ಮೈಸೂರಿಂದ ಹೈದರಾಬಾದ್‍ಗೆ ಮತ್ತೊಂದು ವಿಮಾನ ಹಾರಾಟ
ಮೈಸೂರು

ಮೈಸೂರಿಂದ ಹೈದರಾಬಾದ್‍ಗೆ ಮತ್ತೊಂದು ವಿಮಾನ ಹಾರಾಟ

October 29, 2019

ಮೈಸೂರು, ಅ. 28(ಆರ್‍ಕೆ)- ಮೈಸೂರು-ಹೈದರಾಬಾದ್ ನಡುವೆ ನಿತ್ಯ ಮೂರನೇ ವಿಮಾನ ಭಾನುವಾರದಿಂದ ಸೇವೆ ಆರಂಭಿಸಿದೆ. ಇಂಡಿಗೋ ಏರ್‍ಲೈನ್ಸ್ ಸಂಸ್ಥೆಯು ಮೈಸೂರಿನಿಂದ ಹೈದರಾಬಾದ್‍ಗೆ ನಿತ್ಯ ನೇರ ವಿಮಾನ ಹಾರಾಟ ಸೇವೆ ಆರಂಭಿಸಿದ್ದು, ಭಾನುವಾರ ಸಂಜೆ ಸಂಸದ ಪ್ರತಾಪ್ ಸಿಂಹ ಅವರು ಹಸಿರು ನಿಶಾನೆ ತೋರುವ ಮೂಲಕ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು.

ಈಗಾಗಲೇ ಚೆನ್ನೈ ಮಾರ್ಗವಾಗಿ ಒಂದು ಹಾಗೂ ನೇರವಾಗಿ ಮತ್ತೊಂದು ಮೈಸೂರು-ಹೈದರಾಬಾದ್ ನಡುವೆ ಎರಡು ವಿಮಾನಗಳು ಹಾರಾಡುತ್ತಿದ್ದು, ಅವುಗಳ ಜೊತೆಗೆ ಇಂಡಿಗೋ ಮೂರನೇ ವಿಮಾನ ಸೇರ್ಪಡೆಯಾಗಿದೆ.

72 ಆಸನ ಸಾಮಥ್ರ್ಯದ ಎಟಿಆರ್‍ಕ್ರಾಫ್ಟ್ ಪ್ರತೀ ದಿನ ಸಂಜೆ 6.40 ಗಂಟೆಗೆ ಆಗಮಿಸಿ, ರಾತ್ರಿ 7.40ಕ್ಕೆ ನಿರ್ಗಮಿಸಲಿದ್ದು, ರಾತ್ರಿ 9.20 ಗಂಟೆಗೆ ಹೈದರಾಬಾದ್ ತಲುಪಲಿದೆ. ಪ್ರಯಾಣ ದರ ಒಬ್ಬರಿಗೆ 2,650 ರೂ. ನಿಗದಿಯಾಗಿದೆ. ಮಂಗಳವಾರ ಮಾತ್ರ ಮಧ್ಯಾಹ್ನ 1 ಗಂಟೆಗೆ ಆಗಮಿಸುವ ಇಂಡಿಗೋ ಏರ್‍ಲೈನ್ಸ್ ವಿಮಾನವು ಮಧ್ಯಾಹ್ನ 1.30 ಗಂಟೆಗೆ ಇಲ್ಲಿಂದ ಹೊರಡಲಿದೆ.

ಭಾನುವಾರ (ಅ. 27) ಸಂಜೆ ಮೈಸೂ ರಿಗೆ ಈ ವಿಮಾನದಲ್ಲಿ 21 ಮಂದಿ ಆಗಮಿ ಸಿದ್ದು, ಮೈಸೂರಿಂದ 51 ಪ್ರಯಾಣಿಕರು ಹೈದರಾಬಾದ್‍ಗೆ ತೆರಳಿದರು ಎಂದು ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದ್ದಾರೆ.

ಮೊದಲ ಟ್ರಿಪ್‍ನಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದರು. ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ಅಲಯನ್ಸ್ ಏರ್ ಸಂಸ್ಥೆಯ ಎರಡು ವಿಮಾನಗಳು ಈಗಾ ಗಲೇ ಮೈಸೂರು-ಹೈದರಾಬಾದ್ ನಡುವೆ ಹಾರಾಟ ನಡೆಸುತ್ತಿದ್ದು, ಒಂದು ನೇರವಾಗಿ ಹಾಗೂ ಮತ್ತೊಂದು ಚೆನ್ನೈ ಮಾರ್ಗವಾಗಿ ಹೈದರಾಬಾದ್ ತಲುಪಲಿದೆ. ಮಾಜಿ ಸಚಿವ ಜಿ.ಟಿ. ದೇವೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ಟ್ರಾವೆಲ್ ಅಸೋಸಿ ಯೇಷನ್ ಅಧ್ಯಕ್ಷ ಸಿ.ಎ. ಜಯಕುಮಾರ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್

ಅಧ್ಯಕ್ಷ ಎ.ಎಸ್. ಸತೀಶ್, ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜು ನಾಥ್, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರು, ಇಂಡಿಗೋ ಏರ್‍ಲೈನ್ಸ್ ದಕ್ಷಿಣ ಕರ್ನಾಟಕ ವಲಯದ ಆಪರೇ ಷನ್ ವ್ಯವಸ್ಥಾಪಕ ವರುಣ್ ಸೇರಿದಂತೆ ಹಲವರು ವಿಮಾನ ಹಾರಾಟದ ವೇಳೆ ಉಪಸ್ಥಿತರಿದ್ದರು. ಸಂಸದ ಪ್ರತಾಪ್ ಸಿಂಹ ಅವರು ಆಸಕ್ತಿ ವಹಿಸಿ, ಮೈಸೂರಿಂದ ಹಲವು ವಿಮಾನಗಳ ಸೇವೆಗೆ ನಾಂದಿಯಾಡಿದ್ದ ರಿಂದ ಈಗ ಮೈಸೂರು ವಿಮಾನ ನಿಲ್ದಾಣ ದಿನವಿಡೀ ಚಟುವಟಿಕೆ ತಾಣವಾಗಿದೆ. ಈಗಾಗಲೇ ಮೈಸೂರು ವಿಮಾನ ನಿಲ್ದಾಣ ದಿಂದ ನಿತ್ಯ ಬೆಳಿಗ್ಗೆಯಿಂದ ರಾತ್ರಿವರೆಗೂ ಚೆನ್ನೈ, ಹೈದರಾಬಾದ್, ಕೊಚ್ಚಿನ್, ಬೆಂಗ ಳೂರು, ಗೋವಾಗಳಿಗೆ ವಿಮಾನ ಹಾರಾಟ ನಡೆಸುತ್ತಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇ ಶಕ ಮಂಜುನಾಥ್ ‘ಮೈಸೂರು ಮಿತ್ರ’ ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

Translate »