ಹಲ್ಲೆ, ಕೊಲೆ ಬೆದರಿಕೆ: ನಾಲ್ವರಿಗೆ ಜೈಲು ಶಿಕ್ಷೆ
ಮೈಸೂರು

ಹಲ್ಲೆ, ಕೊಲೆ ಬೆದರಿಕೆ: ನಾಲ್ವರಿಗೆ ಜೈಲು ಶಿಕ್ಷೆ

February 1, 2019

ಮೈಸೂರು: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದ ಆರೋಪಿಗಳಿಗೆ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ನಂಜನಗೂಡು ತಾಲೂಕಿನ ದೇಬೂರಿನ ನಿವಾಸಿಗಳಾದ ನಾಗರಾಜು, ಸುರೇಶ್, ಕುಮಾರ್, ಚನ್ನನಾಯಕ ಶಿಕ್ಷೆಗೊಳಗಾದವರು. ಇವರು 2016 ಸೆ.9ರಂದು ರಾತ್ರಿ ಗಣಪತಿ ವಿಸರ್ಜನೆ ವೇಳೆ ದೇಬೂರಿನ ರಸ್ತೆಯಲ್ಲಿ ರವಿ ಎಂಬುವರ ಮೇಲೆ ಹಲ್ಲೆ ನಡೆಸಿ, ಬ್ಲೇಡಿನಿಂದ ಕುತ್ತಿಗೆ ಭಾಗವನ್ನು ಕೊಯ್ದು ಕೊಲೆ ಬೆದರಿಕೆ ಹಾಕಿದ್ದರು.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೆÇಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್.ಸುದೇಂದ್ರನಾಥ್ ಅವರು ನಾಗರಾಜು ಅವರಿಗೆ 4, ಉಳಿದ ಮೂವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ವಾಸಂತಿ ಎಂ.ಅಂಗಡಿ ವಾದಿಸಿದ್ದರು.

Translate »