ಮಳೆಗೆ ಕೊಡಗಿನಲ್ಲೂ ಜನ ತತ್ತರ; ಗೋಡೆ ಕುಸಿತ
ಕೊಡಗು

ಮಳೆಗೆ ಕೊಡಗಿನಲ್ಲೂ ಜನ ತತ್ತರ; ಗೋಡೆ ಕುಸಿತ

May 31, 2018

ಮಡಿಕೇರಿ: ಮುಂಗಾರು ಪ್ರವೇಶದಿಂದ ಕರಾವಳಿ ಮುಳುಗಿದ ಬೆನ್ನಲ್ಲೆ ಕರುನಾಡ ಕಾಶ್ಮೀರ ಮಡಿಕೇರಿ ಯಲ್ಲೂ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜನ ತತ್ತರಗೊಂಡಿದ್ದಾರೆ.

ಮನೆಯೊಂದರ ಭಾರೀ ತಡೆಗೋಡೆ ಕುಸಿದು ಬಿದ್ದಿದ್ದರೆ, ಮತ್ತೊಂದು ಮನೆಯ ಗೋಡೆಗೆ ಹಾನಿಯಾಗಿದೆ. ಸುಬ್ರಹ್ಮಣ್ಯ ನಗರದ ನಿವಾಸಿ ಪರಮೇಶ್ವರಪ್ಪ ಎಂಬುವರ ಮನೆಯ ಮುಂಭಾಗದ ತಡೆಗೋಡೆ ರಾತ್ರಿ 1.30ರ ಸಮಯದಲ್ಲಿ ಕುಸಿದ ಬಿದ್ದಿದೆ. ಪರಿ ಣಾಮ ತಡೆಗೋಡೆಯ ಮುಂಭಾಗದ ಮನೆ ಯೊಂದರ, ಕಾಂಪೌಂಡ್‍ಗೆ ಹಾನಿಯಾಗಿದ್ದು ಅಂದಾಜು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಪುಟಾಣ ನಗರ ಸಮೀ ಪದ ಕೊಡವ ರುದ್ರ ಭೂಮಿ ಪಕ್ಕದಲ್ಲಿ ಭಾರೀ ಮಳೆಗೆ ಬರೆ ಕುಸಿದು ಮುಮ್ತಾಜ್ ಅನ್ವರ್ ಎಂಬುವರ ಮನೆಯ ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ. ರಾತ್ರಿ ಮನೆಯಲ್ಲಿ ಮುಮ್ತಾಜ್ ಒಬ್ಬರೇ ಮಲಗಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತು ತಪ್ಪಿದಂತಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮಡಿಕೇರಿ ನಗರಸಭೆ ಪೌರಾಯುಕ್ತರು ಮತ್ತು ನಗರ ಸಭೆ ಸಿಬ್ಬಂದಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಡವ ಸಮಾಜದವರು ರುದ್ರಭೂಮಿಗೆ ತಡೆಗೋಡೆ ನಿರ್ಮಿಸಲು ಮಣ್ಣು ತೆಗೆದಿದ್ದ ರಿಂದ ಈ ಘಟನೆ ಸಂಭವಿ ಸಿದೆ ಎಂದು ಮುಮ್ತಾಜ್ ಅನ್ವರ್ ಆರೋಪಿ ಸಿದ್ದಾರೆ. ಇದ ರಿಂದ ಮಡಿಕೇರಿ ಕೊಡವ ಸಮಾಜ ಆಡಳಿತ ಮಂಡಳಿ ಸದಸ್ಯರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮಣ್ಣು ತೆಗೆದ ಸ್ಥಳಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಲ್ಲದೆ, ಮನೆ ಹಾನಿಗೆ ನಷ್ಟ ಪರಿಹಾರ ನೀಡುವುದಾಗಿ ಕೊಡವ ಸಮಾಜ ಪದಾಧಿಕಾರಿಗಳು ಭರವಸೆ ನೀಡಿದರು. ಈ ಸಂದರ್ಭ ಮಡಿಕೇರಿ ಕೊಡವ ಮಕ್ಕಡ ಕೂಟದ ಬೊಳ್ಳಜೀರ ಅಯ್ಯಪ್ಪ ಸೇರಿ ದಂತೆ ಪ್ರಮುಖರು ಹಾಜರಿದ್ದರು.

ಗೋಣಿಕೊಪ್ಪಲು ವರದಿ: ಗೋಣಿಕೊಪ್ಪ ಸಮೀಪದ ಅರುವತೋಕ್ಲು ಗ್ರಾಪಂ ವ್ಯಾಪ್ತಿಯ ಪಿಹೆಚ್‍ಎಸ್ ಕಾಲೋನಿ ಬಳಿ ಇರುವ ಕಾಫಿ ಮಂಡಳಿಯ ಕಾರ್ಮಿಕರ ಲೈನ್ ಮನೆಯ ಮೇಲೆ ಭಾರಿ ಗಾತ್ರದ ಮರ ಉರುಳಿದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭ ವಿಸಿರುವುದಿಲ್ಲ. ಮಂಗಳವಾರ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಬೃಹತ್ ಗಾತ್ರದ ಕಾಡು ಮರವು ಉರುಳಿ ಬಿದ್ದಿದ್ದು ಮನೆಯಲ್ಲಿ ಯಾರು ಇಲ್ಲದಿರುವುದರಿಂದ ದೊಡ್ಡ ಅನಾಹುತವು ತಪ್ಪಿದಂತಾಗಿದೆ. ಮನೆಯ ಹೊರ ಭಾಗ ದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕೂಡ ಜಖಂ ಗೊಂಡಿದ್ದು, ಮನೆಯಲ್ಲಿದ್ದ ಸಾಮಾಗ್ರಿಗಳು ಸಂಪೂರ್ಣ ಹಾಳಾಗಿದೆ. ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಈ ಹಿಂದೆ ಹಲವು ಬಾರಿ ಲಿಖಿತ ಮನವಿ ಮೂಲಕ ದೂರು ಸಲ್ಲಿಸಿದ್ದರು. ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರತಿಭಾ ಯುವಕ ಸಂಘ ದೂರಿದೆ.

ಹುದಿಕೇರಿ-ಬಿರುನಾಣ ಸಂಪರ್ಕ ಕಡಿತ

ಗೋಣಿಕೊಪ್ಪಲು: ಹುದಿ ಕೇರಿಯಿಂದ ಬಿರುನಾಣ ಗೆ ಸಂಪರ್ಕ ಬೆಸೆಯಲು ಹೈಸೊಡ್ಲೂರುವಿನಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸೇತುವ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಮಂಗಳ ವಾರ ಸುರಿದ ಮಳೆಯಿಂದಾಗಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದ ರಿಂದಾಗಿ ಬಾಡಗರಕೇರಿ, ಪೊರಾಡ್, ಬಿರುನಾಣ , ಪರಕಟಗೇರಿ, ಪೂಕಳಕ್ಕೆ ಸಂಪರ್ಕ ಬೆಸೆಯಲು ಟಿ. ಶೆಟ್ಟಿಗೇರಿ ಮಾರ್ಗವನ್ನು ಅನುಸರಿಸಬೇಕಿದೆ.

Translate »