ಅಂಬರೀಶ್ ಹೆಸರೊಂದೇ ಅವರ ಬಂಡವಾಳ
ಮೈಸೂರು

ಅಂಬರೀಶ್ ಹೆಸರೊಂದೇ ಅವರ ಬಂಡವಾಳ

March 25, 2019

ಮೈಸೂರು: ತಾವು ಎಂದಿಗೂ ಅಂಬರೀಶ್ ಹೆಸರು ದುರುಪಯೋಗ ಮಾಡಿಕೊಂಡಿಲ್ಲ. ಅಂಬರೀಶ್ ಹೆಸರನ್ನು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಿರುವವರು ಅವರು. ಅವ ರಿಗೆ ಅಂಬರೀಶ್ ಹೆಸರೊಂದೇ ಅವರ ಬಂಡವಾಳ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಪ್ರತಿಸ್ಪರ್ಧಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಹೆಸರೇ ಳದೇ ಆರೋಪಿಸಿದರು.

ಮಂಡ್ಯ ಮೈತ್ರಿ ಅಭ್ಯರ್ಥಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿ ಕೆಗೂ ಮುನ್ನ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಬಿಜೆಪಿ ಬೆಂಬಲದಿಂದ ನಮಗೆ ಇನ್ನಷ್ಟು ಅನುಕೂಲ ಆಗಿದೆ. ನಮ್ಮ ಅಭ್ಯರ್ಥಿ ಗೆಲುವಿನಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು.

ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಸಮನ್ವಯದ ಕೊರತೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳನ್ನು ಬಿಟ್ಟರೆ ನಮಗೆ ಎಲ್ಲಿಯೂ ಸಮಸ್ಯೆ ಇಲ್ಲ ಎಂದು ಸ್ಪಷ್ಪಪಡಿಸಿದರು.

ಒಟ್ಟಿಗೆ ಪ್ರಚಾರಕ್ಕೆ ಹೋಗುತ್ತೇವೆ: ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರಕ್ಕೆ ಹೋಗುತ್ತೇನೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇರುವುದರಿಂದ ಒಟ್ಟಾಗಿ ಪ್ರಚಾರಕ್ಕೆ ಹೋಗಲಿದ್ದೇನೆ. ಈಗಾಗಲೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಮತ್ತು ತಾವು ಸೇರಿದಂತೆ ಎರಡೂ ಪಕ್ಷದ ಪ್ರಮುಖರು ಚರ್ಚೆ ಮಾಡಿದ್ದೇವೆ. ಒಟ್ಟಿಗೆ ಪ್ರಚಾರಕ್ಕೆ ಹೋಗಲಿದ್ದೇವೆ ಎಂದರು.

ದೇವೇಗೌಡರ ಕುಟುಂಬ ಸರ್ವನಾಶಕ್ಕೆ ಯತ್ನ: ಕಳೆದ 50 ವರ್ಷಗಳಿಂದ ಹೆಚ್.ಡಿ.ದೇವೇಗೌಡ ಕುಟುಂಬದ ಸರ್ವ ನಾಶಕ್ಕೆ ನಿರಂತರ ಪ್ರಯತ್ನ ನಡೆದಿದೆ. ಇಂದಿಗೂ ಅದು ನಡೆಯುತ್ತಲೇ ಇದೆ. ಆದರೆ ನಮ್ಮ ಕುಟುಂಬ ಇಂತಹದ್ದಕ್ಕೆ ಭಯಪಡುವುದಿಲ್ಲ ಎಂದು ಹೇಳಿದರು.

ನನಗೆ ಗೆಲ್ಲುವ ವಿಶ್ವಾಸವಿದೆ: ನಿಖಿಲ್
ಮೈಸೂರು: ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ನನಗೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಇಂದಿಲ್ಲಿ ಆತ್ಮವಿಶ್ವಾಸದಿಂದ ನುಡಿದರು.

ಚಾಮುಂಡಿಬೆಟ್ಟದಲ್ಲಿ ಹಸನ್ಮುಖಿ ಯಾಗಿಯೇ ಕಂಡು ಬಂದ ನಿಖಿಲ್ ಕುಮಾರ ಸ್ವಾಮಿ, ಮಾಧ್ಯಮದವರ ಪ್ರಶ್ನೆಗೆ ನಗು ನಗುತ್ತಲೇ ಪ್ರತಿಕ್ರಿಯಿಸಿದರು. ಈಗಾ ಗಲೇ ಕ್ಷೇತ್ರದ ಪ್ರತಿ ಹಳ್ಳಿಯನ್ನೂ ಸುತ್ತಿ ದ್ದೇನೆ. ಎಲ್ಲೆಡೆ ಗ್ರಾಮಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನನಗೆ ಗೆಲ್ಲುವ ವಿಶ್ವಾಸವಿದೆ. ಯಾವುದೇ ರಿಸ್ಕ್ ತೆಗೆದುಕೊಂಡಿಲ್ಲ. ಪಕ್ಷದ ನಾಯಕರು ನನ್ನ ಸಾಮಥ್ರ್ಯವನ್ನು ನೋಡಿಯೇ ನನಗೆ ಟಿಕೆಟ್ ನೀಡಿದ್ದಾರೆ ಎಂದರು.
ಎದುರಾಳಿ ಅಭ್ಯರ್ಥಿ ಸುಮಲತಾ ಅಂಬ ರೀಶ್ ಪರ ಇಡೀ ಸಿನಿಮಾ ತಂಡವೇ ಬೆಂಬಲಕ್ಕೆ ನಿಂತಿದೆಯಲ್ಲ ಎಂಬ ಪ್ರಶ್ನೆಗೆ ಅದು ಅವರ ವೈಯಕ್ತಿಕ ವಿಚಾರ ಎಂದರು.

Translate »