ಕಚೇರಿಯೊಳಗೆ ಎಡಗಾಲಿಟ್ಟ ವಕೀಲರನ್ನ ವಾಪಸ್ ಕರೆದ ಹೆಚ್.ಡಿ.ರೇವಣ್ಣರಿಂದ ವಾಸ್ತು ಶಾಸ್ತ್ರ ಬೋಧನೆ..!
ಮೈಸೂರು

ಕಚೇರಿಯೊಳಗೆ ಎಡಗಾಲಿಟ್ಟ ವಕೀಲರನ್ನ ವಾಪಸ್ ಕರೆದ ಹೆಚ್.ಡಿ.ರೇವಣ್ಣರಿಂದ ವಾಸ್ತು ಶಾಸ್ತ್ರ ಬೋಧನೆ..!

November 17, 2019

ಮೈಸೂರು: ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ದೇವರಳ್ಳಿ ನಾಮ ಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಾಸ್ತು ಶಾಸ್ತ್ರಗಳ ಬಗ್ಗೆ ನೀತಿ ಬೋಧನೆ ಮಾಡಿದ ಪ್ರಸಂಗ ನಡೆದಿದೆ. ನಾಮಪತ್ರ ಸಲ್ಲಿಕೆ ವೇಳೆ ವಕೀಲರೊಬ್ಬರು ಕಚೇರಿಯೊಳಗೆ ಪ್ರವೇ ಶಿಸಿದ್ದಾರೆ, ಪ್ರವೇಶಿಸುವಾಗ ಎಡಗಾಲನ್ನು ಮೊದ ಲಿಗೆ ಇಟ್ಟ ವಕೀಲರನ್ನು ವಾಪಸ್ ಕರೆದ ರೇವಣ್ಣ ಬಲಗಾಲಿಟ್ಟು ಒಳಗೆ ಹೋಗಬೇಕು ಅಂತ ಬುದ್ದಿ ಹೇಳಿ ಮತ್ತೆ ಕಳುಹಿಸಿದ್ದಾರೆ. ಈ ವೇಳೆ ಅಭ್ಯರ್ಥಿ ಸೋಮಶೇಖರ್, ರೇವಣ್ಣ ಕಾಲಿಗೆ ನಮಸ್ಕರಿಸಿ ಕಚೇರಿಯೊಳಗೆ ಪ್ರವೇಶಿಸಿದ್ದಾರೆ.

Translate »