ಸಾವಿನ ಅಂಚಿನಲ್ಲಿದ್ದ ರೋಗಿಯ ಜೀವ ಉಳಿಸಿದ ಅಪೋಲೋ ಆಸ್ಪತ್ರೆ ವೈದ್ಯರು
ಮೈಸೂರು

ಸಾವಿನ ಅಂಚಿನಲ್ಲಿದ್ದ ರೋಗಿಯ ಜೀವ ಉಳಿಸಿದ ಅಪೋಲೋ ಆಸ್ಪತ್ರೆ ವೈದ್ಯರು

July 13, 2019

ಮೈಸೂರು, ಜು.12(ಆರ್‍ಕೆಬಿ)- ಜೀವ ನ್ಮರಣದ ಅಂಚಿನಲ್ಲಿದ್ದ ರೋಗಿಯೊಬ್ಬನನ್ನು ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಸ್ಟೈ ಕೊಲಾಂಜಿಯೋಸ್ಕೋಪಿ ಜೊತೆ ಎಲೆಕ್ಟ್ರೋ ಹೈಡ್ರಾಲಿಕ್ ಲಿಥೋಟ್ರಿಪ್ಸಿ ಕಾರ್ಯ ವಿಧಾ ನದ ಸಾಧನ ಬಳಸಿ ರೋಗಿಯನ್ನು ಸಾವಿ ನಿಂದ ರಕ್ಷಿಸಲಾಗಿದೆ ಎಂದು ಆಸ್ಪತ್ರೆ ಮುಖ್ಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಗ್ಯಾಸ್ಟ್ರೋ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಜ್ ಕುಮಾರ್ ಪಿ.ವಾಧ್ವಾ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಕಾಮಾಲೆ ಮತ್ತು ಜ್ವರ ದಿಂದ ಆಸ್ಪತ್ರೆಗೆ ದಾಖಲಾದ ದೇವರಾಜ ಅರಸು ಎಂಬ 59 ವರ್ಷದ ವ್ಯಕ್ತಿಯ ಪಿತ್ತ ಜನಕಾಂಗದ ನಾಳದಲ್ಲಿ ಜೀವಕ್ಕೆ ಅಪಾಯ ಕಾರಿಯಗುವ ದೊಡ್ಡ ಕಲ್ಲೊಂದು ಕಂಡು ಬಂದಿತು. ಈ ಕಲ್ಲು 4 ವರ್ಷಗಳ ಹಿಂದೆಯೇ ರೂಪುಗೊಂಡಿತ್ತು. ಆರಂಭದಲ್ಲಿ ಅವರಿಗೆ ಲಿವರ್ ಸಿರೋಸಿಸ್ ಎಂದು ನಿರ್ಣ ಯಿಸಲಾಯಿತು ಎಂದರು.

ಬೇರೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳ ಗಾಗಿದ್ದಾಗ ಅತಿಯಾದ ರಕ್ತಸ್ರಾವವಾಗಿ ಅವರಿಗೆ 12 ಯೂನಿಟ್ ರಕ್ತ ನೀಡಲಾ ಯಿತು. ಶಸ್ತ್ರ ಚಿಕಿತ್ಸೆಯ ನಂತರ ಪಿತ್ತ ನಾಳ ದಿಂದ ಅವರ ಕರುಳಿಗೆ ಹರಿವು ನಿರ್ಬಂಧಿಸ ಲ್ಪಟ್ಟಿತ್ತು. ಹಲವಾರು ವರ್ಷಗಳ ಕಾಲ ಪ್ಲಾಸ್ಟಿಕ್ ಟ್ಯೂಬ್ ಹಾಗೂ ಸ್ಟಂಟ್‍ನೊಂದಿಗೆ ನಿರ್ವ ಹಣೆ ಮಾಡಲಾಯಿತು. ಒಂದು ತಿಂಗಳ ಹಿಂದಷ್ಟೆ ಪಿತ್ತರಸದ ನಾಳದಲ್ಲಿ ದೊಡ್ಡ ಕಲ್ಲಿರುವುದು ಖಚಿತವಾಯಿತು ಎಂದರು.

ಕಲ್ಲಿನ ಗಾತ್ರವು ದೊಡ್ಡದಾಗಿದ್ದರಿಂದ ಶಸ್ತ್ರ ಚಿಕಿತ್ಸೆ ನೆರವೇರಿಸಿದರೆ ಮಧ್ಯದಲ್ಲೇ ಅಧಿಕ ರಕ್ತಸ್ರಾವದಿಂದಾಗಿ ರೋಗಿಯ ಜೀವಕ್ಕೆ ಅಪಾಯವಿತ್ತು. ಅಪೊಲೋ ಬಿಜಿಎಸ್ ಆಸ್ಪತ್ರೆಯ ತಂತ್ರಜ್ಞಾನದ ಶ್ರೇಷ್ಠತೆ, ವೈದ್ಯರ ಅಪಾರ ಅನುಭವ, ಕೌಶಲ್ಯಗಳು ಹಾಗೂ ಸ್ಟೈಕೊಲಾಂಜಿಯೋಸ್ಕೋಪಿ ಜೊತೆ ಎಲೆಕ್ಟ್ರೋ ಹೈಡ್ರಾಲಿಕ್ ಲಿಥೋಟ್ರಿಪ್ಸಿ ಕಾರ್ಯ ವಿಧಾನ ಎಂಬ ಉಪಕರಣ ಬಳಸಿ ದೊಡ್ಡ ಕಲ್ಲನ್ನು ಸಣ್ಣ ತುಂಡುಗಳಾಗಿ ಸ್ಫೋಟಿಸ ಲಾಯಿತು. ಆ ಸಣ್ಣ ತುಣುಕುಗಳನ್ನು ಮಲದ ಮೂಲಕ ಹೊರಗೆ ಹಾಕುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು. ಕರ್ನಾಟಕ ದಲ್ಲಿ ಮೊಟ್ಟ ಮೊದಲ ಬಾರಿಗೆ ಕನಿಷ್ಟ ರಂಧ್ರ ಶಸ್ತ್ರಚಿಕಿತ್ಸೆ ಗ್ಯಾಸ್ಟ್ರೋ ವಿಧಾನವನ್ನು ಆಸ್ಪತ್ರೆ ನಡೆಸಿತು. ಈಗ ದೇವರಾಜ್ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ ಎಂದರು.

Translate »