ವಿಷವಿಕ್ಕಿ ಜೋಡೆತ್ತುಗಳ ಹತ್ಯೆ
ಮಂಡ್ಯ

ವಿಷವಿಕ್ಕಿ ಜೋಡೆತ್ತುಗಳ ಹತ್ಯೆ

May 31, 2018

ಮಂಡ್ಯ:  ದುಷ್ಕರ್ಮಿಗಳು ಲಕ್ಷಾಂತರ ರೂ. ಬೆಲೆಬಾಳುವ ಜೋಡಿ ಎತ್ತುಗಳಿಗೆ ವಿಷ ಉಣ ಸಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹಂಪಾಪುರದ ಬಳಿಯ ನೀಲಗಿರಿ ತೋಪಿನಲ್ಲಿ ನಡೆದಿದೆ.

ಮೃತ ಎತ್ತುಗಳು ಯಾರಿಗೆ ಸೇರಿದ್ದಾಗಿವೆ. ಎಲ್ಲಿಂದ ತಂದು ಈ ಜೋಡೆತ್ತುಗಳನ್ನು ಇಲ್ಲಿ ಕೊಲ್ಲಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಜೋಡಿ ಎತ್ತುಗಳನ್ನು ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಬಳಸುತ್ತಿದ್ದು, ಉತ್ತರ ಕರ್ನಾಟಕದ ಕಡೆಯವರು ಈ ದುಷ್ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಹಂಪಾಪುರ ಸಮೀಪದ ನೀಲಗಿರಿ ತೋಪಿನ ಗುಂಡಿಯೊಂದರಲ್ಲಿ 2 ಎತ್ತುಗಳ ಶವ ಪತ್ತೆಯಾಗಿದ್ದು, ಯಾರೋ ದುಷ್ಕರ್ಮಿಗಳು ತಂದು ಬಿಸಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.

ಮೃತ ಎತ್ತುಗಳನ್ನು ಕಂಡ ಜನತೆ ಕೆರಗೋಡು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪಶು ವೈದ್ಯಾಧಿಕಾರಿಯನ್ನು ಕರೆಸಿ ಶವಗಳ ಪರೀಕ್ಷೆ ಮಾಡಿಸಿದರು. ಎತ್ತುಗಳ ಶವಗಳ ಮೇಲೆ ಕೆಲ ಗಾಯಗಳಾಗಿದ್ದವು. ಅಲ್ಲದೇ ಮರಣೋತ್ತರ ಪರೀಕ್ಷೆಯಲ್ಲಿ ರಾಸುಗಳಿಗೆ ವಿಷ ಉಣ ಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಲಕ್ಷಾಂತರ ರೂ. ಬೆಲೆಬಾಳುವ ಈ ಎತ್ತುಗಳನ್ನು ಯಾರು, ಯಾವ ಕಾರಣಕ್ಕೆ ಮಾಡಿ, ಇಲ್ಲಿ ತಂದು ಬಿಸಾಡಿದ್ದಾರೆಂಬ ಪ್ರಶ್ನೆ ಎದ್ದಿದೆ.

ಅಂತ್ಯ ಸಂಸ್ಕಾರ: ದೇವರೆಂದು ರೈತರು ಪೂಜಿಸುವ ಎತ್ತುಗಳನ್ನು ಅಮಾನುಷವಾಗಿ ಹತ್ಯೆ ಮಾಡಿ ಬಿಸಾಡಿರುವುದನ್ನು ಕಂಡು ರೈತರು ಮರುಕ ಪಟ್ಟರಲ್ಲದೆ, ಹಂಪಾಪುರ, ಉಪ್ಪರಕನ ಹಳ್ಳಿ, ಬಿಳಿದೇಗಲು, ಗಂಟೆಗೌಡನಹಳ್ಳಿ ಮೊದಲಾದ ಗ್ರಾಮಗಳ ರೈತರು ಅಂತ್ಯ ಸಂಸ್ಕಾರಕ್ಕೆ ತಾವೇ ಹಣ ಸಂಗ್ರಹಿಸಿದರು. ಅಲ್ಲದೇ ರಸ್ತೆಯಲ್ಲಿ ಹೋಗು ತ್ತಿದ್ದ ಜನತೆ ಕೂಡ ಉದಾರವಾಗಿ ದೇಣ ಗೆ ನೀಡಿದರು. 50 ಸಾವಿರಕ್ಕೂ ಅಧಿಕ ಹಣ ಸಂಗ್ರ ಹಿಸಿ ಜೆಸಿಬಿ ಮೂಲಕ ಎತ್ತುಗಳ ಮೃತದೇಹ ಗಳನ್ನು ಟ್ರಾಕ್ಟರ್‍ಗೆ ಹಾಕಿಕೊಂಡು ಹೂವಿನಿಂದ ಅಲಂಕರಿಸಿ ಮೆರವಣ ಗೆ ಮಾಡಿದರು.

ಬಳಿಕ ರಸ್ತೆಯಲ್ಲಿ ಬದಿಯಲ್ಲೇ ಗುಂಡಿ ತೆಗೆದು ಎಲ್ಲ ರೀತಿಯ ವಿಧಿ ವಿಧಾನಗಳನ್ನು ನೆರವೇರಿಸಿ, ಅಂತ್ಯ ಸಂಸ್ಕಾರ ಮಾಡಿದರು. 11ನೇ ದಿನ ಪುಣ್ಯತಿಥಿ ಜತೆಗೆ, ಸ್ಮಾರಕ ನಿರ್ಮಾಣ ಮಾಡುವುದಕ್ಕೂ ಈ ಭಾಗದ ರೈತರು ನಿರ್ಧರಿಸಿದ್ದಾರೆ. ಎತ್ತುಗಳ ಮೃತದೇಹ ಗಳನ್ನು ತಂದು ಹಾಕಿರುವ ಸಂಬಂಧ ಕೆರೆಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎತ್ತುಗಳು ಕಳವು ಆಗಿರುವ ಬಗ್ಗೆ ಎಲ್ಲಿಯಾದರೂ ದೂರು ದಾಖಲಾಗಿದೆಯೇ ಎಂಬುದರತ್ತ ಗಮನ ಹರಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Translate »