ಬೆಂಗಳೂರು, ಅ.28(ಕೆಎಂಶಿ)- ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ನ್ಯಾಯಾಂಗ ಬಂಧನ ದಿಂದ ಬಿಡುಗಡೆ ನಂತರ ದೆಹಲಿಯಿಂದ ಬೆಂಗಳೂ ರಿಗೆ ಬಂದಾಗ ಅವರ ಸ್ವಾಗತ ಮೆರವಣಿಗೆಯಲ್ಲಿ ಸ್ವತಃ ಅವರೇ ಜೆಡಿಎಸ್ ಬಾವುಟ ಹಿಡಿದಿ ರುವುದಕ್ಕೆ ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಸಿದ್ದರಾಮಯ್ಯನವರ ಈ ಗರಂಗೆ ಡಿಕೆಶಿ ಬೆಂಬಲಿಗರು ತಿರುಗೇಟು ನೀಡಿದ್ದು, ನಮ್ಮ ನಾಯಕನಿಗೆ ದೊರೆತ ಅದ್ಧೂರಿ ಸ್ವಾಗತ ಹಾಗೂ ಬೆಂಬಲಕ್ಕೆ ಅಸೂಯೆಪಟ್ಟಿದ್ದಾರೆ ಎಂದು ಛೇಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ರುವ ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ವಿಶೇಷ ಕಾಳಜಿ ಹಾಗೂ ಪ್ರೀತಿ ಇದೆ. ನನ್ನ ಬಗ್ಗೆ ಅವರು ಪ್ರೀತಿಯಿಂದ ಮಾತ ನಾಡಿರಬಹುದು.
ಅದರಲ್ಲಿ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ. ಸಿದ್ದ ರಾಮಯ್ಯ ತಮ್ಮ ಕಾವೇರಿ ನಿವಾಸ ದಲ್ಲಿ ಮೈಸೂರು ಜಿಲ್ಲೆ ಹುಣಸೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಸ್ವತಃ ಶಿವ ಕುಮಾರ್ ಜೆಡಿಎಸ್ ಬಾವುಟ ಹಿಡಿದು ಕೊಂಡಿದ್ದಕ್ಕೆ ಗರಂ ಆಗಿದ್ದಾರೆ.
ಚರ್ಚೆ ಸಂದರ್ಭದಲ್ಲಿ ಒಕ್ಕಲಿಗರು ಈಗ ಕುಮಾರಸ್ವಾಮಿ ಹಿಂದೆ ಇಲ್ಲ. ಲಿಂಗಾಯಿತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನ ವರ ಪರ ಇಲ್ಲ. ಇಂತಹ ಸಂದರ್ಭದಲ್ಲಿ ನಾವು ಮತ ಗಳಿಸಲು ಸಂಘಟನೆ ಮಾಡ ಬೇಕು ಎಂದಿ ದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಪಿರಿಯಾ ಪಟ್ಟಣ ಮಾಜಿ ಶಾಸಕ ಕೆ. ವೆಂಕಟೇಶ್ ನಮ್ಮವರೇ ಇದನ್ನು ಎನ್‍ಕ್ಯಾಶ್ ಮಾಡಿ ಕೊಳ್ಳುತ್ತಾ ಇಲ್ವಲ್ಲ ನೋಡಿ, ಆ ಶಿವ ಕುಮಾರ್ ಮೆರವÀಣಿಗೆಯಲ್ಲಿ ಜೆಡಿಎಸ್ ಬಾವುಟ ಹಿಡಿದುಕೊಳ್ಳುತ್ತಾರೆ ಎಂದಾಗ ತಕ್ಷಣವೇ ಅದಕ್ಕೆ ಧ್ವನಿಗೂಡಿಸಿದ ಸಿದ್ದ ರಾಮಯ್ಯ ಅದು ನಿಜ. ರ್ಯಾಲಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಬಾವುಟ ಹಿಡಿದುಕೊಂಡರೆ ಹೇಗೆ ಎಂದು ಸಿದ್ದರಾಮಯ್ಯ ತಮ್ಮ ಅಸಮಾಧಾನ ಹೊರ ಹಾಕಿದ್ದಲ್ಲದೆ, ನಾನು ನಿನ್ನೆ ತಾನೇ ಗದಗದಲ್ಲಿ ಇನ್ನು ಜೆಡಿಎಸ್ ಸಹವಾಸ ಬೇಡ ಎಂದಿದ್ದೇನೆ.
ನೋಡಿದರೆ, ಶಿವಕುಮಾರ್ ಇಂತಹ ಕೆಲಸ ಮಾಡಿದ್ದಾನೆ ಎಂದಿರುವ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಲಯ ದಲ್ಲಿ ದೊಡ್ಡ ಪ್ರಮಾಣದಲ್ಲಿ ವಾದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ವಿಡಿಯೋ ವೈರಲ್ ಆಗಿರುವುದಕ್ಕೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿ, ನನ್ನ ಮನೆಯ ಕೊಠಡಿಯಲ್ಲಿ ನಡೆದ ಸಂಭಾಷಣೆ ಹೊರ ಬಂದಿದ್ದಕ್ಕೆ ಕಿಡಿಕಾರಿ ರುವುದಲ್ಲದೆ, ಪರೋಕ್ಷವಾಗಿ ಇದು ಬಿಜೆಪಿಯವರ ಕೈವಾಡ ಎಂದಿದ್ದಾರೆ.
ನನ್ನ ಮನೆಯಲ್ಲಿ ನಡೆದ ಖಾಸಗಿ ಮಾತುಕತೆಯ ವಿಡಿಯೋದ ತಪ್ಪು ವ್ಯಾಖ್ಯಾನ ವನ್ನು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಾ ವಿಕೃತಾನಂದ ಪಡುತ್ತಿದ್ದಾರೆ. ಇದು ನನಗೆ ಹೊಸದಲ್ಲ. ಈ ಸುಳ್ಳಿನ ಕತ್ತಲನ್ನು ಸತ್ಯದ ಬೆಳಕು ಅಳಿಸಿ ಹಾಕುತ್ತೆ ಎಂದಿದ್ದಾರೆ.
ಅಷ್ಟೇ ಅಲ್ಲ ಟ್ವೀಟ್ ಮೂಲಕ ಪ್ರತಿಕ್ರಿಯಿ ಸಿರುವ ಅವರು, ರಾಜಕೀಯ ಪಕ್ಷಗಳು ನೈತಿಕವಾಗಿ ದಿವಾಳಿಯಾದಾಗ ಇಂತಹ ಅಪಸವ್ಯಗಳು ಹುಟ್ಟಿಕೊಳ್ಳುತ್ತವೆ. ವೈಯಕ್ತಿಕ ದಾಳಿಗಳು ನನ್ನ ಸಾಮಾಜಿಕ ಬದ್ಧತೆ ಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಜನರಿಗಾಗಿ ಹೋರಾಡುವ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ. ಇದಕ್ಕಾಗಿ ನನ್ನ ರಾಜ ಕೀಯ ವಿರೋಧಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ಅಷ್ಟೇ ಅಲ್ಲ ಅದರಲ್ಲಿ ನಾನು ಏನು ಹೇಳಿದ್ದೇನೆ. ಜಾತಿ ವಿಚಾರದಲ್ಲಿ ಅದು ಸತ್ಯ. ರಾಜ್ಯದ ಮತದಾರರು ಜಾತಿ ಬಿಟ್ಟು ಯೋಚನೆ ಮಾಡುತ್ತಿದ್ದಾರೆ. ಲಿಂಗಾಯತರು ಯಡಿಯೂರಪ್ಪನವ ರಿಂದ, ಒಕ್ಕಲಿಗರು ಜೆಡಿಎಸ್ ಪಕ್ಷದಿಂದ ದೂರವಾಗುತ್ತಿದ್ದಾರೆ ಎಂಬ ಗೆಳೆಯರ ಮಾತಿಗೆ ನಾನು ಸಹಮತ ಸೂಚಿಸಿದ್ದು ನಿಜ. ಜಾತ್ಯಾ ತೀತರಾಗುತ್ತಿದ್ದಾರೆ ಎಂದು ಹೇಳಿದ್ದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಮಾತ್ರ ಸೆಕ್ಯುಲರ್, ನಾವು ಕೋಮುವಾದಿಗಳು
ಹುಬ್ಬಳ್ಳಿ, ಅ.28-“ಜನರ ಕಷ್ಟಗಳಿಗೆ ಯಾರು ಸ್ಪಂದಿಸುತ್ತಾರೋ ಅವರಿಗೆ ನನ್ನ ಬೆಂಬಲ ಇರುತ್ತೆ. ಅದು ಬಿಜೆಪಿಯೋ, ಕಾಂಗ್ರೆಸ್ಸೋ ಗೊತ್ತಿಲ್ಲ. ಯಾರು ಜನರ ಕಷ್ಟಗಳಿಗೆ ಬೆಂಬಲ ನೀಡುತ್ತಾರೋ ಅವ ರಿಗೆ ನಮ್ಮ ಬೆಂಬಲ” ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, “ಸಿದ್ದರಾಮಯ್ಯ ನವರು ಸರ್ಕಾರ ಬೀಳಿಸುವ ಕೆಲಸ ಮಾಡೋದಾದ್ರೆ ಮಾಡಲಿ, ಸಿದ್ದ ರಾಮಯ್ಯ ಪಕ್ಕಾ ಸೆಕ್ಯುಲರ್ ಬಿಡಿ, ನಾವು ಕೋಮುವಾದಿ ಗಳು” ಎಂದು ಸಿದ್ದರಾಮಯ್ಯ ವಿರುದ್ಧ ಎಚ್ ಡಿಕೆ ಕಿಡಿಕಾರಿದರು. ಅಲ್ಲದೇ ಡಿಕೆಶಿ ಜೆಡಿಎಸ್ ಬಾವುಟ ಹಿಡಿದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, “ಮಾನವೀಯತೆ ದೃಷ್ಟಿಯಿಂದ ನಮ್ಮ ಕಾರ್ಯಕರ್ತರು ಡಿಕೆಶಿಗೆ ಬೆಂಬಲ ನೀಡಿರಬಹುದು. ಅದಕ್ಕೆ ಅವರು ಬಾವುಟ ಹಿಡಿದಿರಬಹುದು. ಅದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ. ಅದನ್ನು ಡಿಕೆಶಿಯವರನ್ನೇ ಕೇಳಬೇಕು” ಎಂದರು. “ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ, ಸರ್ಕಾರಕ್ಕೆ ಸ್ವಲ್ಪ ಸಮಯ ಕೊಡಬೇಕಾಗಿದೆ. ನಾನು ಸರ್ಕಾ ರದ ವಿರುದ್ಧ ಟೀಕೆ ಮಾಡಲ್ಲ. ಬದಲಾಗಿ ಸಲಹೆ ನೀಡಿರುವೆ. ಜನರ ಸಮಸ್ಯೆಗಳಿಗೆ ಎಲ್ಲ ಪಕ್ಷಗಳು ಒಂದಾಗಿ ಕೆಲಸ ಮಾಡಲಿ. ರಾಜಕಾರಣ ಬೇರೆ ಮಾಡೋಣ. ನಾನು ನೆರೆ, ಪ್ರವಾಹ ವೀಕ್ಷಣೆ ಬಗ್ಗೆ ಬೆಂಗಳೂ ರಿಗೆ ಹೋದ ನಂತರ ಸಿಎಂ ಜೊತೆ ಚರ್ಚೆಗೆ ಕಾಲಾವಕಾಶ ಕೋರುವೆ” ಎಂದರು.
“ಸಿದ್ದರಾಮಯ್ಯ ಸರ್ಕಾರ ಬೀಳುವ ಕನಸು ಕಾಣುತ್ತಿದ್ದಾರೆ. ಮಾರ್ಚ್, ಏಪ್ರಿಲ್ ಗೆ ಚುನಾವಣೆಗೆ ಹೋದ್ರೆ ಜನರ ಬಗ್ಗೆ ಯೋಚಿಸುವವರು ಯಾರು? ನಾನು ಹತಾಶನಾಗಿಲ್ಲ, ನಾನು ಬಿಜೆಪಿ ಜೊತೆ ಹೋಗುವೆ ಅಂತ ಎಲ್ಲೂ ಹೇಳಿಲ್ಲ, ನಾನು ಸರ್ಕಾರವನ್ನು ಅಭದ್ರಗೊಳಿಸಲು ಮುಂದಾ ಗಿಲ್ಲ, ಸ್ಥಿರ ಸರ್ಕಾರದ ಬಗ್ಗೆ ಯೋಚಿಸು ತ್ತಿದ್ದೇನೆ. ಜನರ ಪರವಾಗಿ ಚಿಂತನೆ ಮಾಡು ತ್ತಿದ್ದೇನೆ” ಎಂದು ಉತ್ತರಿಸಿದ್ದಾರೆ.