ಸಾಲಕ್ಕೆ ಅರ್ಜಿ ಸಲ್ಲಿಸಿದವರನ್ನು ಸತಾಯಿಸಿದ ಬ್ಯಾಂಕ್ ಅಧಿಕಾರಿಗಳುತರಾಟೆ ತೆಗೆದುಕೊಂಡ ಜಿಪಂ ಸಿಇಓ ಕೆ.ಜ್ಯೋತಿ
ಮೈಸೂರು

ಸಾಲಕ್ಕೆ ಅರ್ಜಿ ಸಲ್ಲಿಸಿದವರನ್ನು ಸತಾಯಿಸಿದ ಬ್ಯಾಂಕ್ ಅಧಿಕಾರಿಗಳುತರಾಟೆ ತೆಗೆದುಕೊಂಡ ಜಿಪಂ ಸಿಇಓ ಕೆ.ಜ್ಯೋತಿ

October 31, 2019

ಮೈಸೂರು, ಅ.30(ಪಿಎಂ)- ಸರ್ಕಾರಿ ಇಲಾಖೆ ಹಾಗೂ ಬ್ಯಾಂಕ್ ನಡುವೆ ಸಮನ್ವಯತೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜ್ಯೋತಿ, ಸಾಲಕ್ಕೆ ಅರ್ಜಿ ಸಲ್ಲಿಸಿದ್ದವರನ್ನು ಸತಾಯಿಸಿದ ಪ್ರಕರಣ ಪ್ರಸ್ತಾಪಿಸಿ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಲೀಡ್ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾವಾಗಲಿ, ನೀವಾಗಲಿ ಸೌಲಭ್ಯವನ್ನು ನಮ್ಮ ಜೇಬಿನ ಹಣದಿಂದೇನೂ ಕೊಡುವುದಿಲ್ಲ. ವೇತನ ಹೆಚ್ಚುವರಿ ಆಗದಿದ್ದರೆ, ಬಡ್ತಿ ಸಿಗದಿದ್ದರೆ ಎಷ್ಟು ಬೇಜಾರು ಮಾಡಿಕೊಳ್ಳುತ್ತೇ ವೆಯೋ ಜನಸಾಮಾನ್ಯರೂ ಹಾಗೆಯೇ ಅಲ್ಲವೇ? ಅವರನ್ನೇಕೆ ಸುಮ್ಮನೆ ಸತಾಯಿಸು ತ್ತೀರಿ? ಎಂದು ಕಿಡಿಕಾರಿದರು. ನಿಗಮದ ಯೋಜನೆಯೊಂದರ ಸಾಲ ಸೌಲಭ್ಯ ಪಡೆಯಲು ಕಟ್ಟೆಮಳಲವಾಡಿಯ ಬ್ಯಾಂಕ್ ಒಂದು ಅರ್ಜಿದಾರರನ್ನು ಬಹಳ ಸತಾಯಿಸಿದ್ದು, ಅರ್ಜಿ ದಾರರು ಕೊನೆಗೆ ತಮಗೆ ದೂರು ನೀಡಿದ ಪ್ರಕರಣವನ್ನು ಪ್ರಸ್ತಾಪಿಸಿದ ಜಿಪಂ ಸಿಇಒ, ಪಾಪ ಆ ಮನುಷ್ಯನನ್ನು ನೋಡಿದರೆ ಆರ್ಥಿಕ ಸಮಸ್ಯೆ ಇರುವುದು ಅರಿವಿಗೆ ಬಾರದೇ ಇರದು. ಅದೂ ನಿಮಗೆ ಅರ್ಥವಾಗಲಿಲ್ಲವೇ? ಎಂದು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅರ್ಹರಿದ್ದರೆ ಸೌಲಭ್ಯ ದೊರಕಿಸಿಕೊಡಿ, ಇಲ್ಲವೇ ವಾಸ್ತವದ ಬಗ್ಗೆ ತಿಳಿವಳಿಕೆ ಹೇಳಿ. ಅದು ಬಿಟ್ಟು ಆ ವ್ಯಕ್ತಿಯ ಸೊಸೆ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಅರ್ಜಿಯೇ ಬಂದಿಲ್ಲ ಎಂದು ಹೇಳಿದ್ದೇಕೆ? ತಾಲೂಕು ಕಚೇರಿಯಿಂದ ನಿಯಮ ಉಲ್ಲಂಘಿಸಿ ಅರ್ಜಿದಾರರ ಕೈಯಲ್ಲಿ ಎರಡು ಅರ್ಜಿಗಳನ್ನು ಬ್ಯಾಂಕಿಗೆ ಕಳುಹಿಸಿ, ಅದರಲ್ಲಿ ಸದರಿ ವ್ಯಕ್ತಿಯ ಅರ್ಜಿ ಕೈಬಿಟ್ಟು, ಮತ್ತೊಂದಕ್ಕೆ ಸೌಲಭ್ಯ ನೀಡಲಾಗಿದೆ. ಬಳಿಕ ಅವರು ನನ್ನ ಬಳಿ ಬಂದಿದ್ದಾರೆ. ಅಲ್ಲದೆ, `ಜಿಪಂ ಸಿಇಓಗೆ ದೂರು ನೀಡಿದ್ದೀಯಾ. ಅವರ ಬಳಿಯೇ ಸಾಲ ಪಡೆದುಕೊ’ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಅರ್ಜಿದಾರರಿಗೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರೊಂದಿಗೆ ಈ ರೀತಿಯೆಲ್ಲಾ ವರ್ತಿಸಬೇಡಿ ಎಂದೂ ಜಿಪಂ ಸಿಇಒ ತಾಕೀತು ಮಾಡಿದರು.

Translate »