ಬೈಕ್‍ನಿಂದ ಬಿದ್ದು ಸವಾರ ಸಾವು
ಮಂಡ್ಯ

ಬೈಕ್‍ನಿಂದ ಬಿದ್ದು ಸವಾರ ಸಾವು

May 31, 2018

ಮಂಡ್ಯ: ಬೈಕ್‍ನಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದೇಗೌಡ ಎಂಬುವರ ಪುತ್ರ ಶಿವರಾಮು(35) ಮೃತಪಟ್ಟ ವರು. ಮಂಗಳವಾರ ರಾತ್ರಿ 8 ಗಂಟೆಯಲ್ಲಿ ಶಿವರಾಮು ಅವರು ತಮ್ಮ ಬೈಕ್‍ನಲ್ಲಿ ಆಲದಹಳ್ಳಿ ಗ್ರಾಮ ದಿಂದ ಹಿಟ್ಟನಹಳ್ಳಿಕೊಪ್ಪಲು ಗ್ರಾಮಕ್ಕೆ ತೆರಳುತ್ತಿದ್ದರು.

ಈ ಸಂದರ್ಭ ಮಾರ್ಗ ಮಧ್ಯೆ ಬೈಕ್‍ನಿಂದ ಆಯತಪ್ಪಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿ ದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ.

Translate »