ಸರ್ಕಾರದ ಕಾರ್ಮಿಕ ವಿರೋಧಿ ನೀತಿ: ಕೆಲಸ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಲಕ್ಷಾಂತರ ಕಾರ್ಮಿಕರು
ಮೈಸೂರು

ಸರ್ಕಾರದ ಕಾರ್ಮಿಕ ವಿರೋಧಿ ನೀತಿ: ಕೆಲಸ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಲಕ್ಷಾಂತರ ಕಾರ್ಮಿಕರು

December 16, 2019

ಮೈಸೂರು,ಡಿ.15(ಆರ್‍ಕೆಬಿ)- ಸರ್ಕಾ ರದ ಕಾರ್ಮಿಕ ವಿರೋಧಿ ನೀತಿ ಮತ್ತು ಬಂಡವಾಳಶಾಹಿಗಳ ಪರ ನೀತಿಯಿಂದಾಗಿ ದೇಶದಲ್ಲಿಂದು ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಜೀವನ ನಡೆಸಲಾಗದ ಅತಂತ್ರ ಸ್ಥಿತಿಗೆ ದೂಡಲ್ಪಟ್ಟಿದ್ದಾರೆ ಎಂದು ಎಐಯು ಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮ ಶೇಖರ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಎಐಯು ಟಿಯುಸಿ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶ ಕಟ್ಟುವ ದುಡಿ ಯುವ ಜನ ಇಂದು ಮಾಲೀಕರ ಶೋಷ ಣೆಗೆ, ಅನ್ಯಾಯಕ್ಕೆ ಒಳಗಾಗಿದ್ದಾರೆ. ಉಸಿರು ಕಟ್ಟಿಸುವ ಪರಿಸ್ಥಿತಿಯಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರಿಗೆ ವೇತ ನದ ಹೆಸರಿನಲ್ಲಿ ಭಿಕ್ಷೆ ನೀಡಲಾಗುತ್ತಿದೆ. ದೇಶದಲ್ಲಿ ಒಂದು ಕೋಟಿ ಹೆಣ್ಣುಮಕ್ಕಳು ಕೆಲಸ ಮಾಡುತ್ತಿದ್ದಾರೆ. ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸದೆ ಶೋಷಣೆ ನಡೆಯುತ್ತಿದೆ. ಗುತ್ತಿಗೆ ಕಾರ್ಮಿಕರಿಗೆ ಜೀತ ದಾಳುಗಳಂತೆ ಕಾಣಲಾಗುತ್ತಿದೆ. ದೇಶ ಕ್ಕಾಗಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರ ಜೀವನಕ್ಕೆ ಭದ್ರತೆಯೇ ಇಲ್ಲ ಎಂದು ದೂರಿದರು.

ಪ್ರತಿಷ್ಠಿತ ಬಿಎಸ್‍ಎನ್‍ಎಲ್ ಕಂಪನಿ ಮುಚ್ಚುವ ಹಂತಕ್ಕೆ ತಲುಪಿದೆ. ರೈಲ್ವೆ, ಬ್ಯಾಂಕ್, ವಿಮೆ, ಶಿಕ್ಷಣ, ಆರೋಗ್ಯ ಈ ಎಲ್ಲಾ ಸೇವೆಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಸರ್ಕಾರ ಕಾರ್ಮಿಕರ ಹಿತ ಕಾಯುವ ಬದಲಿಗೆ ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿವೆ. ಜಿಎಸ್‍ಟಿ ಹೆಸರಿನಲ್ಲಿ ಜನರಿಂದ ಹಗಲು ದರೋಡೆ ಮಾಡು ತ್ತಿವೆ. ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ಲಕ್ಷಾಂ ತರ ಹುದ್ದೆ ಖಾಲಿ ಬಿದ್ದಿದ್ದರೂ ಭರ್ತಿ ಮಾಡು ತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‍ಯುಸಿಐ (ಕಮ್ಯೂನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಮಾತ ನಾಡಿ, ಇಂದು ಕಾರ್ಖಾನೆಗಳಲ್ಲಿ ಉತ್ಪಾದನೆ ಸ್ಥಗಿತವಾಗಿದೆ. ಹೀಗಾಗಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಜನರ ಬಳಿ ಹಣವಿಲ್ಲದ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಕಾರ್ಮಿಕರಿಗೆ ಭದ್ರತೆ ಒದಗಿ ಸಿಲ್ಲ. ಸರ್ಕಾರ ಕಾರ್ಮಿಕರಿಗೆ ನ್ಯಾಯ ಒದಗಿ ಸುವ ಬದಲು ಇನ್ನಷ್ಟು ಶೋಷಣೆ ಮಾಡು ತ್ತಿದೆ. ಇವೆಲ್ಲವನ್ನೂ ಮನಗಂಡು ಕಾರ್ಮಿ ಕರು ಮತ್ತಷ್ಟು ಸಂಘಟಿತ ಹೋರಾಟ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಮಿಕರ ಮೆರವಣಿಗೆ: ಇದಕ್ಕೂ ಮುನ್ನ ನೂರಾರು ಮಂದಿ ಕಾರ್ಮಿಕರು ಮೈಸೂ ರಿನ ಗನ್‍ಹೌಸ್ ಬಳಿಯಿಂದ ಚಾಮ ರಾಜ ಜೋಡಿ ರಸ್ತೆ ಮೂಲಕ ಮಹಾ ರಾಜ ಕಾಲೇಜು ಶತಮಾನೋತ್ಸವ ಭವನ ದವರೆಗೆ ಮೆರವಣಿಗೆ ನಡೆಸಿದರು. ಮೆರವ ಣಿಗೆ ಉದ್ದಕ್ಕೂ ತಮ್ಮ ಬೇಡಿಕೆಗಳ ಘೋಷಣೆಗಳನ್ನು ಕೂಗಿದರು. ಗುತ್ತಿಗೆ ಪದ್ಧತಿ ಮತ್ತು ಸಾರ್ವಜನಿಕರ ಉದ್ಯಮ ಗಳ ಖಾಸಗೀಕರಣ ನೀತಿ ವಿರೋಧಿಸಿ ದರು. ಸಮಾನ ಕೆಲಸಕ್ಕೆ ಸಮಾನ ವೇತನ, ನೀಡಬೇಕು. ಆಶಾ, ಅಂಗನವಾಡಿ, ಬಿಸಿ ಯೂಟದವರಿಗೆ ಕಾರ್ಮಿಕರ ಸ್ಥಾನಮಾನ ನೀಡಬೇಕು. ಕನಿಷ್ಠ ವೇತನ ರೂ. 21,000 ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಮೆರವಣಿಗೆಯಲ್ಲಿ ಎಸ್‍ಯುಸಿಐ (ಕಮ್ಯೂನಿಸ್ಟ್) ಪಕ್ಷದ ಜಿಲ್ಲಾ ಕಾರ್ಯ ದರ್ಶಿ ಬಿ.ರವಿ, ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ, ರಾಜ್ಯ ಸೆಕ್ರೆಟೆರಿಯಟ್ ಸದಸ್ಯ ಎಂ.ಶಶಿ ಧರ್, ಜಿಲ್ಲಾಧ್ಯಕ್ಷ ವಿ.ಯಶೋಧರ, ಜಿಲ್ಲಾ ಸಮಿತಿ ಸದಸ್ಯ ಮುದ್ದುಕೃಷ್ಣ, ಆಶಾ ಸಂಘದ ಸಂಧ್ಯಾ, ಮಂಜುಳಾ, ಜಯಮ್ಮ, ಬಿಸಿಯೂಟ ನೌಕರರ ಸಂಘದ ಗೀತಮ್ಮ ಇನ್ನಿತರರು ಉಪಸ್ಥಿತರಿದ್ದರು.

Translate »