ಪೊಲೀಸ್ ಪೇದೆ ಮೇಲೆ ಹಲ್ಲೆ: ಆಟೋ ಚಾಲಕನ ಬಂಧನ
ಮೈಸೂರು

ಪೊಲೀಸ್ ಪೇದೆ ಮೇಲೆ ಹಲ್ಲೆ: ಆಟೋ ಚಾಲಕನ ಬಂಧನ

November 17, 2019

ಮೈಸೂರು, ನ.16(ಎಸ್‍ಪಿಎನ್)-ಕರ್ತವ್ಯ ನಿರತ ಸಂಚಾರಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಟೋ ಚಾಲಕನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಆಟೋ ಚಾಲಕ ಮಹೇಶ್ ಬಂಧಿತ ಆರೋಪಿ. ಪ್ರಭುಸ್ವಾಮಿ ಹಲ್ಲೆಗೊಳಗಾದ ಸಂಚಾರ ಪೊಲೀಸ್ ಪೇದೆ. ನ.15ರಂದು ಸಂಜೆ ಮೈಸೂರಿನ ಗಾಂಧಿ ವೃತ್ತದ ಬಳಿ ನೋ ಪಾರ್ಕಿಂಗ್‍ನಲ್ಲಿ ಆಟೋ ಪಾರ್ಕ್ ಮಾಡಿದ್ದ ಚಾಲಕ ಮಹೇಶ್‍ನನ್ನು, ಸಂಚಾರ ಪೇದೆ ಪ್ರಭುಸ್ವಾಮಿ ದಾಖಲಾತಿ ತೋರಿಸುವಂತೆ ಕೇಳಿದ್ದಾರೆ.

ಇದರಿಂದ ಮಹೇಶ್ ಏಕಾಏಕಿ ರೊಚ್ಚಿ ಗೆದ್ದು, ಪೇದೆ ಪ್ರಭುಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಕಾರ್ಯ ಪ್ರವೃತ್ತರಾದ ಪ್ರಭುಸ್ವಾಮಿ ಹಾಗೂ ಇತರೆ ಸಿಬ್ಬಂದಿ ಮಹೇಶ್‍ನನ್ನು ಲಷ್ಕರ್ ಠಾಣೆಗೆ ಕರೆತಂದು ಕರ್ತವ್ಯಕ್ಕೆ ಅಡ್ಡಿ ಹಾಗೂ ಇತರೆ ಆರೋಪದ ಮೇಲೆ ಐಪಿಸಿ ಸೆಕ್ಷನ್ 353, 504, 506, 323 ಕಲಂನಡಿ ದೂರು ದಾಖಲಿಸಿದ್ದಾರೆ.

Translate »