ಅಂಬೇಡ್ಕರ್ ಪುತ್ಥಳಿ ಬಳಿ ಅಂತಧರ್ಮೀಯ ವಿವಾಹ
ಮಂಡ್ಯ

ಅಂಬೇಡ್ಕರ್ ಪುತ್ಥಳಿ ಬಳಿ ಅಂತಧರ್ಮೀಯ ವಿವಾಹ

January 3, 2019

ಮಂಡ್ಯ, ಜ.2- ನಗರದ ಜಿಲ್ಲಾಧಿಕಾರಿ ಕಚೇರಿಯ ಕಾವೇರಿವನದಲ್ಲಿರುವ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಎದುರು ಬುಧವಾರ ಅಂತರ್‍ಧರ್ಮೀಯ ಪ್ರೇಮಿಗಳ ವಿವಾಹ ನಡೆಯಿತು.

ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಹಿಂದೂ ಧರ್ಮದ ಆದಿಕರ್ನಾಟಕ ಸಮು ದಾಯದ ಅನುಪ್ರಿಯಾ(19) ಮತ್ತು ಮುಸ್ಲಿಂ ಧರ್ಮದ ಸಲ್ಮಾನ್ ಅವರು ಪ್ರಗತಿಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಜೋಡಿ ಐದಾರು ವರ್ಷದಿಂದ ಪ್ರೀತಿಸುತ್ತಿದ್ದರು. ಹೀಗಾಗಿ ಎರಡೂ ಕುಟುಂಬಗಳ ಒಪ್ಪಿಗೆಯಿಂದ ಬುಧವಾರ ಮದುವೆ ನಡೆದಿದೆ ಎನ್ನಲಾಗಿದೆ. ವಿವಾಹವು ಬುದ್ದಿಸ್ಟ್‍ಸ್ ಆಫ್ ಇಂಡಿಯಾ ನೇತೃತ್ವದಲ್ಲಿ ನಡೆಯಿತು. ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಲಾಗಿದೆ. ಮದುವೆಯಾದ ಯುವತಿ ಅನುಪ್ರಿಯಾ ದ್ವಿತೀಯ ಪಿಯುಸಿ ಓದಿದ್ದು, ಯುವಕ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

Translate »