ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಆಗ್ರಹಿಸಿ ನಾಳೆ ಕಪ್ಪು ಪಟ್ಟಿ ಪ್ರತಿಭಟನೆ
ಮೈಸೂರು

ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಆಗ್ರಹಿಸಿ ನಾಳೆ ಕಪ್ಪು ಪಟ್ಟಿ ಪ್ರತಿಭಟನೆ

October 12, 2019

ಮೈಸೂರು, ಅ.11(ಆರ್‍ಕೆಬಿ)-ಮೈಸೂರಿನ ಮಿನಿ ವಿಧಾನಸೌಧದ ಮುಂದೆ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪಿನೆಗೆ ಆಗ್ರಹಿಸಿ ಅ.13ರಂದು ಬೆಳಿಗ್ಗೆ ಮೈಸೂರು ಮಹಾನಗರಪಾಲಿಕೆ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರತಿಭಟನೆಯಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಮೂರ್ತಿ ಇನ್ನಿತರ ಸಾಹಿತಿಗಳು, ಪ್ರಗತಿಪರರು, ದಲಿತ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದರು. ಜಿಲ್ಲಾಡಳಿತದ ವತಿಯಿಂದ ನಾಳೆ (ಅ.13) ಕಲಾಮಂದಿರದಲ್ಲಿ ಏರ್ಪಡಿಸಿರುವ ಮಹರ್ಷಿ ವಾಲ್ಮೀಕಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡುವವರು ವಾಲ್ಮೀಕಿ ಅವರನ್ನು ಕಳ್ಳ, ದರೋಡಕೋರ, ಕ್ರೂರಿ ಆಗಿದ್ದು, ನಂತರ ಬದಲಾಗಿ ರಾಮಾಯಣ ಬರೆದರು ಎಂದು ಹೇಳಿದರೆ ಅಂಥವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಉಪಾಧ್ಯಕ್ಷ ಶಿವಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಚನ್ನನಾಯಕ, ಕಾರ್ಯದರ್ಶಿ ಮಲ್ಲೇಶ್‍ನಾಯಕ, ಮಂಜುನಾಥ್ ಉಪಸ್ಥಿತರಿದ್ದರು.

Translate »