ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ವೇಳೆ ಹೆಲ್ತ್ ಇನ್ಸ್‍ಪೆಕ್ಟರ್ ಮೇಲೆ ಹಲ್ಲೆ
ಮೈಸೂರು

ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ವೇಳೆ ಹೆಲ್ತ್ ಇನ್ಸ್‍ಪೆಕ್ಟರ್ ಮೇಲೆ ಹಲ್ಲೆ

October 29, 2019

ಮೈಸೂರು, ಅ.28(ಎಸ್‍ಪಿಎನ್)-ನಿಷೇಧಿತ ಪ್ಲಾಸ್ಟಿಕ್ ಲೋಟ ಮತ್ತು ಕ್ಯಾರಿಬ್ಯಾಗ್‍ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ ಹೆಲ್ತ್ ಇನ್ಸ್‍ಪೆಕ್ಟರ್ ಮೇಲೆ ಪನ್ಸಾರಿ ಅಂಗಡಿ ಸಿಬ್ಬಂದಿ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ವಾರ್ಡ್ ನಂ.26ರಲ್ಲಿ ನಡೆದಿದೆ. ಮೈಸೂರು ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್‍ಪೆಕ್ಟರ್ ಅಶ್ವಥ್ ಎಂಬು ವವರೇ ಹಲ್ಲೆಗೊಳಗಾದವರು.

ಪನ್ಸಾರಿ ಅಂಗಡಿಯ ಸಿಬ್ಬಂದಿ ಸೈಫುಲ್ಲಾ ಖಾನ್ ಹಲ್ಲೆ ಮಾಡಿದ ವ್ಯಕ್ತಿ. ಅ.25ರಂದು ಬೆಳಿಗ್ಗೆ 8.30ರ ವೇಳೆಗೆ ವಾರ್ಡ್ ನಂ.26ರ ವ್ಯಾಪ್ತಿಯಲ್ಲಿ ಕಾರ್ಯಾ ಚರಣೆ ನಡೆಸಿ, ಪ್ಲಾಸ್ಟಿಕ್ ಲೋಟ ಮತ್ತು ಕ್ಯಾರಿ ಬ್ಯಾಗ್ (ತಾತ್ಕಾಲಿಕ ಉದ್ದಿಮೆ ಸಂ:101)ಗಳನ್ನು ಪನ್ಸಾರಿ ಅಂಗಡಿಯಲ್ಲಿ ವಶಪಡಿಸಿಕೊಳ್ಳು ತ್ತಿದ್ದ ತಮ್ಮ ಮೇಲೆ ಸೈಫುಲ್ಲಾ ಖಾನ್ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹೆಲ್ತ್ ಇನ್ಸ್‍ಪೆಕ್ಟರ್ ಅಶ್ವಥ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಿಸಿದ್ದಾರೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »