ಮಾಗಿ ಉತ್ಸವದಲ್ಲಿ ಅರಮನೆ ಅಂಗಳದಲ್ಲಿ ತಲೆ ಎತ್ತಲಿದೆ `ಹೂವಿನ ಲೋಕ’
ಮೈಸೂರು

ಮಾಗಿ ಉತ್ಸವದಲ್ಲಿ ಅರಮನೆ ಅಂಗಳದಲ್ಲಿ ತಲೆ ಎತ್ತಲಿದೆ `ಹೂವಿನ ಲೋಕ’

December 16, 2019
  • ಡಿ.22ರಿಂದ 31ರವರೆಗೆ ಫಲಪುಷ್ಪ ಪ್ರದರ್ಶನ
  • ಹೂವುಗಳಿಂದಲೇ ವಿವಿಧ ಆಕೃತಿ ರಚನೆ
  • ಸಂಗೀತ ಕಾರ್ಯಕ್ರಮವೂ ಆಯೋಜನೆ
  • ಪ್ರವಾಸಿಗರಿಗೆ ಮನರಂಜನೆಯ ಹಬ್ಬ

ಮೈಸೂರು,ಡಿ.15- ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಗೆ ಹಾಗೂ ಪ್ರವಾಸಿಗರಿಗೆ ಅರಮನೆ ಆವರಣದಲ್ಲಿ ಡಿ.22ರಿಂದ 31ರವರೆಗೆ ನಡೆಯಲಿರುವ ಪಲಪುಷ್ಪ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡಲಿವೆ. ಬೆಂಗಳೂರು ಅರಮನೆ, ಸಿಂಹಾಸನದ ಮೇಲೆ ಆಸೀನರಾಗಿರುವ ಜಯಚಾಮರಾಜ ಒಡೆಯರ್, ಸ್ವಾಮಿ ವಿವೇಕಾನಂದ ಹಾಗೂ ಕಾಳಿಂಗ ಸರ್ಪ ಸೇರಿದಂತೆ ವಿವಿಧ ಆಕೃತಿಗಳು ಬಣ್ಣ ಬಣ್ಣದ ಹೂವುಗಳಿಂದ ತಲೆ ಎತ್ತಲಿದ್ದು, ನೋಡುಗರ ಕಣ್ಮನ ಸೆಳೆಯಲಿದೆ.

ವರ್ಷಾಂತ್ಯ ಹಾಗೂ ಹೊಸ ವರ್ಷದ ಆರಂಭದಲ್ಲಿ ವಿವಿಧ ಕಾರ್ಯಕ್ರಮಗಳಿಂದ ಮೈಸೂರಿನ ಜನತೆ ಹಾಗೂ ಪ್ರವಾಸಿಗರು ಮಿಂದೇಳುವಂತೆ ಮಾಡುವ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಮೈಸೂರಿನಲ್ಲಿ `ಮಾಗಿ ಉತ್ಸವ’ ಆಯೋಜಿಸಲಾಗುತ್ತಿದೆ. ಇದರೊಂದಿಗೆ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿ, ನಗರದ ಜನರು ಹಾಗೂ ಪ್ರವಾಸಿಗರಿಗೆ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಬಾರಿಯೂ 9 ದಿನಗಳ ಕಾಲ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ ನಡೆಯ ಲಿದ್ದು, 25 ಸಾವಿರ ಹೂವಿನ ಕುಂಡ ಗಳಲ್ಲದೆ, ಲಕ್ಷಕ್ಕೂ ಅಧಿಕ ವಿವಿಧ ಬಣ್ಣದ ಗುಲಾಬಿ ಹೂವುಗಳಿಂದ ಹಾಗೂ ವಿವಿಧ ತರಕಾರಿಗಳಿಂದ ಆಕೃತಿಗಳು ಮೈದಳೆ ಯಲಿವೆ. ಡಿ.22ರಂದು ಆರಂಭವಾಗ ಲಿರುವ ಫಲಪುಷ್ಪ ಪ್ರದರ್ಶನ ಡಿ.31 ರವರೆಗೂ ನಡೆಯಲಿದ್ದು, ಸಾರ್ವಜನಿ ಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾ ಗಿದೆ. ಅರಮನೆಯ ಎಲ್ಲಾ ಗೇಟ್‍ಗ ಳಿಂದಲೂ ಫಲಪುಷ್ಪ ವೀಕ್ಷಣೆಗೆ ಬರಲು ಅವಕಾಶ ಮಾಡಿಕೊಡಲಾಗುತ್ತದೆ.

ಯಾವ ಹೂವುಗಳು: ಈ ಸಾಲಿನ ಫಲ ಪುಷ್ಪ ಪ್ರದರ್ಶನದಲ್ಲಿ 25 ಸಾವಿರ ವಿವಿಧ ಬಗೆಯ ಹೂವಿನ ಗಿಡವುಳ್ಳ ಹೂವಿನ ಕುಂಡ ಬಳಸಲಾಗುತ್ತಿದೆ. ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಕಾಕ್ಸಕೂಂಬ್, ಪಿಟೋ ನಿಯ, ಸೇವಂತಿಗೆ, ಕೋಲಿಯಸ್, ಸಲೋ ಷಿಯ, ನಸ್ಟರ್‍ಸಿಯಂ, ಆಂಟಿ ರೈನಂ, ಬೋನ್ಸಾಯ್ ಗಿಡಗಳು ಸೇರಿದಂತೆ 32 ಬಗೆಯ ಹೂವಿನ ಗಿಡಗಳು ಕಣ್ಮನ ಸೆಳೆಯ ಲಿವೆ. ಇವುಗಳೊಂದಿಗೆ 4.00 ಲಕ್ಷ ವಿವಿಧ ಹೂವುಗಳಾದ ಗುಲಾಬಿಗಳು, ಕ್ರೈಸಾಂಥಿ ಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿ ಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಹಾಗೂ ಇತರೆ ಅಲಂಕಾರಿಕ ಹೂವು, ಊಟಿ ಕಟ್ ಫ್ಲವರ್‍ಗಳನ್ನೂ ಫಲಪುಷ್ಪ ಪ್ರದರ್ಶನವನ್ನು ಅಲಂಕರಿಸಲಾಗಿರುತ್ತದೆ.

ಆಕೃತಿಗಳು: ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ವಿವಿಧ ಆಕೃತಿಗಳು ಮುದ ನೀಡ ಲಿವೆ. ಮೈಸೂರು ಅರಮನೆ ಆವರಣದಲ್ಲಿ ಬೆಂಗಳೂರು ಅರಮನೆ ಆಕೃತಿ ಗುಲಾಬಿ ಹೂವಿನಿಂದ ತಲೆ ಎತ್ತಲಿದೆ. ವಿವಿಧ ಬಣ್ಣ ಗಳ ಲಕ್ಷಕ್ಕೂ ಅಧಿಕ ಗುಲಾಬಿ ಹೂವಿ ನಿಂದ 45x10x20 ಆಕೃತಿ ಅಡಿ ಅಳತೆ ಯಲ್ಲಿ ಬೆಂಗಳೂರು ಅರಮನೆ ಆಕೃತಿ ಯನ್ನು ರಚಿಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಸೊಂಡಿಲೆತ್ತಿ ನಮಸ್ಕರಿಸುತ್ತಿರುವ ಎರಡು ಆನೆಗಳ ಮಾದರಿ, ವಾಯುಸೇನಾ, ಭೂಸೇನಾ ಹಾಗೂ ನೌಕಾಸೇನೆ ಗೌರವ ಸಲ್ಲಿಸುವಂತೆ ಮಾದರಿ ಚಿತ್ರಗಳನ್ನು ಪಿಂಗ್ ಪಾಂಗ್ ಹೂವುಗಳಿಂದ ಅಲಂಕರಿಸಲಾಗುತ್ತದೆ.

ಭಾರತದ ಹೆಮ್ಮೆಯ ಸಂಕೇತ ಬಾಹ್ಯಾ ಕಾಶ ಸಂಸ್ಥೆ(ಇಸ್ರೋ) ಉಪಗ್ರಹ ಉಡಾ ವಣೆಯ ಮಾದರಿ ಆಕೃತಿ, ಕಾಳಿಂಗ ಸರ್ಪದ ಆಕೃತಿ, ಧ್ಯಾನದ ಭಂಗಿಯಲ್ಲಿ ಕುಳಿತಿರುವ ಸ್ವಾಮಿ ವಿವೇಕಾನಂದರ ಚಿತ್ರ ವನ್ನು ನಿರ್ಮಿಸಿ ಹೂವು ಮತ್ತು ತರಕಾರಿ ಗಳಿಂದ ಅಲಂಕರಿಸಲಾಗುತ್ತದೆ. ಯದು ವಂಶದ ಶ್ರೀ ಜಯಚಾಮರಾಜ ಒಡೆ ಯರ್‍ರವರು ಸಿಂಹಾಸನದ ಮೇಲೆ ಕುಳಿ ತಿರುವ ಆಕೃತಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಗಳ ಜೊತೆಯಲ್ಲಿ ಶ್ರೀ ಜಯಚಾಮ ರಾಜ ಒಡೆಯರ್‍ರವರು ಇರುವಂತೆ ಆಕೃತಿ, ಅರಮನೆ ಖಾಸಗಿ ದರ್ಬಾರ್‍ನ ಆಕೃತಿಯುಳ್ಳ ಸೆಲ್ಫಿ ಜೊóóೀನ್ ನಿರ್ಮಾಣ, ರಾಷ್ಟ್ರಪಕ್ಷಿ ನವಿಲು ಮಾದರಿ ಚಿತ್ರ ಹಾಗೂ ಮನೆಯ ಅಂಗಳದ ರೀತಿಯ ಫೋಟೊ ಜೊóóೀನ್ ನಿರ್ಮಾಣ, ಶಿವಲಿಂಗ ಮಾದರಿ ಚಿತ್ರವನ್ನು ನಿರ್ಮಿಸಿ ನಿಂಬೆಹಣ್ಣು ಮತ್ತು ಬಿಲ್ವಪತ್ರೆಗಳಿಂದ ಅಲಂಕರಿಸಲಾಗುತ್ತದೆ. ಚಾರಿಯೆಟ್ ಗಾಡಿಯ ಮಾದರಿ ಮತ್ತು ಒಂದು ಕುದುರೆ ಆಕೃತಿ, ಮಕ್ಕಳ ಉದ್ಯಾನ ವನದಲ್ಲಿ ಆಕರ್ಷಣೆಗಾಗಿ ಮರಳುಗಾಡಿ ನಲ್ಲಿ ವಾಸಿಸುವ ಪ್ರಾಣಿಗಳು ಮತ್ತು ಪಕ್ಷಿ ಗಳ (Desert animals & birds) 5 ಚಿತ್ರಗಳನ್ನು ನಿರ್ಮಿಸಿ ಹೂವು, ತರ ಕಾರಿಗಳಿಂದ ಅಲಂಕರಿಸಲು ಉದ್ದೇಶಿಸ ಲಾಗಿದೆ. ಅಲ್ಲದೆ, ಪುಷ್ಪ ಪ್ರದರ್ಶನದಲ್ಲಿ ವರಾಹಸ್ವಾಮಿ ದೇವಾಲಯಕ್ಕೆ ಹೊಂದಿ ಕೊಂಡಂತೆ 27×13 ಅಡಿ ಅಳತೆಯಲ್ಲಿ 10000 ಪಿಟೋನಿಯ ಹೂವಿನ ಗಿಡ ಗಳಿಂದ ವರ್ಟಿಕಲ್ ಗಾರ್ಡನ್ ನಿರ್ಮಿಸ ಲಾಗುತ್ತದೆ. ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸುವ ಎಲ್ಲಾ ಆಕೃತಿಗಳ ತಾಜಾತನ ಕಾಪಾಡಲು ಒಂದು ಬಾರಿ ಹೂವು ಮತ್ತು ತರಕಾರಿಗಳನ್ನು ಬದಲಿಸಲಾಗುತ್ತದೆ.

ಔಷಧೀಯ ಗಿಡ ವಿತರಣೆ: ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ಸಾರ್ವ ಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕಾರ್ಯ ಕ್ರಮದ ಕೊನೆಯಲ್ಲಿ ಔಷಧೀಯ ಗಿಡಗ ಳಾದ ಅಲೋವೆರ, ತುಳಸಿ, ವೀಳ್ಯೆದೆಲೆ ಗಿಡಗಳನ್ನು ವಿತರಿಸಲಾಗುವುದು.

ಕೀರ್ತನೆಯ ನಿನಾದ: ಫಲಪುಷ್ಪ ಪ್ರದ ರ್ಶನದ ವೇಳೆ ಒಂದೆಡೆ ಹೂವಿನ ಲೋಕ ಸೊಬಗನ್ನು ಸವಿಯುತ್ತಿದ್ದರೆ, ಮತ್ತೊಂ ದೆಡೆ ಕೀರ್ತನೆ ನಿನಾದ ಹೊರ ಹೊಮ್ಮ ಲಿದೆ. ಶ್ರೀ ಜಯಚಾಮರಾಜ ಒಡೆಯರ್ ರಚಿಸಿರುವ ಕೀರ್ತನೆಗಳು ಸೇರಿದಂತೆ ಕ್ಲಾಸಿ ಕಲ್ ಮ್ಯೂಸಿಕ್ ಆಲಿಸಬಹುದಾಗಿದೆ.

ದೀಪಾಲಂಕಾರದಲ್ಲಿ ಕಾರ್ಯಕ್ರಮ: ಫಲಪುಷ್ಪ ಪ್ರದರ್ಶನ ನಡೆಯುವ ಡಿ.22 ರಿಂದ 31ರವರೆಗೆ ಸಂಜೆ 7.00 ರಿಂದ 8.30 ರವರೆಗೆ ಅರಮನೆಗೆ ವಿದ್ಯುತ್ ದೀಪಾಲಂ ಕಾರ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವೂ ಜರುಗ ಲಿದೆ. ಡಿ.31ರಂದು ರಾತ್ರಿ 11 ರಿಂದ 12 ಗಂಟೆ ವರೆಗೆ ಕರ್ನಾಟಕ ಮತ್ತು ಆಂಗ್ಲ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ಏರ್ಪಡಿಸ ಲಾಗಿರುತ್ತದೆ. ಡಿ.31ರಂದು ಮಧ್ಯರಾತ್ರಿ 12.00 ರಿಂದ 12.15 ರವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ದ ರಹಿತ ಪಟಾಕಿ ಸಿಡಿಸುವ ಮೂಲಕ ಮೈಸೂರು ಅರಮನೆ ಮಂಡಳಿ ವತಿಯಿಂದ ಹೊಸ ವರ್ಷಾಚರಣೆ ಆಯೋಜಿಸಲಾಗಿದೆ.

ಛಾಯಾಚಿತ್ರ ಮತ್ತು ವೀಡಿಯೋ ಪ್ರದರ್ಶನ: ಫಲಪುಷ್ಪ ಪ್ರದರ್ಶನದ ಹಿನ್ನೆಲೆ ಯಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ದಸರಾ ಅಂದು-ಇಂದು Wodeyar Rulers etc  ಹಾಗೂ ವಿಶ್ವ-ವಿಖ್ಯಾತ ನಾಡಹಬ್ಬವಾದ ಇಂದಿನ ಮೈಸೂರು ದಸರಾ, ಹಳೆಯ ದಸರಾ ವನ್ನು ಪ್ರಾರಂಭಿಸಿ ತಹಲ್‍ವರೆವಿಗೂ ವಿಡೀಯೋ ಚಿತ್ರೀಕರಣದ ಮುಖೇನಾ ಸಾಕ್ಷ್ಯಚಿತ್ರವನ್ನೂ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಬೊಂಬೆಗಳ ಪ್ರದರ್ಶನ: ನವರಾತ್ರಿಯ ಸಂದರ್ಭದಲ್ಲಿ ಮನೆಗಳಲ್ಲಿ ಪ್ರದರ್ಶಿಸುವ ಬೊಂಬೆಗಳನ್ನು ಫಲಪುಷ್ಪ ಪ್ರದರ್ಶನದಲ್ಲೂ 4 ರಿಂದ 5 ಬ್ಲಾಕ್‍ಗಳಲ್ಲಿ ಪ್ರದರ್ಶಿಸಲಾಗು ತ್ತದೆ. ಶ್ರೀರಂಗಪಟ್ಟಣದ ಭಾನು ಪ್ರಕಾಶ್ ಶರ್ಮಾ ಅವರು ಸಾಂಪ್ರದಾಯಿಕ ಬೊಂಬೆ ಪ್ರದರ್ಶನ, ಜಯಶ್ರೀ ನಾಗಪ್ರಸಾದ್ ಅವ ರಿಂದ ವಿಷ್ಣು ದರ್ಶನ, ಗೀತಾ ಶ್ರೀಹರಿ ಅವ ರಿಂದ ಶಿವ ಲೀಲಾಮೃತ, ಶ್ರೀರಾಮದರ್ಶನಂ ಗೊಂಬೆ ಪ್ರದರ್ಶನ, ಅನ್ನಪೂರ್ಣ ಗೋಪಾಲ ಕೃಷ್ಣ ಅವರು ಭಾರತೀಯ ಗುರು ಪರಂಪರೆ ಗೊಂಬೆಗಳ ಪ್ರದರ್ಶಿಸಲಿದ್ದಾರೆ.

ಎಂ.ಟಿ.ಯೋಗೇಶ್ ಕುಮಾರ್

Translate »