ಖಾಲಿ ಇರುವ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಮೈಸೂರು

ಖಾಲಿ ಇರುವ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

October 12, 2019

ಮೈಸೂರು,ಅ.11- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲನ್ಯಾಯ ಕಾಯ್ದೆ 2015 ಹಾಗೂ ಬಾಲನ್ಯಾಯ ಮಾದರಿ ನಿಯಮ 2016 ರನ್ವಯ 3 ವರ್ಷಗಳ ಕಾಲಾವಧಿಗಾಗಿ ಮಕ್ಕಳ ಕಲ್ಯಾಣ ಸಮಿತಿಯನ್ನು ರಚಿಸಲಾಗುತ್ತಿದ್ದು, ಸಮಿತಿಯಲ್ಲಿ ಒಂದು ಸದಸ್ಯತ್ವವು ತೆರವಾಗಿದ್ದು ಸದರಿ ಸಮಿತಿಯ ಸದಸ್ಯತ್ವಕ್ಕೆ 1 ವರ್ಷದ ಅವಧಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಇಲಾಖೆಯ ವೆಬ್‍ಸೆಟ್ www.dwcdkar. gov.in ಮೂಲಕ ಅರ್ಜಿ ಪಡೆದು ಅ.22ರಂದು ಸಂಜೆ 5.30 ಗಂಟೆಯೊಳಗೆ ನೋಂದಾ ಯಿತ ಅಂಚೆ ಮೂಲಕ ಅಥವಾ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೊದಲನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ|| ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 0821-2543003 ಅಥವಾ 080-22879382/83 ಸಂಪರ್ಕಿ ಸುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »