ಮೈಸೂರಿನಲ್ಲಿ ವರ್ಷಾಂತ್ಯದಲ್ಲಿ ಉತ್ಸವಗಳ ಸಂಭ್ರಮ ವಿವಿಧ ಬಗೆಯ ಕಾರ್ಯಕ್ರಮ ಆಯೋಜನೆ
ಮೈಸೂರು

ಮೈಸೂರಿನಲ್ಲಿ ವರ್ಷಾಂತ್ಯದಲ್ಲಿ ಉತ್ಸವಗಳ ಸಂಭ್ರಮ ವಿವಿಧ ಬಗೆಯ ಕಾರ್ಯಕ್ರಮ ಆಯೋಜನೆ

December 16, 2019

ಮೈಸೂರು,ಡಿ.15(ಎಂಟಿವೈ)-ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ವರ್ಷಾಂತ್ಯದಲ್ಲಿ ಉತ್ಸವಗಳ ಸಂಭ್ರಮ ಮನೆ ಮಾಡಲಿದ್ದು, ನಗರದ ಜನತೆ ಹಾಗೂ ಪ್ರವಾಸಿಗರನ್ನು ರಂಜಿಸಲಿದೆ. ಜಿಲ್ಲಾಡಳಿತ ಮಾಗಿ ಉತ್ಸವದ ಹಿನ್ನೆಲೆಯಲ್ಲಿ ವಿವಿಧೆಡೆ ಫಲಪುಷ್ಪ ಪ್ರದರ್ಶನ, ಕೇಕ್ ಹಾಗೂ ಪಕ್ಷಿ ಉತ್ಸವ ಆಯೋಜಿಸುವ ಮೂಲಕ ಸದಭಿರುಚಿಯ ಕಾರ್ಯಕ್ರಮದ ಸೊಗಡನ್ನು ಉಣಬಡಿಸಲಿದೆ. ಕಳೆದ ಎರಡು ವರ್ಷದಿಂದ ಮಾಗಿ ಉತ್ಸವವನ್ನು ವರ್ಷಾಂತ್ಯದಲ್ಲಿ ಮೈಸೂರಿನ ಜನತೆ ಹಾಗೂ ವಿವಿಧೆಡೆಯಿಂದ ನಗರಕ್ಕಾಗಮಿಸುವ ಪ್ರವಾಸಿಗರಿಗೆ ಮನ ತಣಿಸುವ ಕಾರ್ಯ ಕ್ರಮ ಆಯೋಜಿಸುತ್ತಾ ಬರಲಾಗುತ್ತಿದೆ. ಮೊದಲ ವರ್ಷವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಇದೀಗ ಈ ವರ್ಷವೂ ಮಾಗಿ ಉತ್ಸವದ ಕಂಪು ಎಲ್ಲೆಡೆ ಪಸರಿಸಲಿದೆ. ಈಗಾಗಲೇ ವೇದಿಕೆ ಸಜ್ಜುಗೊಳ್ಳುತ್ತಿದ್ದು, ಭರಪೂರ ಮನರಂಜನೆ ದೊರೆಯಲಿದೆ.

ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಡಿ. 27ರಿಂದ 29ರವರೆಗೆ
`ಕೇಕ್ ಉತ್ಸವ’  50ಕ್ಕೂ ಹೆಚ್ಚು ಮಳಿಗೆಯಲ್ಲಿ ಬಗೆ ಬಗೆಯ ಕೇಕ್ ಲಭ್ಯ
ಮೈಸೂರು,ಡಿ.15(ಎಂಟಿವೈ)-ಮಾಗಿ ಉತ್ಸವದ ಹಿನ್ನೆಲೆ ಯಲ್ಲಿ ಮೈಸೂರಿನ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪ ದಲ್ಲಿ ಡಿ.27ರಿಂದ 29ರವರೆಗೆ ಕೇಕ್ ಉತ್ಸವ ನಡೆಯಲಿದೆ.

ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೇಕ್ ಉತ್ಸವ ಆಯೋಜಿಸಲಾಗಿದೆ. ಕಳೆದ ಎರಡು ವರ್ಷ ದಿಂದ ಡಿಸೆಂಬರ್ ಕೊನೆ ವಾರದಲ್ಲಿ ಕೇಕ್ ಉತ್ಸವ ನಡೆಸ ಲಾಗುತ್ತಿದೆ. ಕಳೆದ ವರ್ಷ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಕೇಕ್ ಉತ್ಸವ, ಈ ಬಾರಿ ಮೈಸೂರಿನ ಹೃದಯ ಭಾಗದಲ್ಲಿರುವ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಡಿ.22ರಿಂದ 31ರವರೆಗೆ ಈ ಸಾಲಿನ ಮಾಗಿ ಉತ್ಸವ ನಡೆಯಲಿದ್ದು, ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಜರುಗಲಿದೆ. ಡಿ.28 ಮತ್ತು 29ರಂದು ಪಕ್ಷಿ ಉತ್ಸವ (ಬರ್ಡ್ ಫೆಸ್ಟಿವಲ್) ಜರುಗಲಿದ್ದು, ಮಾಗಿ ಉತ್ಸವದ ಮೂರನೇ ಕಾರ್ಯಕ್ರಮವಾಗಿ ಕೇಕ್ ಉತ್ತವ ಏರ್ಪಡಿಸಲಾಗಿದೆ.

ಹೆಸರಾಂತ ಬೇಕರಿಗಳು ಕೇಕ್ ಉತ್ಸವದಲ್ಲಿ ಮಳಿಗೆ ತೆರೆಯಲಿದ್ದು, ವಿವಿಧ ಬಗೆಯ ಕೇಕ್‍ಗಳನ್ನು 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶನಕ್ಕಿಡಲಿದ್ದಾರೆ. ಎಲ್ಲಾ ಬಗೆಯ ಕೇಕ್ ಗಳು ಒಂದೇ ಸೂರಿನಲ್ಲಿ ದೊರೆಯಲಿದ್ದು, ಗ್ರಾಹಕರಿಗೆ ಹೊಸ ವರ್ಷದ ಸಂಭ್ರಮಾಚರಣೆಗೆ ಬೇಕಾದ ಇಷ್ಟವಾದ ಕೇಕ್ ಈ ಉತ್ಸವದಲ್ಲಿ ದೊರೆಯಲಿದೆ.

ಡಿ.28,29ರಂದು ಪಕ್ಷಿ ಉತ್ಸವ
 ಆಸಕ್ತ 100 ಮಂದಿಗೆ ಮಾತ್ರ ಅವಕಾಶ  ಪ್ರವೇಶ ಶುಲ್ಕ 300 ರೂ. ನಿಗದಿ
ಮೈಸೂರು,ಡಿ.15(ಎಂಟಿವೈ)- ಸಾಂಸ್ಕø ತಿಕ ನಗರಿ ಮೈಸೂರಿನಲ್ಲಿ ಡಿ.22ರಿಂದ 31ರವರೆಗೆ ನಡೆಯುವ `ಮಾಗಿ ಉತ್ಸವ’ದ ಹಿನ್ನೆಲೆಯಲ್ಲಿ ಡಿ.28,29 ರಂದು ಪಕ್ಷಿ ಉತ್ಸವ(ಬಡ್ರ್ಸ್ ಫೆಸ್ಟಿವಲ್) ನಡೆಯಲಿದೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಮೈಸೂರು ಮೃಗಾ ಲಯ ಮತ್ತು ಮೈಸೂರು ನೇಚರ್ ಗ್ರೂಪ್ ವತಿಯಿಂದ ಆಯೋಜಿಸಿರುವÀ ಪಕ್ಷಿ ಉತ್ಸವ ಎರಡನೇ ವರ್ಷದ ಕಾರ್ಯಕ್ರಮವಾ ಗಿದೆ. ಕಳೆದ ವರ್ಷ ನಡೆದ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಪಕ್ಷಿ ಉತ್ಸವ ನಡೆಸಲಾಗು ತ್ತಿದ್ದು, ವಿವಿಧ ಕಾರ್ಯಕ್ರಮ ನಡೆಯಲಿದೆ.

ಡಿ.28, 29ರಂದು ಎರಡು ದಿನವೂ ಈ ಕಾರ್ಯಕ್ರಮ ನಡೆಯಲಿದೆ. 300 ರೂ. ನೋಂದಣಿ ಶುಲ್ಕ ನಿಗದಿಪಡಿಸ ಲಾಗಿದೆ. ಆಸಕ್ತ 100 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಎರಡು ದಿನವೂ ಉತ್ಸವ ದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿ ಕೊಂಡಿರುವವರಿಗೆ ತಿಂಡಿ, ಊಟ, ಚಹಾ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ವಿವಿ ಧೆಡೆ ಪಕ್ಷಿ ವೀಕ್ಷಣೆಗೆ ಕರೆದೊಯ್ಯಲು ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ.

ಪಕ್ಷಿ ಉತ್ಸವದಲ್ಲಿ ಪಕ್ಷಿ ಸಂಕುಲಕ್ಕೆ ಸಂಬಂಧಿ ಸಿದ ವಿವಿಧ ವಿಷಯಗಳ ಬಗ್ಗೆ ತಜ್ಞರು 5 ವಿಶೇಷ ಉಪನ್ಯಾಸ ನೀಡ ಲಿದ್ದಾರೆ. ಸಂಪ ನ್ಮೂಲ ವ್ಯಕ್ತಿಗಳ ನೇತೃತ್ವ ದಲ್ಲಿ 2 ಕ್ಷೇತ್ರ ಭೇಟಿಗಳನ್ನು ನಿಗದಿಪಡಿ ಸಲಾಗಿರುತ್ತದೆ. ಮೈಸೂರು ನಗರದಿಂದ 30 ನಿಮಿಷ ಗಳಲ್ಲಿ ತಲುಪಬಹುದಾದ ಪಕ್ಷಿಗಳಿರುವ ಸ್ಥಳ, ಗದ್ದೆ ಹಾಗೂ ಇನ್ನಿತರ ತಾಣಗಳಿಗೆ ಕರೆದೊಯ್ಯ ಲಾಗುತ್ತದೆ. ನೋಂದಾಯಿತ 100 ಮಂದಿ ಯನ್ನು 6 ತಂಡಗಳಾಗಿ ವಿಂಗಡಿಸಿ, ಪಕ್ಷಿಗಳ ಬಗ್ಗೆ ವಿವರ ನೀಡಲಾಗುತ್ತದೆ. ಪಕ್ಷಿ ಉತ್ಸವ ದಲ್ಲಿ ಪಾಲ್ಗೊಳ್ಳು ವವರ ಹೆಸರು ನೋಂದಾ ಯಿಸಲು ವೆಬ್‍ಸೈಟ್ ವಿಳಾಸವನ್ನು ಶೀಘ್ರವೇ ಜಿಲ್ಲಾಡಳಿತ ತಿಳಿಸಲಿದೆ.

ಸೆಂಟ್‍ಫಿಲೋಮಿನಾ ಚರ್ಚ್‍ನಲ್ಲಿ ಡಿ.21, 22ರಂದು ಕ್ರಿಸ್ಮಸ್ ಕಾರ್ನಿವಲ್ ಫೆಸ್ಟಿವಲ್
ಮೈಸೂರು,ಡಿ.15(ಎಂಟಿವೈ)- ಕ್ರಿಸ್‍ಮಸ್ ಹಿನ್ನೆಲೆ ಯಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್‍ನಲ್ಲಿ ಡಿ.21 ಮತ್ತು 22ರಂದು ಕ್ರಿಸ್ಮಸ್ ಕಾರ್ನಿವಲ್ ಹಾಗೂ ವೆಸ್ಟರ್ನ್ ಕಾರ್ಲೋಸ್ ಕಾರ್ಯಕ್ರಮ ನಡೆಯಲಿದೆ.

ಹ್ಯೂಮನ್ ವಿಂಗ್ಸ್ ಫೌಂಡೇಷನ್ ವತಿಯಿಂದ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್‍ನಲ್ಲಿ ಎರಡೂ ದಿನದಲ್ಲೂ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, ಚರ್ಚ್‍ನಲ್ಲಿ ಈ ರೀತಿಯ ವರ್ಣರಂಜಿತ ಕಾರ್ಯಕ್ರಮ ನಡೆಯಲಿದೆ. ಹಾಡು, ಕುಣಿತ, ಹಾಸ್ಯ ಸೇರಿದಂತೆ ಇನ್ನಿತರ ಸಾಂಸ್ಕøತಿಕ ಕಾರ್ಯ ಕ್ರಮ, ಪಾಶ್ಚಿಮಾತ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಜರುಗಲಿದೆ. ಹೂವಿನ ಬೊಕ್ಕೆಯಿಂದ ಹಿಡಿದು ಬಾಯಲ್ಲಿ ನೀರೂರಿಸುವ ಖಾದ್ಯಗಳ ಮಾರಾಟ ಮಳಿಗೆ ತೆರೆಯಲಾಗುವುದು. ಜೊತೆಗೆ ಕೇಕ್ ಶಾಪ್, ಡ್ಯಾನ್ಸ್, ಗೇಮ್ಸ್, ಸ್ಕಿಟ್, ಸಂತರ ವೇಷಧಾರಣೆ ಸೇರಿದಂತೆ ಹತ್ತು ಹಲವು ಆಕರ್ಷಣೆಗಳು ಅಂದು ಚರ್ಚ್‍ನಲ್ಲಿ ಕಾಣಸಿಗಲಿವೆ. ಹಲವು ಕಲಾವಿದರ ತಂಡಗಳು ಸೇರಿದಂತೆ ವಿವಿಧ ಶಾಲಾ-ಕಾಲೇಜಿನ 20 ತಂಡಗಳು ಕ್ರಿಸ್ಮಸ್ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಗ್ರೀನ್ ಇನಿಷಿಯೇಟಿವ್ ಸ್ಟಾಲ್ ಶೀರ್ಷಿಕೆಯಡಿ ಮಳಿಗೆ ತೆರೆಯಲಾಗುವುದು. ಚರ್ಚ್‍ಗೆ ಭೇಟಿ ನೀಡು ವವರಿಗೆ ಅಡಿಗೆ ಮನೆಯಲ್ಲಿ ಉತ್ಪತ್ತಿಯಾಗುವ ನಿರುಪ ಯುಕ್ತ ಪದಾರ್ಥಗಳನ್ನು ಮರುಬಳಕೆ ಮಾಡುವ ವಿಧಾ ನವನ್ನು ವಿವರಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಮೊ.ಸಂ. 9886055878 ಸಂಪರ್ಕಿಸಬಹುದಾಗಿದೆ.

Translate »