ನಾರಾಯಣ ಮುಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಮಗ್ರ ತೂಕ ಇಳಿಸುವಿಕೆಯ ಕ್ಲಿನಿಕ್ ಆರಂಭ
ಮೈಸೂರು

ನಾರಾಯಣ ಮುಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಮಗ್ರ ತೂಕ ಇಳಿಸುವಿಕೆಯ ಕ್ಲಿನಿಕ್ ಆರಂಭ

December 16, 2019

ಮೈಸೂರು, ಡಿ. 15- ವಿಶ್ವ ಬೊಜ್ಜು ಒಕ್ಕೂಟದ ವರದಿಯ ಪ್ರಕಾರ, ಸ್ಥೂಲಕಾಯ ದಿಂದ ಬಳಲುತ್ತಿರುವ ಜನರ ವಿಷಯದಲ್ಲಿ ಭಾರತವು ವಿಶ್ವದಲ್ಲೇ ಎರಡನೇಸ್ಥಾನದಲ್ಲಿದೆ.

ನಮ್ಮ ದೇಶದಲ್ಲಿ ಜನರು ಅಸ್ವಸ್ಥಗೊಳ್ಳಲು ಸ್ಥೂಲಕಾಯತೆ ಮುಖ್ಯ ಕಾರಣವಾಗಿದೆ. ಈ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆ ಹಾಗೂ ಪರಿಹಾರವಿದ್ದರೂ ಸಹ ಜನರಲ್ಲಿ ಅರಿವಿನ ಸಮಸ್ಯೆ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಗಳಿಗೆ ಸರಿಯಾದ ಮಾರ್ಗಗಳು ಸಿಗದ ಕಾರಣದಿಂದಾಗಿ ಹಲವಾರು ಪ್ರಕರಣಗಳು ಸೂಕ್ತ ವೈದ್ಯಕೀಯ ರೋಗ ನಿರ್ಣಯ ಕೈಗೊಳ್ಳಲಾಗದೆ ಚಿಕಿತ್ಸೆಗಳು ಬಾಕಿ ಉಳಿದೆವೆ. ಈ ಅಂತರವನ್ನು ನಿವಾರಿಸುವ ಪ್ರಯತ್ನ ವಾಗಿ, ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಮಗ್ರ ತೂಕ ಇಳಿಸುವ ಚಿಕಿತ್ಸಾಲಯವನ್ನು ಪ್ರಾರಂಭಿಸಿದೆ. ಈ ಚಿಕಿತ್ಸಾಲಯವನ್ನು ಚಿತ್ರನಟ ಅನಿರುದ್ಧ ಜಟ್ಕರ್ ಉದ್ಘಾಟಿಸಿದರು.

ಹೊಸದಾಗಿ ಪ್ರಾರಂಭಿಸಲಾದ ಚಿಕಿತ್ಸಾಲಯ ದಲ್ಲಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಲೋಕೇಶ್ ಎಚ್.ಎಂ. ಅವರ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ. ಈ ತಂಡವು ರೋಗಿಗಳಿಗೆ ಸ್ಥೂಲಕಾಯತೆಯನ್ನು ಪತ್ತೆ ಹಚ್ಚಲು ಸಹಾಯ ಮಾಡುವುದರ ಜೊತೆಗೆ ಅವರಿಗೆ ಉತ್ತಮ ಚಿಕಿತ್ಸೆಯನ್ನು ನೀಡು ತ್ತದೆ. ಇದಲ್ಲದೆ, ಉತ್ತಮ ಫಲಿತಾಂಶ ಗಳನ್ನು ಖಚಿತಪಡಿಸಿಕೊಳ್ಳಲು ರೋಗಿಗಳ ದೇಹದ ಪ್ರಕಾರ ಮತ್ತು ಆರೋಗ್ಯ ಸ್ಥಿತಿ ಯನ್ನು ಆಧರಿಸಿ ಚಿಕಿತ್ಸೆಯ ಯೋಜನೆ ಗಳನ್ನು ರೂಪಿಸಲಾಗುತ್ತದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಈ ವಿಭಾಗವು ರೋಗಿಗಳಿಗೆ ಬೊಜ್ಜು ಕರಗಿಸುವ ವಿವಿಧ ಚಿಕಿತ್ಸಾ ವಿಧಾನಗಳನ್ನು ಒದಗಿಸುತ್ತದೆ. ಈ ಕ್ಲಿನಿಕ್ಕಿನಲ್ಲಿ ಸ್ಥೂಲಕಾಯತೆ ಮತ್ತು ಸಂಬಂಧಿತ ತೊಡಕುಗಳಿಗೆ ಎಂಡೋ ಸ್ಕೋಪಿಕ್ ಮತ್ತು ಶಸ್ತ್ರಚಿಕಿತ್ಸೆಯ ಚಿಕಿತ್ಸೆ ಯನ್ನು ನೀಡಲಾಗುತ್ತದೆ ಮತ್ತು ವ್ಯಕ್ತಿಗತ ವಾಗಿ ಆಹಾರ ಮತ್ತು ದೈಹಿಕ ಚಟುವಟಿಕೆಯ ಯೋಜನೆ ರೂಪಿಸಲಾಗುತ್ತದೆ.

ಈ ಸೌಲಭ್ಯದ ಕುರಿತು ಕನ್ಸಲ್ಟೆಂಟ್ ಬಾರಿಯಾಟ್ರಿಕ್ ಸರ್ಜನ್ ಡಾ. ಹೆಚ್.ಎಂ. ಲೋಕೇಶ್ ಮಾತನಾಡಿ, ಸ್ಥೂಲಕಾಯತೆಯು ರಾಜ್ಯವು ಪ್ರಸ್ತುತ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ವಾಸ್ತವವಾಗಿ, 2007ರಲ್ಲಿ ಕರ್ನಾಟಕದಲ್ಲಿ ಜನಸಂಖ್ಯೆಯ ಕೇವಲ ಶೇ. 16 ಮಾತ್ರ ಬೊಜ್ಜು ಹೊಂದಿದ್ದರು, ಆದರೆ 2015 ರಲ್ಲಿ ಶೇ. 26 ಜನಸಂಖ್ಯೆಯು ಸ್ಥೂಲಕಾಯ ದಿಂದ ಬಳಲುತ್ತಿದ್ದಾರೆ ಮತ್ತು ಇದು ಭಾರಿ ವೇಗದಲ್ಲಿ ಬೆಳೆಯುತ್ತಿದೆ. ಸ್ಥೂಲ ಕಾಯದಿಂದಾಗಿ ಆರೋಗ್ಯ ಸಮಸ್ಯೆ ಮಾತ್ರವಲ್ಲದೆ, ಮಧುಮೇಹ, ಅಧಿಕ ರಕ್ತ ದೊತ್ತಡ, ಹೃದಯ, ಪಿತ್ತಜನಕಾಂಗ ಮತ್ತು ಉಸಿರಾಟದ ಸಮಸ್ಯೆಗಳಂತಹ ಅನೇಕ ಕಾಯಿಲೆಗಳಿಗೆ ಇದು ಮೂಲಕಾರಣಗಳಲ್ಲಿ ಒಂದಾಗಿದೆ, ಆದುದರಿಂದ ಈ ಸಮಸ್ಯೆ ಯನ್ನು ಸಮಯೋಚಿತವಾಗಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಅತ್ಯವಶ್ಯಕ ವಾಗಿದೆ. ಬಾರಿಯಾಟ್ರಿಕ್ ಸರ್ಜರಿಯು ಮಧುಮೇಹ, ಅಧಿಕ ರಕ್ತದೊತ್ತಡ, ಸ್ಲೀಪ್ ಅಪ್ನಿಯಾ, ಪಿಸಿಒಡಿ ಮುಂತಾದ ಸ್ಥೂಲ ಕಾಯತೆಗೆ ಸಂಬಂಧಿಸಿದ ತೊಂದರೆ ಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದರು. ಈ ಚಿಕಿತ್ಸಾಲಯವನ್ನು ಪ್ರಾರಂಭಿಸುವ ಮೂಲಕ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮೈಸೂರು ವಲಯದಲ್ಲಿ ಸಮಗ್ರ ಬ್ಯಾರಿಯಾಟ್ರಿಕ್ ಚಿಕಿತ್ಸಾಲಯವನ್ನು ಹೊಂದಿರುವ ಪ್ರಥಮ ಹಾಗೂ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Translate »