ಹೆಣ್ಣು ಮಕ್ಕಳ ರಕ್ಷಣೆ ಜಾಗೃತಿ ಜಾಥಾ  ಭ್ರೂಣ ಹತ್ಯೆ ತಡೆಗೆ ಹೋರಾಟ ಅಗತ್ಯ: ಡಿಎಚ್‍ಓ
ಮಂಡ್ಯ

ಹೆಣ್ಣು ಮಕ್ಕಳ ರಕ್ಷಣೆ ಜಾಗೃತಿ ಜಾಥಾ ಭ್ರೂಣ ಹತ್ಯೆ ತಡೆಗೆ ಹೋರಾಟ ಅಗತ್ಯ: ಡಿಎಚ್‍ಓ

January 3, 2019

ಮಂಡ್ಯ, ಜ.2- ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ನಡೆಸಲಾಯಿತು.

ನಗರದ ಡಿಎಚ್‍ಓ ಕಚೇರಿ ಆವರಣ ದಲ್ಲಿ ಡಿಎಚ್‍ಓ ಡಾ.ಎಚ್.ಪಿ.ಮಂಜೇ ಗೌಡ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಹೆಣ್ಣು ಮಕ್ಕಳ ರಕ್ಷಣೆಗಾಗಿ ದೇಶಾದ್ಯಂತ ಇಂದು ವಾಕಥಾನ್ ಮೂಲಕ ಅರಿವು ಮೂಡಿ ಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಂಡು, ಹೆಣ್ಣು ಮಕ್ಕಳ ಅನುಪಾತದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಗಂಡು, ಹೆಣ್ಣಿನ ಅನುಪಾತದಲ್ಲಿ ಮಂಡ್ಯ ಜಿಲ್ಲೆಯ ಕೊನೆಯ ಮೂರನೇ ಸ್ಥಾನ ದಲ್ಲಿದೆ. ಹೆಣ್ಣು ಭ್ರೂಣ ಹತ್ಯೆ ಹೋಗ ಲಾಡಿಸಲು ಹೋರಾಟ ಮಾಡಬೇಕಿದೆ. ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಮೂಲಕ ಪರಿಣಾಮಕಾರಿಯಾಗಿ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.

ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ.ಬಿ.ಎನ್.ಪ್ರಭಾವತಿ ಮಾತನಾಡಿ, ಗಂಡು, ಹೆಣ್ಣು ಇಬ್ಬರೂ ಸಮಾಜದಲ್ಲಿ ಸಮಾನರು. ಇಬ್ಬರಿಗೂ ಸಮಾಜದಲ್ಲಿ ಸಮಾನ ಸ್ಥಾನಮಾನ ನೀಡ ಬೇಕು ಎಂದರು. ತಾಯಿಯ ಗರ್ಭದಲ್ಲಿ ರುವ ಸಂದರ್ಭದಿಂದಲೂ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿದೆ. ಹುಟ್ಟಿನಿಂದ ಸಾಯುವವರೆಗೂ ಶೋಷಣೆ ತಪ್ಪಿದ್ದಲ್ಲ. ಇದನ್ನು ಹೋಗಲಾಡಿಸುವ ಕೆಲಸವಾಗ ಬೇಕು ಎಂದು ಹೇಳಿದರು.

ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಬಿ.ಎ.ಲಕ್ಷ್ಮಿ ಮಾತನಾಡಿ, ಭಾರತೀಯ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಸೂಚನೆ ಯಂತೆ ಜಿಲ್ಲೆಯಲ್ಲಿ ಜಾಥಾ ಹಮ್ಮಿಕೊಳ್ಳ ಲಾಗಿದೆ. ದೇಶಾದ್ಯಂತ ಒಂದೇ ದಿನ, ಒಂದೇ ಸಮಯದಲ್ಲಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಮರಿಗೌಡ, ಡಾ.ವಿ.ಎಲ್. ನಂದೀಶ್, ಡಾ.ಎಚ್.ಸಿ.ಸವಿತಾ, ಡಾ.ಬಿ.ಎಸ್. ಕಕ್ಕಿಲಾಯ, ಡಾ.ನಾಗರಾಜು, ಡಾ.ವಸು ಮತಿರಾವ್ ಇತರರು ಇದ್ದರು.

ಜಾಥಾದಲ್ಲಿ ಮಿಮ್ಸ್ ವಿದ್ಯಾರ್ಥಿಗಳು ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಗಳು ಸೇರಿದಂತೆ ಐದು ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಜಾಥಾ ಡಿಎಚ್‍ಓ ಕಚೇರಿಯಿಂದ ಹೊರಟು, ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಾರ್ವಜನಿಕ ರಿಗೆ ಅರಿವು ಮೂಡಿಸಲಾಯಿತು.

Translate »