ಅಂಬರೀಶ್ ನಿಧನ: ಮಂಡ್ಯ ಬಂದ್
ಮಂಡ್ಯ

ಅಂಬರೀಶ್ ನಿಧನ: ಮಂಡ್ಯ ಬಂದ್

November 26, 2018

ಮಂಡ್ಯ: ಅಂಬರೀಶ್ ಸಾವಿನ ಸುದ್ದಿ ಮಾಧ್ಯಮ ಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಶೋಕಸಾಗರದಲ್ಲಿ ಮುಳುಗಿದ ಮಂಡ್ಯ ಜನತೆ ಮೂಕಸ್ತಬ್ದರಾದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಅಂಬರೀಶ್ ಪಾರ್ಥಿವ ಶರೀರವನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಕಡೆ ತೆರಳಿದರು. ಪರಿಣಾಮ ಮಂಡ್ಯದಲ್ಲಿ ಅಘೋಷಿತ ಬಂದ್ ಆಗಿತ್ತು.

ಪ್ರತಿಭಟನೆ: ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡುವು ದಾಗಿ ಸರ್ಕಾರ ಕೈಗೊಂಡ ನಿರ್ಧಾರದ ವಿರುದ್ಧ ಭಾನುವಾರ ಬೆಳಿಗ್ಗೆ ಸಿಡಿದೆದ್ದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅಂಬರೀಶ್ ಅಭಿಮಾನಿಗಳು ಮೈಸೂರು-ಬೆಂಗ ಳೂರು ಹೆದ್ದಾರಿಗಿಳಿದು ಪ್ರತಿಭಟಿಸಿ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ತರುವಂತೆ ಒತ್ತಾಯಿಸಿದರು.

ಜನರ ಪ್ರತಿಭಟನೆಯ ಬಿಸಿಗೆ ಬಗ್ಗಿದ ಸರ್ಕಾರ ಮಂಡ್ಯ ನಗರದ ಸರ್.ಎಂ.ವಿ.ಕ್ರೀಡಾಂಗಣಕ್ಕೆ ಅಂಬರೀಶ್ ಪಾರ್ಥಿವ ಶರೀರವನ್ನು ತರಲು ನಿರ್ಧರಿಸಿದರು. ಮಿಲಿಟರಿ ಹೆಲಿಕಾಪ್ಟರ್ ವೈಮಾನಿಕ ಸಮೀಕ್ಷೆ ಹಾಗೂ ಲ್ಯಾಂಡಿಂಗ್ ತಪಾಸಣೆ ನಡೆಸಿ ಬೆಂಗಳೂರಿಗೆ ತೆರಳಿ ಸಂಜೆ 5.30ರ ವೇಳೆಗೆ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಯಿತು.

ಅಂಬಿ ಹುಟ್ಟೂರಿನಲ್ಲಿ ಮಡುಗಟ್ಟಿದ ಶೋಕ
ಭಾರತೀನಗರ:  ಗ್ರಾಮದ ಸುಪುತ್ರ ಅಂಬರೀಶ್ ಅಗಲಿಕೆ ಯಿಂದ ದೊಡ್ಡರಸಿನಕೆರೆ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ನೀರವ ಮೌನ ಆವರಿಸಿದೆ.

ಗ್ರಾಮದ ಕಾಳಿಕಾಂಬ ಹೆಬ್ಬಾಗಿಲು ಹಾಗೂ ಅಂಬಿ ವೃತ್ತದಲ್ಲಿ ಅಂಬರೀಶ್ ಭಾವ ಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು, ಅಂಬರೀಶ್ ಅವರು 13 ವರ್ಷಗಳ ಹಿಂದೆ ಗ್ರಾಮದಲ್ಲಿ ತಮ್ಮ ಪೂರ್ವಿಕರು ನಿರ್ಮಿಸಿದ್ದ ಮನೆ ಕೆಡವಿ ತಮ್ಮ ತಂದೆ ಎಂ.ಹುಚ್ಚೇ ಗೌಡ ಹಾಗೂ ತಾಯಿ ಟಿ.ಸಿ.ಪದ್ಮಮ್ಮ ಅವರ ಸ್ಮರಣಾರ್ಥ ಹೊಸದಾಗಿ ಮನೆ ನಿರ್ಮಿಸಿ ದ್ದರು. ಅಲ್ಲಿಂದ ಇಲ್ಲಿಯವರೆಗೆ ಗ್ರಾಮಕ್ಕೆ ಬಂದು ಹೋಗುತ್ತಿದ್ದರು.

ಅಲ್ಲದೇ ಗ್ರಾಮಕ್ಕೆ ಹಾಗೂ ಜಿಲ್ಲೆಗೆ ಅಂಬ ರೀಶ್ ಅವರು ಸಂಸದರಾಗಿ ಹಾಗೂ ಸಚಿವ ರಾಗಿ ನೀಡಿದ ಕೊಡುಗೆ ಅಪಾರ. ಗ್ರಾಮದಲ್ಲಿ ಅಂಬರೀಶ್ ಅವರ ಒಡನಾಟ ನೆನೆದ ಗ್ರಾಮಸ್ಥರು, ಗ್ರಾಮಕ್ಕೆ ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡಗಳನ್ನು ಕಟ್ಟಿಸಿಕೊಡುವಲ್ಲಿ ಅವರ ಶ್ರಮ ನಿಜಕ್ಕೂ ಸ್ಮರಣೀಯ ಎಂದು ಗ್ರಾಮಸ್ಥರು ಇಂದಿಗೂ ಸ್ಮರಿಸುತ್ತಾರೆ.

Translate »