ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳ ಕಾಮಗಾರಿಗೆ ಶಾಸಕರಿಂದಲೇ ತಡೆ
ಮೈಸೂರು

ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳ ಕಾಮಗಾರಿಗೆ ಶಾಸಕರಿಂದಲೇ ತಡೆ

November 17, 2019

ಮೈಸೂರು,ನ.16(ಪಿಎಂ)-ತಾವು ಶಾಸಕರಾಗಿದ್ದ ಅವಧಿ ಯಲ್ಲಿ ಕೊಳಚೆ ನಿರ್ಮೂ ಲನಾ ಮಂಡಳಿಯಿಂದ ಮಂಜೂರಾದ 5,296 ಮನೆಗಳ ಕಾಮಗಾರಿ ಆರಂಭವಾಗದಂತೆ ಹಾಲಿ ಶಾಸಕ ಎಸ್.ಎ.ರಾಮ ದಾಸ್ ದುರುದ್ದೇಶದಿಂದ ತಡೆಯೊಡ್ಡಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸತತ 4 ವರ್ಷ ಗಳು ಶ್ರಮವಹಿಸಿ ಮುಡಾದಿಂದ ಜಮೀನು ಪಡೆದು ಮಳಲವಾಡಿಯಲ್ಲಿ 1,344, ವಿಶ್ವೇ ಶ್ವರನಗರದಲ್ಲಿ 868 ಮನೆಗಳು ಸೇರಿದಂತೆ ಒಟ್ಟು 2,212 ಮನೆಗಳನ್ನು ನಿರ್ಮಿಸಲು ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಣ ಬಿಡುಗಡೆ ಮಾಡಿಸಿದ್ದೇನೆ. ಅಲ್ಲದೇ ಈ ಕಾಮಗಾರಿಗೆ ಟೆಂಡರ್ ಕೂಡ ಆಗಿದೆ. ಆದರೆ ಹಾಲಿ ಶಾಸಕ ಎಸ್.ಎ.ರಾಮದಾಸ್ ಗುತ್ತಿಗೆದಾರರು ಕೆಲಸ ಮಾಡದಂತೆ ತಡೆ ಯುತ್ತಿದ್ದಾರೆ ಎಂದು ಆಪಾದಿಸಿದರು.

ರಾಜೀವ್ ಗಾಂಧಿ ವಸತಿ ಯೋಜನೆ ಯಡಿ ಲಲಿತಾದ್ರಿಪುರದಲ್ಲಿ 1,440 ಹಾಗೂ ಗೊರೂರಿನಲ್ಲಿ 1,644 ಮನೆಗಳ ನಿರ್ಮಾಣ ಸೇರಿದಂತೆ ಒಟ್ಟು 3,084 ಮನೆಗಳ ನಿರ್ಮಾಣಕ್ಕಾಗಿ 18 ಕೋಟಿ ರೂ. ಒಂದೂ ವರೆ ವರ್ಷದ ಹಿಂದೆಯೇ ಮಂಜೂರಾ ಗಿದೆ. ಆದರೆ ಹಾಲಿ ಶಾಸಕರು ತಡೆ ಹಾಕಿ ರುವ ಹಿನ್ನೆಲೆಯಲ್ಲಿ ಮಂಜೂರಾದ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲೇ ಕೊಳೆಯು ವಂತಾಗಿದೆ ಎಂದು ದೂರಿದರು. ಇಲ್ಲಿ `ಜಿ+2’ ಮಾದರಿ ಬದಲಿಗೆ `ಜಿ+14’ ಮಾದರಿ ಮನೆ ಕಟ್ಟಲಾಗುವುದು ಎಂದು ಸಬೂಬು ಹೇಳುತ್ತಿದ್ದಾರೆ. `ಜಿ+14’ ಮಾದರಿ ಮನೆ ಗಳ ಸಂಕೀರ್ಣ ನಿರ್ಮಿಸಿದರೆ ಸರ್ಕಾರ ಕೊಡುವ ಅನುದಾನದಲ್ಲಿ ಲಿಫ್ಟ್ ನಿರ್ಮಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, `ಜಿ+2’ ಮಾದರಿ ಕಟ್ಟಡದಲ್ಲೇ ಫಲಾನು ಭವಿಗಳಿಗೆ ಮನೆಗಳನ್ನು ನಿರ್ಮಿಸಿಕೊಡ ಬೇಕು ಎಂದು ಒತ್ತಾಯಿಸಿದರು. ಪಾಲಿಕೆ ಸದಸ್ಯರಾದ ಗೋಪಿ, ಶೋಭಾ ಸುನೀಲ್, ಮಾಜಿ ಸದಸ್ಯ ಸುನೀಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »