದ್ದಾರೆ. ತಾವು ಕಲಿತ ಶಾಲೆಯ ಆವರಣದ ತುಂಬೆಲ್ಲಾ ಓಡಾಡಿ ಹಳೆಯ ವಿದ್ಯಾರ್ಥಿ ಗಳು ಮತ್ತು ಶಿಕ್ಷಕರೊಂದಿಗೆ ಹುರುಪಿ ನಿಂದ ಸಂವಾದಿಸುತ್ತಿದ್ದದ್ದು ಕಂಡು ಬಂತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತ ನಾಡಿದ ಶಿಕ್ಷಕ ಪಿ.ಗಂಗಾಧರ್, ಶ್ರವಣ ದೋಷವುಳ್ಳ ವಿದ್ಯಾರ್ಥಿಗಳಿಗಾಗಿ ಇಡೀ ರಾಜ್ಯದಲ್ಲಿ ಮೈಸೂರು ನಗರದಲ್ಲಿ ಒಂದೇ ಒಂದು ಶಾಲೆ ಇತ್ತು. ಆಗ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನೂರಕ್ಕೂ ಹೆಚ್ಚು ಇರುತ್ತಿತ್ತು. ರಾಜ್ಯದ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಇಲ್ಲಿ ಬಂದು ಕಲಿಯು ತ್ತಿದ್ದರು. ಇದುವರೆಗೆ ಸಾವಿರಾರು ಮಂದಿ ಶ್ರವಣದೋಷವುಳ್ಳ ವಿದ್ಯಾರ್ಥಿಗಳು ಇಲ್ಲಿ ಓದಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದ ಲ್ಲಿಯೂ ಸಾಧನೆ ಮೆರೆದಿದ್ದಾರೆ. ಅಂಗವೈಕಲ್ಯ ಸಾಧನೆಗೆ ಅಡ್ಡಿ ಅಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಬ್ಯಾಂಕ್, ರಕ್ಷಣಾ ಸಂಶೋ ಧನಾ ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಒ), ಕೆಎಸ್‍ಆರ್‍ಟಿಸಿ, ಇನ್ಫೋ ಸಿಸ್, ವಿಪ್ರೋ ಸೇರಿದಂತೆ ನಾನಾ ಕಂಪನಿ ಗಳಲ್ಲಿ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳಿದರು.

ಶಾಲೆಯ ನಿವೃತ್ತ ಪ್ರಭಾರ ಅಧೀಕ್ಷಕ ಎಂ.ಚನ್ನೇಶಯ್ಯ, ಅಂಗವಿಕಲ ಕಲ್ಯಾಣಾ ಧಿಕಾರಿ ಮಮತ, ಶಾಲೆಯ ಅಧೀಕ್ಷಕ ಹರೀಶ್, ಹಳೆದ ವಿದ್ಯಾರ್ಥಿ ಮುಖಂಡ ರಾದ ಸಂಜೀವಶೆಟ್ಟಿ, ಬಲರಾಂ, ನಾಗ ಮಣಿ, ಶ್ರೀನಿವಾಸ್, ಭಾಗ್ಯಲಕ್ಷ್ಮಿ, ಮಂಜುಳಾ, ಜಯಂತಿ, ವಿದ್ಯಾರ್ಥಿ ಸಂಘದ ಉಪಾ ಧ್ಯಕ್ಷ ಜಿ.ಎಸ್.ನವೀನ್‍ಕುಮಾರ್, ಕಾರ್ಯ ದರ್ಶಿ ಹನೀಫ್ ಇನ್ನಿತರರು ಉಪಸ್ಥಿತರಿದ್ದರು.

Translate »