ಹದಿಹರೆಯ ಸಮಸ್ಯಾಪೂರ್ಣ ವಯಸ್ಸು: ಪ್ರೊ.ಸೋಮಣ್ಣ
ಮೈಸೂರು

ಹದಿಹರೆಯ ಸಮಸ್ಯಾಪೂರ್ಣ ವಯಸ್ಸು: ಪ್ರೊ.ಸೋಮಣ್ಣ

December 16, 2019

ಮೈಸೂರು,ಡಿ.15(ಎಂಟಿವೈ)- `ಸಮಸ್ಯಾಪೂರ್ಣ ವಯಸ್ಸು’ ಎಂದು ಕರೆಯುವ ಹದಿಹರೆಯದಲ್ಲಿ ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಮನೋ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಸೋಮಣ್ಣ ಕಿವಿಮಾತು ಹೇಳಿದ್ದಾರೆ.

ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪಿ.ಜಿ. ಬ್ಲಾಕ್‍ನಲ್ಲಿ ಜಿಲ್ಲಾ ಪಂಚಾ ಯಿತಿ, ಆಯುಷ್ ಇಲಾಖೆ ಹಾಗೂ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಯೋಗ ದೊಂದಿಗೆ ಶುಕ್ರವಾರ ‘ಹದಿ ಹರೆಯದ ಸಮಸ್ಯೆಗಳ ನಿವಾರಣೆ ಮತ್ತು ಮನೋಲ್ಲಾಸದ ಮಾರ್ಗಗಳು’ ವಿಷಯದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಳೆತನ ಹಾಗೂ ಹಿರಿಯತನದ ನಡುವಿನ ವಯಸ್ಸು ಎನಿಸಿರುವ ಹದಿ ಹರೆಯದಲ್ಲಿ ಸಮಸ್ಯೆಗಳೇ ಹೆಚ್ಚಾಗಿರುತ್ತವೆ. ಜೀವನದಲ್ಲಿ ಸಮಸ್ಯೆಗಳನ್ನು ನಾವು ತಂದುಕೊಳ್ಳುತ್ತೇವೆಯೇ ಹೊರತು ಸಮಸ್ಯೆಗಳು ತಾವಾಗಿಯೇ ಬರುವುದಿಲ್ಲ. ಆ ಸಮಸ್ಯೆಗಳಿಗೆ ಪರಿಹಾರಗಳಿರುತ್ತವೆ. ಅವುಗಳನ್ನು ಪರಿಹರಿಸಿಕೊಳ್ಳುವುದಕ್ಕಿಂತ ಆ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳು ವುದು ಮುಖ್ಯ. ಸುಮ್ಮನೆ ಕುಳಿತಿರುವಾಗ ತಾನಾಗಿಯೇ ಬರುವ ಯೋಚನೆಗಳ ಹಿಂದೆ ನಾವು ಹೋಗಲು ಪ್ರಾರಂಭಿಸುತ್ತೇವೆ. ಇದ ರಿಂದ ಮೆದುಳಿಗೆ ತೊಂದರೆಯಾಗುತ್ತದೆಯೇ ಹೊರತು ಮೆದುಳು ಸಂತೃಪ್ತಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ವಿವರಿಸಿದರು.

ಮೆದುಳಿನಲ್ಲಿ ಅಟಾನಮಿಕ್ ನರ್ವಸ್ ಸಿಸ್ಟಂ ಒಂದು ವ್ಯವಸ್ಥೆಯಿದೆ. ಅದರಲ್ಲಿ `ಅನು ಕಂಪಿ’ ಮತ್ತು `ಉಪಾನುಕಂಪಿ’ ನರ ವ್ಯವಸ್ಥೆ ಗಳಿದ್ದು, ಅವು ನಮ್ಮ ದೇಹದ ಮತ್ತು ಮನಸ್ಸಿನ ಭಾಗಗಳನ್ನು ಸಮತೋಲನ ಮಾಡುವ ಕಾರ್ಯ ನಡೆಸುತ್ತವೆ. ಇದರಲ್ಲಿ ಒಂದು ವ್ಯವಸ್ಥೆ ಕೋಪವನ್ನು ಹೆಚ್ಚಿಸಿದರೆ, ಮತ್ತೊಂದು ಕೋಪವನ್ನು ಕಡಿಮೆ ಮಾಡುತ್ತದೆ. ಇವೆರಡ ರಲ್ಲಿ ಯಾವುದನ್ನು ಅನುಸರಿಸಬೇಕು ಎನ್ನುವು ದನ್ನು ನಾವೇ ನಿರ್ಧರಿಸಬೇಕು ಎಂದರು.

ಇದಕ್ಕೂ ಮುನ್ನ, ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಂ.ಎಸ್.ಮನೋ ನ್ಮಣಿ ಮಾತನಾಡಿ, ಸಮಸ್ಯೆಗಳ ಅರಿವು ನಿಮಗೆ ತಿಳಿದಾಗ ಅವುಗಳನ್ನು ನೀವು ಇತರ ಸ್ನೇಹಿತ ರೊಂದಿಗೆ ಹೇಳಿಕೊಳ್ಳುವುದರ ಮೂಲಕ ಅವರಿಂದ ಮತ್ತೆ ಬೇರೆಯವರಿಗೂ ಇಂತಹ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಆಧುನಿಕ ಜಗತ್ತು ಬೆಳೆಯುತ್ತಿರುವ ಹಾಗೇ ನಮ್ಮ ಸಮಸ್ಯೆಗಳೂ ಬೆಳೆಯುತ್ತಿವೆ. ಹದಿಹರೆ ಯದ ಸಮಸ್ಯೆಗಳನ್ನು ನಾವು ಯಾರ ಬಳಿಯೂ ಹೇಳಿಕೊಳ್ಳಲಾಗುವುದಿಲ್ಲ. ಈ ವಯಸ್ಸಿನಲ್ಲಿ ನಾವು ಒಬ್ಬರನ್ನೊಬ್ಬರು ಹೋಲಿಕೆ ಮಾಡಿಕೊಳ್ಳು ತ್ತೇವೆ. ಇಂತಹ ಸಮಸ್ಯೆಗಳನ್ನು ನಾವು ಹೇಗೆ ಪರಿಹರಿಸಿಕೊಳ್ಳಬಹುದೆಂಬ ಅರಿವು ನಿಮ್ಮಲ್ಲಿರ ಬೇಕು. ಧ್ಯಾನ, ಯೋಗವನ್ನು ಮಾಡುವುದ ರಿಂದ ನಿಮ್ಮ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳಬಹುದು ಎಂದು ತಿಳಿಸಿಕೊಟ್ಟರು.

ಕಾರ್ಯಾಗಾರದಲ್ಲಿ ತಾ.ಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ.ಎಸ್.ಜಿ.ರಾಘವೇಂದ್ರ, ಜಿಲ್ಲಾ ಆಯುಷ್ ಕಚೇರಿಯ ವೈದ್ಯಾಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮೀ ಹಾಗೂ ಡಾ.ಅಶ್ವಿನಿ ಮತ್ತಿತರರಿದ್ದರು.

Translate »